Eshtentend varnisali

Composer : Shri Varada Vittala

By Smt.Shubhalakshmi Rao

ಎಷ್ಟೆಂತೆಂದ್ವರಣಿಸಲಿ ಗುರುರಾಜನೇ [ಪ]

ಎಷ್ಟೆಂತೆಂದ್ವರಣಿಸ ಶ್ರೀಗುರುರಾಘವೇಂದ್ರ
ಕಷ್ಟಗಳ ಪರಿಹರಿಸಿ ಇಷ್ಟಾರ್ಥ ನೀಡುವರ [ಅ.ಪ]

ದೀನದಿಂದಲಿ ಬಂದ ನರರಿಗೆ, ನೀನೆ ಗತಿಯು ಎಂದು
ಘನ್ನ ಮಹಿಮನೇ ಕರುಣವ ನೀ ಮಾಡಿ |
ಹೀನ ಕರ್ಮದಿಂದ ದೂರ ಮಾಡಿಸುವಿಯೋ [೧]

ಅನುಪಮ ಸನ್ಮಹಿಮ ಮುನಿಕುಲ
ಕ್ಷಣ ಕ್ಷಣದೊಳು ಮಹಿಮ |
ಜ್ಞಾನಹೀನನಾಗಿ ನಾನಾ ಯೋನಿಯಚರಿಸಿ|
ಜ್ಞಾನವಿತ್ತು ಅನಘ ಪ್ರೇಮದಿ ಪೊರೆವರ [೨]

ಈತದಾತಾ ಯತಿಯೋ, ನಾಥನೋ |
ವಾತಾತ್ಮಜನ ದೂತನೋ |
ವಿತತ ಮಹಿಮ ನಮ್ಮ ವರದವಿಠಲನ |
ಆತುಮದೊಳು ತೋರಿ ರಕ್ಷಿಸಿ ಗುರುವರ [೩]


eShTeMteMdvaraNisali gururAjanE [pa]

eShTeMteMdvaraNisa SrIgururAGavEMdra
kaShTagaLa pariharisi iShTArtha nIDuvara [a.pa]

dInadiMdali baMda nararige, nIne gatiyu eMdu
Ganna mahimanE karuNava nI mADi |
hIna karmadiMda dUra mADisuviyO [1]

anupama sanmahima munikula
kShaNa kShaNadoLu mahima |
j~jAnahInanAgi nAnA yOniyacarisi|
j~jAnavittu anaGa prEmadi porevara [2]

ItadAtA yatiyO, nAthanO |
vAtAtmajana dUtanO |
vitata mahima namma varadaviThalana |
AtumadoLu tOri rakShisi guruvara [3]

Leave a Reply

Your email address will not be published. Required fields are marked *

You might also like

error: Content is protected !!