Namisuve guruve ninage

Composer : Shri Tande Purandara dasaru

By Smt.Shubhalakshmi Rao

ನಮಿಸುವೆ ಗುರುವೆ ನಿನಗೆ ನಮಿಸುವೆ [ಪ]

ನಮಿಸುವೆ ಗುರು ರಾಘವೇಂದ್ರ ಎನ್ನ
ಕ್ಷಮಿಸ ಬಾರಯ್ಯ ನೀನೀಗ ಅಹಂ-
ಮಮತೆ ಹಿಂಗದು ಸಮಚಿತ್ತ ಬರದು
ವಿಮಲಜ್ಞಾನ ಹೇ ಕರುಣಿಸಬೇಕಯ್ಯ [ಅ.ಪ]

ತುಂಗಾತೀರದಲ್ಲಿವಾಸ ಬಹು
ಮಂಗಳವಯ್ಯ ಪ್ರದೇಶ ನಮ್ಮ
ರಂಗನದಾಸ ವಿಶೇಷ ನಿನ್ನ
ಸಂಗಡ ಮಾಡೋರುವಾಸ ||ಆಹ||
ಕಂಗೆಟ್ಟು ನಿನ್ನಲಿ ಬರುವ ಭಕುತರಿಗೆ
ತುಂಗಸಂಕಟ ಕಳೆದು ಮಂಗಳ ನೀಡುವ (೧)

ಕರೆದಾಗಲೆ ನೀನು ಬರುವಿ ಬಿರುದು
ಕರುಣನೆಂದು ಧರಿಸಿರುವಿ ನಿನ್ನ
ಚರಣಶರಣರನು ಪೊರೆವಿ ಬಂದು
ಧರೆಯೊಳು ಅಲ್ಲಲ್ಲೆ ಇರುವಿ ||ಆಹ||
ವರಜಟೆಗಳಪೊತ್ತು ಬದರಿಯ ಮನೆಮಾಡಿ
ನಿರುತವು ಶೋಭಿಪ ಗರುಡವಾಹನದಾಸ (೨)

ಮಧ್ವಮತವೆಂಬ ಅಭ್ಧಿಯಲಿ
ಉದ್ಭವಿಸಿದ ದಿವ್ಯಜ್ಯೋತಿ ಶುದ್ಧ
ಸತ್ತ್ವ ಗುಣಗಳ ರಾಶಿ ಪರ-
ತತ್ತ್ವ ವಿಷಯ ಉಪದೇಶಿ ||ಆಹ||
ಅದ್ಭುತಚರಿತನೆ ಆಪಾರಮಹಿಮನೆ
ವಿಶ್ವನಾಮಕ ತಂದೆಪುರಂದರವಿಠಲನದಾಸ (೩)


namisuve guruve ninage namisuve [pa]

namisuve guru rAGavEMdra enna
kShamisa bArayya nInIga ahaM-
mamate hiMgadu samacitta baradu
vimalaj~jAna hE karuNisabEkayya [a.pa]

tuMgAtIradallivAsa bahu
maMgaLavayya pradESa namma
raMganadAsa viSESha ninna
saMgaDa mADOruvAsa ||Aha||
kaMgeTTu ninnali baruva Bakutarige
tuMgasaMkaTa kaLedu maMgaLa nIDuva (1)

karedAgale nInu baruvi birudu
karuNaneMdu dharisiruvi ninna
caraNaSaraNaranu porevi baMdu
dhareyoLu allalle iruvi ||Aha||
varajaTegaLapottu badariya manemADi
nirutavu SOBipa garuDavAhanadAsa (2)

madhvamataveMba aBdhiyali
udBavisida divyajyOti Suddha
sattva guNagaLa rASi para-
tattva viShaya upadESi ||Aha||
adButacaritane ApAramahimane
viSvanAmaka taMdepuraMdaraviThalanadAsa (3)

Leave a Reply

Your email address will not be published. Required fields are marked *

You might also like

error: Content is protected !!