Ene yaro ninage

Composer : Shri Vadirajaru

By Smt.Shubhalakshmi Rao

ಎಣೆಯಾರೊ ನಿನಗೆ ಹನುಮಂತರಾಯ [ಪ]
ಎಣೆಯಾರೊ ನಿನಗೆ ತ್ರಿಭುವನದೊಳಗೆಲ್ಲ
ಪ್ರಣತ ಜನ ಮಂದಾರ ಪವನ ಸುಕುಮಾರ [ಅ.ಪ]

ಅಡಿಗಡಿಗೆ ರಾಮ ಪದಾಂಬುಜಕೆ ವಂದಿಸುತ
ನಡೆನಡೆದು ಮುದ್ರಿಕೆಯ ಪಡೆದು ಮುದದಿ |
ದಡದಡನೆ ಅಂಬುಧಿಯ ದಾಟಿ ಸೀತೆಗೆ ಗುರುತ
ಕೊಡುಕೊಡುತ ಕುಪ್ಪಳಿಸಿದಂಥ ಹನುಮಂತ [೧]

ಗರಗರನೆ ಪಲ್ಗಡಿದು ಕಲುಷ ದೈತ್ಯರನೆಲ್ಲ
ಚರಚರನೆ ಸೀಳಿ ಸಂಭ್ರಮದಿಂದಲಿ
ಬಿರಬಿರನೆ ಕಣ್ಬಿಡುತ ಬಿಂಕದಲಿ ಲಂಕೆಯನು
ಸುರಸುರನೆ ಬಾಲದಲಿ ಸುಟ್ಟ ರಣದಿಟ್ಟ [೨]

ಫಳಫಳನೆ ಆರ್ಭಟದಿಂದ ರಾವಣನ
ನಳನಳನೆ ಬೆಳೆದ ನಂದನವ ಕಿತ್ತು
ಖಳಖಳನೆ ನಗುತ ದಶ ಕಂದರನ ಗುದ್ದಿ ಬಂದೆ
ಭಳಿಭಳಿರೆ ಹಯವದನ ದಾಸ ನಿಸ್ಸೀಮ [೩]


eNeyAro ninage hanumaMtarAya [pa]
eNeyAro ninage triBuvanadoLagella
praNata jana maMdAra pavana sukumAra [a.pa]

aDigaDige rAma padAMbujake vaMdisuta
naDenaDedu mudrikeya paDedu mudadi |
daDadaDane aMbudhiya dATi sItege guruta
koDukoDuta kuppaLisidaMtha hanumaMta [1]

garagarane palgaDidu kaluSha daityaranella
caracarane sILi saMBramadiMdali
birabirane kaNbiDuta biMkadali laMkeyanu
surasurane bAladali suTTa raNadiTTa [2]

PaLaPaLane ArBaTadiMda rAvaNana
naLanaLane beLeda naMdanava kittu
KaLaKaLane naguta daSa kaMdarana guddi baMde
BaLiBaLire hayavadana dAsa nissIma [3]

Leave a Reply

Your email address will not be published. Required fields are marked *

You might also like

error: Content is protected !!