Composer : Shri Vyasarajaru
ಬಾರೋ ಬೇಗ ನೀರಜಾಕ್ಷ
ದೂರು ಇದು ಯಾತಕೋ ||ಪ||
ಮೊಸರು ಮಾರುವ ಗೊಲ್ಲತಿಯರ
ಅಸವಳಿಸಿ ಕೈಯ್ಯ ಪಿಡಿದು
ವಶವಾಗು ಎಂದು ಪೇಳಿ
ನಸುನಗುತಲಿದ್ದೆಯಂತೆ ||೧||
ಕುಸುಮ ಶರನ ಪೆತ್ತವನೆ
ಬಸವನಾದೆ ಊರೊಳಗೆ
ಶಶಿಮುಖಿಯರ ದೂರು ಬಹು
ಪಸರಿಸಿತು ಪೇಳಲಾರೆ ||೨||
ಕಂದ ಕೇಳು ಇಂದು ಮುಖಿಯರ
ಹೊಂದಿ ಆಡಲೇಕೆ
ಈ ಮಂದಿರದೊಳಾಡಿ ಸಲಹೊ
ತಂದೆ ಉಡುಪಿ ಸಿರಿಕೃಷ್ಣ ||೩||
bArO bEga nIrajAkSha
dUru idu yAtakO ||pa||
mosaru mAruva gollatiyara
asavaLisi kaiyya piDidu
vaSavAgu eMdu pELi
nasunagutaliddeyaMte ||1||
kusuma Sarana pettavane
basavanAde UroLage
SaSimuKiyara dUru bahu
pasarisitu pELalAre ||2||
kaMda kELu iMdu muKiyara
hoMdi ADalEke
I maMdiradoLADi salaho
taMde uDupi sirikRuShNa ||3||
Leave a Reply