Beegadiru ele manava

Composer : Shri Vyasarajaru

By Smt.Shubhalakshmi Rao

ಬೀಗದಿರು ಎಲೆ ಮಾನವಾ
ಧಿಗಿ ಧಿಗಿ ಧಿಗಿಯೆನುತ ನಿನಗೇಕೆ ಗರ್ವ [ಅ]

ವಿರಕ್ತಿಯಲಿ ಹನುಮನೆ ವಿವೇಕದಲಿ ವಸಿಷ್ಠನೆ
ಶೂರತನದಲಿ ಶಂತನು ತನಯನೇನೊ
ಸ್ವರದಲಿ ತುಂಬುರನೆ ಗೀತದಲಿ ನಾರದನೆ
ಪರಾಶರ ಮುನಿಯೆ ವ್ರತತಿ ಪಟ್ಟದಲ್ಲಿ (೧)

ಚೆಲುವಿನಲಿ ರಾಮನೆ ಸತ್ಯದಿ ಹರಿಶ್ಚಂದ್ರನೆ
ಛಲದಲ್ಲಿ ಋಷಿ ವಿಶ್ವಾಮಿತ್ರನೇನೋ
ಬಲದಲ್ಲಿ ವಾಲಿಯೇ ಹಲಧರನೆ ಹಿರಣ್ಯಕನೆ
ಬಲು ವಿದ್ಯದಲಿ ಪರಶುರಾಮನೇ ನೀನು (೨)

ತ್ಯಾಗದಲಿ ಕರ್ಣನೇ ಭೋಗದಲಿ ಶತಮುಖನೆ
ಯೋಗದಲಿ ಶುಕಸನಕ ಜನಕನೇನೋ
ಭಾಗ್ಯದಲಿ ಬಲಿಚಕ್ರವರ್ತಿಯೋ ದಶಶಿರನೊ
ದೀರ್ಘದಲಿ ಮೇರುವೊ ಮಂದರವೊ ನೀನು (೩)

ಭಕ್ತಿಯಲಿ ಭರತನೆ ಭಾವದಲಿ ಲಕ್ಷ್ಮಣನೆ
ಯುಕ್ತಿಯಲಿ ನೀನಿಂದ್ರ ಸೂತನೇನೊ
ಶಕ್ತಿಯಲಿ ಕಾಲನೆ ಭುಕ್ತಿಯಲಗಸ್ತ್ಯನೆ
ಮುಕ್ತಿ ಪಡೆವಲ್ಲಿ ಖಟ್ವಾಂಗರಾಯನೇನೊ (೪)

ಶಾಪದಲಿ ಬ್ರಹ್ಮನೆ ತಾಪದಲಿ ಸೂರ್ಯನೆ
ಕೋಪದಲಿ ಮಹೇಶನೇನೋ ನೀನು
ತಪದಲ್ಲಿ ಹನುಮನೆ ವ್ರತದಿ ರುಕ್ಮಾಂಗದನೆ
ಕೃಪೆಯಲ್ಲಿ ಶ್ರೀ ಕೃಷ್ಣದೇವನೆ ನೀನು (೫)


beegadiru ele mAnavA
dhigi dhigi dhigiyenuta ninagEke garva [a]

viraktiyali hanumane vivEkadali vasiShThane
SUratanadali SaMtanu tanayanEno
svaradali tuMburane gItadali nAradane
parASara muniye vratati paTTadalli (1)

celuvinali rAmane satyadi hariScaMdrane
Caladalli RuShi viSvAmitranEnO
baladalli vAliyE haladharane hiraNyakane
balu vidyadali paraSurAmanE nInu (2)

tyAgadali karNanE BOgadali SatamuKane
yOgadali Sukasanaka janakanEnO
BAgyadali balicakravartiyO daSaSirano
dIrGadali mEruvo maMdaravo nInu (3)

Baktiyali Baratane BAvadali lakShmaNane
yuktiyali nIniMdra sUtanEno
Saktiyali kAlane Buktiyalagastyane
mukti paDevalli KaTvAMgarAyanEno (4)

SApadali brahmane tApadali sUryane
kOpadali mahESanEnO nInu
tapadalli hanumane vratadi rukmAMgadane
kRupeyalli SrI kRuShNadEvane nInu (5)

Leave a Reply

Your email address will not be published. Required fields are marked *

You might also like

error: Content is protected !!