-
Namisuve guruve ninage
Composer : Shri Tande Purandara dasaru ನಮಿಸುವೆ ಗುರುವೆ ನಿನಗೆ ನಮಿಸುವೆ [ಪ] ನಮಿಸುವೆ ಗುರು ರಾಘವೇಂದ್ರ ಎನ್ನಕ್ಷಮಿಸ ಬಾರಯ್ಯ ನೀನೀಗ ಅಹಂ-ಮಮತೆ ಹಿಂಗದು ಸಮಚಿತ್ತ ಬರದುವಿಮಲಜ್ಞಾನ ಹೇ ಕರುಣಿಸಬೇಕಯ್ಯ [ಅ.ಪ] ತುಂಗಾತೀರದಲ್ಲಿವಾಸ ಬಹುಮಂಗಳವಯ್ಯ ಪ್ರದೇಶ ನಮ್ಮರಂಗನದಾಸ ವಿಶೇಷ ನಿನ್ನಸಂಗಡ ಮಾಡೋರುವಾಸ ||ಆಹ||ಕಂಗೆಟ್ಟು ನಿನ್ನಲಿ ಬರುವ ಭಕುತರಿಗೆತುಂಗಸಂಕಟ ಕಳೆದು ಮಂಗಳ ನೀಡುವ (೧) ಕರೆದಾಗಲೆ ನೀನು ಬರುವಿ ಬಿರುದುಕರುಣನೆಂದು ಧರಿಸಿರುವಿ ನಿನ್ನಚರಣಶರಣರನು ಪೊರೆವಿ ಬಂದುಧರೆಯೊಳು ಅಲ್ಲಲ್ಲೆ ಇರುವಿ ||ಆಹ||ವರಜಟೆಗಳಪೊತ್ತು ಬದರಿಯ ಮನೆಮಾಡಿನಿರುತವು ಶೋಭಿಪ ಗರುಡವಾಹನದಾಸ (೨)…
