Endu kambeno raghavendrana

Composer : Shrikara vittala

By Smt.Shubhalakshmi Rao

ಎಂದು ಕಾಂಬೆನೊ ರಾಘವೇಂದ್ರನ,
ತಂದೆ ವರಹಜ ವಾಸನ |ಪ|

ಬಂದ ಭಕುತರಿಗ್ ವರವನ,
ನೀಡುವನ, ರಕ್ಷಿಸುವನ |ಅ.ಪ|

ಮಂಚಾಲೆಯ ಬೃಂದಾವನದಲಿ,
ಇರುವನ ತಪಗರೆವನ|
ಪಂಚರೂಪವ ಹರಿಯನಾಮವ,
ನಿತ್ಯದಲಿ ಭಜಿಸುವವನ [೧]

ಸರ್ವಕಾಲದಿ ನೀನೆ ಗತಿಯೆಂದು
ಭಕುತರನು ಪೊರೆಯುವವನ |
ಸಾರ್ವಭೌಮನೆ ಪರಿಮಳಾರ್ಯನೇ
ಕಾಮಿತಾರ್ಥವ ಕೊಡುವನ [೨]

ಛಂದದಿಂದಲಿ ರಥದಲಿ,
ನಿತ್ಯ ಮೆರೆವನ ವರವೀವನ |
ನಂದ ಶ್ರೀಕರವಿಠಲನ,
ಮನದಲ್ಲಿ ಧ್ಯಾನಿಸುವನ [೩]


eMdu kAMbeno rAGavEMdrana,
taMde varahaja vAsana |pa|

baMda Bakutarig varavana,
nIDuvana, rakShisuvana |a.pa|

maMcAleya bRuMdAvanadali,
iruvana tapagarevana|
paMcarUpava hariyanAmava,
nityadali Bajisuvavana [1]

sarvakAladi nIne gatiyeMdu
Bakutaranu poreyuvavana |
sArvaBaumane parimaLAryanE
kAmitArthava koDuvana [2]

CaMdadiMdali rathadali,
nitya merevana varavIvana |
naMda SrIkaraviThalana,
manadalli dhyAnisuvana [3]

Leave a Reply

Your email address will not be published. Required fields are marked *

You might also like

error: Content is protected !!