Vrundavanadali Rajipa

Composer : Shri Tande Shripati vittala

By Smt.Shubhalakshmi Rao

ವೃಂದಾವನದಲಿ ರಾಜಿಪ ಯತಿವರನ್ಯಾರೇ ಪೇಳಮ್ಮಯ್ಯ || ಪ ||
ಇಂದಿರೆಯರಸನ ಚಂದದಿ ಭಜಿಸುವ
ಕುಂದುರಹಿತ ರಾಘವೇಂದ್ರ ಕಾಣಮ್ಮ || ಅ.ಪ ||

ಮಂತ್ರಾಲಯಕೃತ ಮಂದಿರ ನೆನಿಸುವನ್ಯಾರೇ ಪೇಳಮ್ಮಯ್ಯ
ತಂತ್ರದೀಪಿಕಾ ಗ್ರಂಥ ಕರ್ತನ್ಯಾರೇ ಪೇಳಮ್ಮಯ್ಯ
ಕಂತುಪಿತನ ಸತ್ಪಂಥದಿ ಭಜಿಸುವನ್ಯಾರೇ ಪೇಳಮ್ಮಯ್ಯ
ಚಿಂತಿತ ಫಲದ ದುರಂತ ಶಕ್ತ ಜಯವಂತ ನೀತ ಅಘ ಶಾಂತ ಕಾಣಮ್ಮ || ೧ ||

ಶ್ರೀಸುಧೀಂದ್ರ ಕರ ಕಮಲಜನೆನಿಸುವನ್ಯಾರೇ ಪೇಳಮ್ಮಯ್ಯ
ತಾ ಸ್ವಪ್ನದಿ ಮಂತ್ರಾಕ್ಷತೆ ಕೊಡುತಿಹನ್ಯಾರೇ ಪೇಳಮ್ಮಯ್ಯ
ಆಶುಗ ಮನಮತ ಸ್ಥಾಪಕ ನೆನಿಸುವನ್ಯಾರೇ ಪೇಳಮ್ಮಯ್ಯ
ಭಾಸುರ ಜ್ಞಾನ ವಿಶೇಷವಾಗಿ ಹರಿದಾಸ್ಯವ ಪಡೆದ ಯತೀಶ ಕಾಣಮ್ಮ || ೨ ||

ಧಾರುಣಿ ಪತಿಸುತೆ ತೀರದಿ ನೆಲೆಸಿಹನ್ಯಾರೇ ಪೇಳಮ್ಮಯ್ಯ
ಸಾರಿದ ಭಜಕರ ಬಾರಿಗೆ ಪೊರೆಯುವನ್ಯಾರೇ ಪೇಳಮ್ಮಯ್ಯ
ಕಾರುಣ್ಯ ನಿಧಿ ಅಪಾರ ಮಹಿಮನಿವನ್ಯಾರೇ ಪೇಳಮ್ಮಯ್ಯ
ನಾರಾಯಣ ತಂದೆಶ್ರೀಪತಿವಿಠ್ಠಲನ ಆರಾಧಿಪ ರಾಘವೇಂದ್ರ ಕಾಣಮ್ಮ || ೩ ||


vRuMdAvanadali rAjipa yativaranyArE pELammayya || pa ||
iMdireyarasana caMdadi Bajisuva
kuMdurahita rAGavEMdra kANamma || a.pa ||

maMtrAlayakRuta maMdira nenisuvanyArE pELammayya
taMtradIpikA graMtha kartanyArE pELammayya
kaMtupitana satpaMthadi BajisuvanyArE pELammayya
ciMtita Palada duraMta Sakta jayavaMta nIta aGa SAMta kANamma || 1 ||

SrIsudhIMdra kara kamalajanenisuvanyArE pELammayya
tA svapnadi maMtrAkShate koDutihanyArE pELammayya
ASuga manamata sthApaka nenisuvanyArE pELammayya
BAsura j~jAna viSEShavAgi haridAsyava paDeda yatISa kANamma || 2 ||

dhAruNi patisute tIradi nelesihanyArE pELammayya
sArida Bajakara bArige poreyuvanyArE pELammayya
kAruNya nidhi apAra mahimanivanyArE pELammayya
nArAyaNa taMdeSrIpativiThThalana ArAdhipa rAGavEMdra kANamma || 3 ||

Leave a Reply

Your email address will not be published. Required fields are marked *

You might also like

error: Content is protected !!