-
Beegadiru ele manava
Composer : Shri Vyasarajaru ಬೀಗದಿರು ಎಲೆ ಮಾನವಾಧಿಗಿ ಧಿಗಿ ಧಿಗಿಯೆನುತ ನಿನಗೇಕೆ ಗರ್ವ [ಅ] ವಿರಕ್ತಿಯಲಿ ಹನುಮನೆ ವಿವೇಕದಲಿ ವಸಿಷ್ಠನೆಶೂರತನದಲಿ ಶಂತನು ತನಯನೇನೊಸ್ವರದಲಿ ತುಂಬುರನೆ ಗೀತದಲಿ ನಾರದನೆಪರಾಶರ ಮುನಿಯೆ ವ್ರತತಿ ಪಟ್ಟದಲ್ಲಿ (೧) ಚೆಲುವಿನಲಿ ರಾಮನೆ ಸತ್ಯದಿ ಹರಿಶ್ಚಂದ್ರನೆಛಲದಲ್ಲಿ ಋಷಿ ವಿಶ್ವಾಮಿತ್ರನೇನೋಬಲದಲ್ಲಿ ವಾಲಿಯೇ ಹಲಧರನೆ ಹಿರಣ್ಯಕನೆಬಲು ವಿದ್ಯದಲಿ ಪರಶುರಾಮನೇ ನೀನು (೨) ತ್ಯಾಗದಲಿ ಕರ್ಣನೇ ಭೋಗದಲಿ ಶತಮುಖನೆಯೋಗದಲಿ ಶುಕಸನಕ ಜನಕನೇನೋಭಾಗ್ಯದಲಿ ಬಲಿಚಕ್ರವರ್ತಿಯೋ ದಶಶಿರನೊದೀರ್ಘದಲಿ ಮೇರುವೊ ಮಂದರವೊ ನೀನು (೩) ಭಕ್ತಿಯಲಿ ಭರತನೆ ಭಾವದಲಿ ಲಕ್ಷ್ಮಣನೆಯುಕ್ತಿಯಲಿ ನೀನಿಂದ್ರ…
