Composer : Shri Jagannatha dasaru
ಸೋಮಶಿವ ಶರ್ವ ಭವ ಶಿತಿಕಂಠ ನಿನ್ನಪದ
ತಾಮರಸ ಯುಗ್ಮಗಳಿಗ್ ಆನಮಿಸುವೆ [ಪ]
ಕಾಮಹರ ಕೈಲಾಸ ಹೇಮಗಿರಿಯಾವಾಸ
ರಾಮನಾಮವ ಭಜಿಪ ಉಮೆಯರಸ ಶಂಭೋ [ಅ]
ಮೃತ್ಯುಂಜಯ ಮೃಗಾಂಕ ಕೃತ್ತಿವಾಸ ಕೃಪಾಳೊ
ವಿತ್ತಪತಿ ಸಖ ವಿನಾಯಕರ ಜನಕ
ಭೃತ್ಯವರ್ಗಕೆ ಬಾಹಪಮೃತ್ಯು ಕಳೆದು ಸಂ
ಪತ್ತು ಪಾಲಿಸುವುದು ನಿವೃತ್ತಿ ಸಂಗಮಪ [೧]
ಗೋಪತಿ ಧ್ವಜ ಘೋರ ಪಾಪ ಸಂಹರಣ ಹರಿ
ತೋಪಲೋಪಮ ಕಂಠ ಚಾಪಪಾಣೀ
ಶ್ರೀ ಪತಿಯ ಶ್ರೀನಾಭಿ ಕೂಪಸಂಭವ ತನಯ
ನೀ ಪಾಲಿಸೆಮ್ಮನು ವಿರೂಪಾಕ್ಷ ಗುರುವೆ [೨]
ಭಸಿತ ಭೂಷಿತ ಡಮರು ತಿಸುಳಗೈಯನೆ ಶಂಭೋ
ಕಿಸಲಯೋಪಮ ನವಿರ ಶಶಿಭೂಷಣ
ಅಸುರಾರಿ ಶ್ರೀ ಜಗನ್ನಾಥ ವಿಠಲನ ಪದ
ಬಿಸಜ ಧ್ಯಾನವನೀಯೊ ಹಸನಾಗಿ ಕಾಯೊ [೩]
sOmaSiva Sarva Bava SitikaMTha ninnapada
tAmarasa yugmagaLig Anamisuve [pa]
kAmahara kailAsa hEmagiriyAvAsa
rAmanAmava Bajipa umeyarasa SaMBO [a]
mRutyuMjaya mRugAMka kRuttivAsa kRupALo
vittapati saKa vinAyakara janaka
BRutyavargake bAhapamRutyu kaLedu saM
pattu pAlisuvudu nivRutti saMgamapa [1]
gOpati dhvaja GOra pApa saMharaNa hari
tOpalOpama kaMTha cApapANI
SrI patiya SrInABi kUpasaMBava tanaya
nI pAlisemmanu virUpAkSha guruve [2]
Basita BUShita Damaru tisuLagaiyane SaMBO
kisalayOpama navira SaSiBUShaNa
asurAri SrI jagannAtha viThalana pada
bisaja dhyAnavanIyo hasanAgi kAyo [3]
Leave a Reply