Tumbitu beladingalu

Composer : Shri Vyasarajaru

By Smt.Shubhalakshmi Rao

ತುಂಬಿತು ಬೆಳದಿಂಗಳು ಈ ವನದೊಳು
ತುಂಬಿತು ಬೆಳದಿಂಗಳು [ಪ]

ತುಂಬಿತು ಬೆಳದಿಂಗಳೀ ವನದೊಳಗೆಲ್ಲ
ಅಂಬುಜನಾಭನು ಬಾರ ಕಾಣಕ್ಕ [ಅ.ಪ]

ಮಾಗಿ ಹೋಗಿ ವಸಂತವು ಬರುತಿದೆ
ಕೋಗಿಲೆ ತುಂಬಿಲ್ಲಿ ಕೂಗುತಿದೆ
ಆಗಲೆ ಎಳೆಮಾವು ತಳಿರೇಳುತಲಿದೆ
ನಾಗಶಯನ ಕೃಷ್ಣ ಬಾರ ಕಾಣಕ್ಕ (೧)

ಕಟ್ಟಿದ್ದ ಬಿಳಿಯೆಲೆ ತೊಟ್ಟಾರುತಲಿವೆ
ಪಟ್ಲ ಜಾಜಿಯ ಮೊಗ್ಗು ಅರಳುತಿದೆ
ಬಟ್ಟೆ ಬಟ್ಟೆಲಿ ನೋಡಿ ಕಣ್ಣು ಝುಮ್ಮಿಟ್ಟಿತು
ಧಿಟ್ಟತನದಿ ರಂಗ ಬಾರ ಕಾಣಕ್ಕ (೨)

ಕಾದ ನೀರು ಎಲ್ಲ ಆರಿ ಹೋಗುತಲಿದೆ
ಕೊಯ್ದ ಮಲ್ಲಿಗೆ ಹೂವು ಬಾಡುತಿದೆ
ಮದನನ ಬಾಧೆಯು ಬಹಳವಾಗಿದೆ ಈಗ
ಮದನನೈಯ ಕೃಷ್ಣ ಬಾರ ಕಾಣಕ್ಕ (೩)

ಹಾಸಿದ ಹಾಸು ಮಂಚ ಹಸಗೆಟ್ಟು ಹೋಗುತಿದೆ
ಪೂಸಿದ ಶ್ರೀಗಂಧ ಬೆವರುತಿದೆ
ಲೇಸಾದ ನಮ್ಮ ದೆಹ ಮಿಂಚೇರುತಲಿದೆ
ವಾಸುದೇವ ಕೃಷ್ಣ ಬಾರ ಕಾಣಕ್ಕ (೪)

ಒಳದೊಡೆ ನಡುಗಿದೆ, ನೆರಿಯು ಹಾರುತಲಿದೆ
ಕಳಕಳಿಸುತಲಿದೆ ಕಳವಳವು
ಪುಳಕವಾಗುತಲಿದೆ ಕಳೆಯುಗುಂದುತಲಿದೆ
ನಳಿನ ನಾಭನು ಕೃಷ್ಣ ಬಾರ ಕಾಣಕ್ಕ (೫)


tuMbitu beLadiMgaLu I vanadoLu
tuMbitu beLadiMgaLu [pa]

tuMbitu beLadiMgaLI vanadoLagella
aMbujanAbhanu bAra kANakka [a.pa]

mAgi hOgi vasaMtavu barutide
kOgile tuMbilli kUgutide
Agale eLemAvu taLirELutalide
nAgaSayana kRuShNa bAra kANakka (1)

kaTTidda biLiyele toTTArutalive
paTla jAjiya moggu araLutide
baTTe baTTeli nODi kaNNu JummiTTitu
dhiTTatanadi raMga bAra kANakka (2)

kAda nIru ella Ari hOgutalide
koyda mallige hUvu bADutide
madanana bAdheyu bahaLavAgide Iga
madananaiya kRuShNa bAra kANakka (3)

hAsida hAsu maMca hasageTTu hOgutide
pUsida SrIgaMdha bevarutide
lEsAda namma deha miMcErutalide
vAsudEva kRuShNa bAra kANakka (4)

oLadoDe naDugide, neriyu hArutalide
kaLakaLisutalide kaLavaLavu
puLakavAgutalide kaLeyuguMdutalide
naLina nABanu kRuShNa bAra kANakka (5)

Leave a Reply

Your email address will not be published. Required fields are marked *

You might also like

error: Content is protected !!