Composer : Shri Vadirajaru
ಭೀಮ ನಿಸ್ಸೀಮಮಹಿಮ ಅಗಣಿತ ಗುಣಸ್ತೋಮ
ಕಾಮಪಿತನ ಬಂಟ ನೆನೆವರಿಗೆ ನಂಟ [ಪ]
ನಿನ್ನ ಬಲವತ್ತರ ಶಕ್ತಿಯಿಂದಲಿ ಕಲಿಯ
ಬಣ್ಣಗೆಡಿಸಿದೆ ಪಿಡಿದು ಗದೆಯಿಂದ ಸದೆದು
ಇನ್ಯಾರು ನಿನಗೆ ಸರಿ ರಿಪುಕದಳಿ ಮತ್ತಕರಿ
ಎನ್ನ ನೀ ರಕ್ಷಿಸಯ್ಯ ಪಿಡಿ ಬ್ಯಾಗ ಕಯ್ಯ (೧)
ಕುಂತಿಯ ಕುಮಾರ ಕೌರವ ಕುಲಕುಠಾರ
ಅಂತರಂಗದಿ ಶುದ್ಧ ಎನ್ನ ಮನದೊಳಿದ್ದ
ಸಂತಾಪಗಳ ಕೆಡಿಸೊ ಹರಿಭಕುತಿಯನು ಕೊಡಿಸೊ
ಅ-ಚಿಂತ್ಯ ಬಲ ಶೌರ್ಯ ದುರ್ಜನ ಕುಮುದ ಸೂರ್ಯ (೨)
ದೇವ ನೀ ವಿಷದ ಲಡ್ಡುಗೆಯನುಂಡು ದಕ್ಕಿಸಿದ
ಕಂಡು ಭಾವ ಶುದ್ಧದಿ ಮೊರೆಹೊಕ್ಕೆ ದೊರೆಯೆ
ಆವಾವುದುಂಡರೆನಗೆ ದಕ್ಕುವಂತೆ ಮಾಡೊ
ದೇವ ನಿನಗೆಣೆಗಾಣೆ ಹರಿಪದಗಳಾಣೆ (೩)
ಬಕಹಿಡಿಂಬ ಕಿಮ್ಮೀರರಿಪುವೆ ಘನಸಮೀರ
ನಖಾಗ್ರದಲಿ ಕೊಂದೆ ರಣಾಗ್ರದಲಿ ನಿಂದೆ
ಭಕುತಿಯಲಿ ನಿನ್ನಪಾದ ಭಜಿಸುವವರಿಗೆ ಮೋದ
ಯುಕುತಿಯಲಿ ಕೊಡಿಸೊ ವಾದಿಗಳ ಓಡಿಸೊ (೪)
ದುರುಳ ದೈತ್ಯರ ವೈರಿ ಖಳಕುಲಕೆ ನೀ ಮಾರಿ
ದು-ಸ್ತರಣ ಭವತಾರಿ ಸುಜನರಿಗುಪಕಾರಿ
ಹರಿಭಕುತಿ ತೋರಿಸಿದಿ ಮುಕುತಿಪಥ ಸೇರಿಸಿದಿ
ಪೊರೆಯಯ್ಯ ಹಯವದನ ಶರಣ ಇದು ಕರುಣ (೫)
BIma nissImamahima agaNita guNastOma
kAmapitana baMTa nenevarige naMTa [pa]
ninna balavattara SaktiyiMdali kaliya
baNNageDiside piDidu gadeyiMda sadedu
inyAru ninage sari ripukadaLi mattakari
enna nI rakShisayya piDi byAga kayya (1)
kuMtiya kumAra kaurava kulakuThAra
aMtaraMgadi Suddha enna manadoLidda
saMtApagaLa keDiso hariBakutiyanu koDiso
a-ciMtya bala Saurya durjana kumuda sUrya (2)
dEva nI viShada laDDugeyanuMDu dakkisida
kaMDu BAva Suddhadi morehokke doreye
AvAvuduMDarenage dakkuvaMte mADo
dEva ninageNegANe haripadagaLANe (3)
bakahiDiMba kimmIraripuve GanasamIra
naKAgradali koMde raNAgradali niMde
Bakutiyali ninnapAda Bajisuvavarige mOda
yukutiyali koDiso vAdigaLa ODiso (4)
duruLa daityara vairi KaLakulake nI mAri
du-staraNa BavatAri sujanarigupakAri
hariBakuti tOrisidi mukutipatha sErisidi
poreyayya hayavadana SaraNa idu karuNa (5)
Leave a Reply