Composer : Shri Vijayadasaru
ಗುರು ವಾದಿರಾಜ ಯತಿಯಾ ನೆನಸೋದು
ನಿರುತ ಕರುಣಿಪ ಮತಿಯಾ ||ಪ||
ಆರ್ತನಾ ಸರಿದಾರು ನವನ
ವರ್ತಮಾನವನೆ ಕೇಳಿ |
ಕರ್ತೃತ್ವ ಪರಿಹರಿಸಿ ಸಂಸೃತಿಯ
ಗರ್ತದಿಂದೆತ್ತಿ ನೋಳ್ಪ ||೧||
ದುರಿತ ರಾಶಿಗಳ ಶೀಳಿ ಹೊರದೆಗೆದು
ಮರುತ ಶಾಸ್ತ್ರವನೆ ಪೇಳಿ |
ಪರಮಾರ್ಥ ಮಾರ್ಗವಾ ತೋರಿ ಸುಖಬಡಿಸಿ
ಧರಿಯೊಳಗೆ ಮೆರೆದ ಧೀರ ||೨||
ವಂದಿಸಿ ಸೌಂದರ್ಯಪುರಿಯ ವಾಸ
ವರಪ್ರದ ನಂದ ಸತ್ಕೀರ್ತಿ ಭೂಪ |
ವಂದಿಸಿದವರಿಗೆ ಲೇಸಾಗಿ ಕೊಡುವ
ಮುಕುಂದನಂಘ್ರಿಯ ದಾಸ ||೩||
ತೀರ್ಥಯಾತ್ರೆಯನೆ ಮಾಡಿ
ಹರಿ ಭೇದಾರ್ಥದಿಂದಲೆ ಕೊಂಡಾಡಿ |
ಅರ್ಥಾಸೆಗಳ ಈಡಾಡಿ
ಹಯಮೊಗನ ಅರ್ಥಿಯಿಂದಲಿ ಪೂಜಿಪ ||೪||
ತ್ರಿಜಗದೊಳಗಿನವರಿಗೆ ಎಣೆಗಾಣೆ
ಕುಜನ ಮತ ಸೋಲಿಸುವಲ್ಲಿ
ವಿಜಯವಿಠ್ಠಲನೆ ದೈವವೆಂದು
ಧ್ವಜವೆತ್ತಿ ತಿರುಗಿದ ಮುನಿಪ ||೫||
guru vAdirAja yatiyA nenasOdu
niruta karuNipa matiyA ||pa||
ArtanA saridAru navana
vartamAnavane kELi |
kartRutva pariharisi saMsRutiya
gartadiMdetti nOLpa ||1||
durita rASigaLa SILi horadegedu
maruta SAstravane pELi |
paramArtha mArgavA tOri suKabaDisi
dhariyoLage mereda dhIra ||2||
vaMdisi sauMdaryapuriya vAsa
varaprada naMda satkIrti BUpa |
vaMdisidavarige lEsAgi koDuva
mukuMdanaMGriya dAsa ||3||
tIrthayAtreyane mADi
hari BEdArthadiMdale koMDADi |
arthAsegaLa IDADi
hayamogana arthiyiMdali pUjipa ||4||
trijagadoLaginavarige eNegANe
kujana mata sOlisuvalli
vijayaviThThalane daivaveMdu
dhvajavetti tirugida munipa ||5||
Leave a Reply