Composer : Shri Vittalesha
ಬಂದ ಚಂದ್ರಾ ಚಂದದಿಂದ ಬಂದ ನೋಡೈ
ದೇವ ವೃಂದಾವನದಿಂದ ಮೆರೆದು ಬಂದ ನೋಡೈ [ಪ]
ರಾಘವೇಂದ್ರನೆಂಬ ಚಂದ್ರ ಬಂದ ನೋಡೈ
ರಾಘವೇಂದ್ರನಂಘ್ರಿ ಧ್ಯಾನದಿಂದ ನೋಡೈ [೧]
ಯೋಗಕೀರ್ತಿ ಕಾಂತಿಯಿಂದ ಬಂದ ನೋಡೈ
ತ್ಯಾಗರಾಜ ರಥವನೇರಿ ಬಂದ ನೋಡೈ [೨]
ಅವಿದು ಕಂದನೆಂದು ಕರುಣದಿಂದ ನೋಡೈ
ಜವದಿ ವಿಠಲೇಶನೊಲುಮೆ ತಂದೆ ನೀದೈ [೩]
baMda caMdrA caMdadiMda baMda nODai
dEva vRuMdAvanadiMda meredu baMda nODai [pa]
rAGavEMdraneMba caMdra baMda nODai
rAGavEMdranaMGri dhyAnadiMda nODai [1]
yOgakIrti kAMtiyiMda baMda nODai
tyAgarAja rathavanEri baMda nODai [2]
avidu kaMdaneMdu karuNadiMda nODai
javadi viThalESanolume taMde nIdai [3]
Leave a Reply