Ranga bandane

Composer : Shri Vyasarajaru

By Smt.Shubhalakshmi Rao

ರಂಗ ಬಂದಾನೆ ಯಾದವರಾಯ ಬಂದಾನೆ
ಕಂಗಳು ದಣಿಯೆ ನರಸಿಂಗ ಬಂದಾನೆ,
ರಂಗ ಬಂದಾನೆ [ಅ.ಪ]

ಮಲ್ಲಿಗೆ ವನದೊಳಗೆ ನಿನ್ನ
ಮಗ ಮರವ ಹತ್ತಿದ
ಬೆಲ್ಲ ಕೊಟ್ಟರೆ ಒಲ್ಲೆನೆಂದು
ಅಲ್ಲಿಗಲ್ಲಿಗೋಡಾಡಿದ ನಮ್ಮ [೧]

ಕ್ಯಾದಿಗೆ ವನದೊಳಗೆ ನಿನ್ನ
ಮಗ ಬೊಧಿಸಿ ಕರೆದನೆ
ಹಾದಿಲೈವರಿಗಾಧಾರವಾಗಿ
ಮೆದಿನಿಯೆಲ್ಲ ಬಳಸುತಲ್ಲೀಗ [೨]

ಕಾಲಲ್ಲಿ ಕಿರು ಗೆಜ್ಜೆ
ಒಪ್ಪುವ ನಾವಲಿ ಉಡುದಾರ
ಮಾಲೆ ಹಾಕಿ ಮಾವನ ಮಗಳೆ
ವಲ್ಲಭೆ ನೀನೆಂದ [೩]

ನಿಲ್ಲದೆ ಇರುವ ನಿನ್ನ
ಸುತ ಎಲ್ಲರಂತೇನೆ
ಬಿಲ್ಲ ಹಬ್ಬವ ಮಾಡಿಸಿ
ಪೋದ ಬಲ್ಲವರ್ಯಾರಮ್ಮ [೪]

ಇಕ್ಕೊ ನಿನ್ನ ಕರೆದು ನಮಗ
ಸಕ್ಕರೆ ತುಪ್ಪ ಅನ್ನಗಳಿಕ್ಕಿ
ಅಕ್ಕರೆ ಕಂದಗೆ ಅಪ್ಪನಾಗಿ
ಕುಣಿಕುಣಿದೊಡಿದ ಶ್ರೀ ಕೃಷ್ಣಯ್ಯ [೫]


raMga baMdAne yAdavarAya baMdAne
kaMgaLu daNiye narasiMga baMdAne,
raMga baMdAne [a.pa]

mallige vanadoLage ninna
maga marava hattida
bella koTTare olleneMdu
alligalligODADida namma [1]

kyAdige vanadoLage ninna
maga bodhisi karedane
hAdilaivarigAdhAravAgi
mediniyella baLasutallIga [2]

kAlalli kiru gejje
oppuva nAvali uDudAra
mAle hAki mAvana magaLe
vallabhe nIneMda [3]

nillade iruva ninna
suta ellaraMtEne
billa habbava mADisi
pOda ballavaryAramma [4]

ikko ninna karedu namaga
sakkare tuppa annagaLikki
akkare kaMdage appanAgi
kuNikuNidoDida shrI kRuShNayya [5]

Leave a Reply

Your email address will not be published. Required fields are marked *

You might also like

error: Content is protected !!