Composer : Shri Tande venkatesha vittala
ಗುರುರಾಜಾ ಪಾಲಿಸೋ ಎನ್ನ ಗುರುರಾಜ [ಪ]
ಗುರುರಾಜ ಪುರುಟಕಶ್ಯಪಜ ದಶ-
ಶಿರ ದಿತಿತನಯಾವರಜ ||ಅಹ||
ವರಬಹಲ್ಲೀಕ ಸದ್ಗುರು ವ್ಯಾಸ ಮಂಚಾಲಿ
ಪುರಧೀಶ ಪೊರೆಯನಿಶ ವರಹ ಸುತೇವಾಸ [ಅ.ಪ]
ಕರ್ಮಭುವಿಯ ಕುಂಭಕೋಣ ಕ್ಷೇತ್ರ ಧರ್ಮಾಶ್ರಯ
ವಂಶೋದ್ಧರಣ ಮಾಡಿ
ಉರ್ಮಿಳಾಪತಿ ಭ್ರಾತೃ ಚರಣ ಧ್ಯಾನ ಕರ್ಮ
ಮರ್ಮಾ ಸಕ್ತ ನಿಪುಣ ||ಅಹ||
ನಿರ್ಮಮದಿ ವಿದ್ಯುಕ್ತ ಧರ್ಮಾ ಚರಣೆಯ ಮಾಡಿ
ಪೇರ್ಮೆಯಿಂದಲಿ ಮೆರೆದೆ ದುರ್ಮಾಯಿ ಮತ ಕಾಲ (೧)
ಆರ್ತ ಭಕುತರನಾಶೀರ್ವದಿಸಿ ವಾಂಛಿತಾರ್ಥ
ವರಗಳನೆಲ್ಲ ಸಲಿಸೀ ನಂದ-ತೀರ್ಥ ಸಮಯಾಂಕಿತ
ಧರಿಸೀ ಧ್ಯಾನ ಕೀರ್ತನೆ ಗೈವರುಪಚರಿಸೀ ||ಅಹ||
ಪಾರ್ಥಸಾರಥಿ ಚರಣಾರ್ಥಿ ಪುಟ್ಟಿಸಿ ಜನ್ಮ
ಸಾರ್ಥಕಾಗುವ ಪುರುಷಾರ್ಥ ಪ್ರದನಾದೆ (೨)
ಬೃಂದಾವನ ಸದ್ಮವಾಸ ಭಕ್ತ ಬೃಂದ
ವಿನಮಿತ ಯತೀಶ ಗುಣ
ಬೃಂದ ಪ್ರಭಾ ಪಟಲ ಭಾಸ ವರಬೃಂದಾರಕ
ಮುನಿದಾಸ ||ಅಹ||
ಕುಂದು ನಿಂದೇ ನೋಡದಂಧ ಬಧಿರ ಮೂಗ
ವಂಧ್ಯೆಯರಿಷ್ಟ ನೂರೊಂದಾಗಿ ಸಲಿಸುವ (೩)
ಅನ್ಯ ಜನ್ಮಾರ್ಜಿತ ವಾದಾ ನಿಷ್ಟ ಪುಣ್ಯವ್ರಯಕೆ
ಯೋಚಿಸಿದ ಅಹಿಕ-
ವನ್ನು ಕೊಡುವೆ ಬಲ್ಲೆನಿದನೊಲ್ಲೆ ಬಿನ್ನಪ
ಕೇಳ್ವುದು ಅಗಾಧ ||ಅಹ||
ಮನ್ನಣೆ ಮನೆ ಧನದುನ್ನತಿ ಬೇಡೆ ಪ್ರ-
ಸನ್ನನಾಗಿ ಶ್ರೀವರನ್ನ ಭಕ್ತಿಯ ನೀಡೋ (೪)
ಜಾಣಕ ಲೌಕ ಪ್ರವೀಣನಾಗಿ ಪ್ರಾಣೇಶ
ದಯ ಸಂಗ್ರಹಣ ಮಾಡಿ
ತೂಣೀರಪಾಣಿ ಸತ್ಕರುಣಧಾರಿ ದ್ರೌಣಿಯೊಲ್
ಶಾಸ್ತ್ರ ಧುರೀಣ ||ಅಹ||
ವೀಣೆ ವೆಂಕಟ ವಿದ್ವತ್ ಶ್ರೇಣಿ ಚಿಂತಾಮಣಿ
ಕ್ಷೋಣಿ ದಿವಿಜ ಘೃಣಿ ಮುನಿಕುಲಾಂಬರ ದ್ಯುಮಣಿ (೫)
ಕ್ಲುಪ್ತ ಕಾಲದಿ ದೇಹವಿಟ್ಟು ಮುಂದೆ ಸಪ್ತ
ಶತವರ್ಷ ಭವ ಕಟ್ಟು ಬಿಡಿಸೆ
ಗುಪ್ತ ಗುಪ್ತಾಚರಣೆ ತೊಟ್ಟು ವಿಶ್ವ ವ್ಯಾಪ್ತೋಪಾಸನೆಗೆ
ಮನವಿಟ್ಟು ||ಅಹ||
ಪ್ರಾಪ್ತ ಕಾಲದಲ್ಲಿ ತಪ್ತ ಕಾಂಚನದಂತೆ
ದೀಪ್ತ ಬೃಂದಾವನ ವ್ಯಾಪ್ತನಾದೆಯೊ ದೇವಾ (೬)
ಜಯ ಜಯ ಗುರು ರಾಘವೇಂದ್ರ ಭವಭಯ
ತಾಪಹರ ತಾರಕೇಂದ್ರ ಮಂತ್ರಾ-ಲಯಧಾಮ
ಸಿರಿರಾಮಚಂದ್ರ ಧ್ಯಾನ ದಯದಿ ಪಾಲಿಸೊ
ಸುಯಮೀಂದ್ರ ||ಅಹ||
ವಿಯದ್ ಗಂಗಾಪಿತ ತಂದೆ ವೆಂಕಟೇಶವಿಠ್ಠಲನ
ದ್ವಯ ಪಾದಾರ್ಚಕ ನಿರಾಮಯನ ಮಾಡಿಸೊ ಎನ್ನ (೭)
gururAjA pAlisO enna gururAja [pa]
gururAja puruTakaSyapaja daSa-
Sira dititanayAvaraja ||aha||
varabahallIka sadguru vyAsa maMcAli
puradhISa poreyaniSa varaha sutEvAsa [a.pa]
karmaBuviya kuMBakONa kShEtra dharmASraya
vaMSOddharaNa mADi
Arta BakutaranASIrvadisi vAMCitArtha
varagaLanella salisI naMda-tIrtha samayAMkita
dharisI dhyAna kIrtane gaivarupacarisI ||aha||
pArthasArathi caraNArthi puTTisi janma
sArthakAguva puruShArtha pradanAde (2)
bRuMdAvana sadmavAsa Bakta bRuMda
vinamita yatISa guNa
bRuMda praBA paTala BAsa varabRuMdAraka
munidAsa ||aha||
kuMdu niMdE nODadaMdha badhira mUga
vaMdhyeyariShTa nUroMdAgi salisuva (3)
anya janmArjita vAdA niShTa puNyavrayake
yOcisida ahika-
vannu koDuve ballenidanolle binnapa
kELvudu agAdha ||aha||
mannaNe mane dhanadunnati bEDe pra-
sannanAgi SrIvaranna Baktiya nIDO (4)
jANaka lauka pravINanAgi prANESa
daya saMgrahaNa mADi
tUNIrapANi satkaruNadhAri drauNiyol
SAstra dhurINa ||aha||
veeNe veMkaTa vidvat SrENi ciMtAmaNi
kShONi divija GRuNi munikulAMbara dyumaNi (5)
klupta kAladi dEhaviTTu muMde sapta
SatavarSha Bava kaTTu biDise
gupta guptAcaraNe toTTu viSva vyAptOpAsanege
manaviTTu ||aha||
prApta kAladalli tapta kAMcanadaMte
dIpta bRuMdAvana vyAptanAdeyo dEvA (6)
jaya jaya guru rAGavEMdra BavaBaya
tApahara tArakEMdra maMtrA-layadhAma
sirirAmacaMdra dhyAna dayadi pAliso
suyamIMdra ||aha||
viyad gaMgApita taMde veMkaTESaviThThalana
dvaya pAdArcaka nirAmayana mADiso enna (7)
Leave a Reply