Rajabeediyolagininda

Composer : Shri Vadirajaru

By Smt.Shubhalakshmi Rao

ರಾಜ ಬೀದಿಯೊಳಗಿನಿಂದ ಕಸ್ತೂರಿ ರಂಗ
ತೇಜನೇರಿ ಮೆರೆದು ಬಂದಾ ||ಪ||

ಸುತ್ತಮುತ್ತಲು ಸಾವಿರಾರು ಸಾಲು ದೀವಿಗೆ
ಹತ್ತು ದಿಕ್ಕಿಲಿ ಬೆಳಗುತ್ತಿದ್ದ ಹಗಲು ಬತ್ತಿಯು
ವಿಸ್ತಾರದಿ ಭೂಸುರರು ಸಾಲುಗಟ್ಟಿ ನಿಂತಿರಲು
ಮತ್ತೆ ನಮ್ಮೊಳೆಂತೊ ತೇಜ ಮೆಲ್ಲನೆ ನಡೆಸುತ ಜಾಣ ||೧||

ತಾಳ ಶಂಖ ಭೇರಿ ತಂಬೂರಿ ಮೊದಲಾದ
ಮೇಲು ಪಂಚಾಗಗಳೆಲ್ಲ ಹೊಗಳಿ ಹೊಗಳಲು
ಗಾಳಿಗೋಪುರದ ಮುಂದೆ ಧಾಳಿಯಾಡುತ ಸುತ್ತ
ಧೂಳಿಯನ್ನೆಬ್ಬಿಸಿ ವೈಯಾಳಿಸಿ ನಿಕ್ಕುತ ಜಾಣ ||೨||

ವೇದಶಾಸ್ತ್ರ ಪುರಾಣಗಳು ವಂದಿಸಿ ಪೊಗಳಲು
ಮೋದದಿಂದ ಗಾಯಕರು ಮೌರಿ ಪಾಡಲು
ಹಾದಿ ಬೀದಿಯಲ್ಲಿ ನಿಂತು ಭೂಸುರ ಜನರಿಗೆಲ್ಲಾ
ಆದರಿಂದ ಅಷ್ಟಮೃತಾನ್ನವ ನಿಕ್ಕುತ ಜಾಣ ||೩||

ರಂಭಾ ಮೊದಲಾದ ಸುರರಮಣಿಯರು
ತುಂಬಿದಾರುತಿಯ ಪಿಡಿದು ಕೂಡಿ ಪಾಡಲು
ಶಂಭು ಮುಖ ನಿರ್ಜರರು ಸ್ವಾಮಿ ಪರಾಕೆದೆಂನೆನುತ
ಅಂಬುದಿ ಭವಾದ್ಬಿಗಳ ಆಳಿದ ಶ್ರೀರಂಗನಾಥ ||೪||

ಹಚ್ಚನಗೆ ಸಾರು ಬೇಳೆ ಹಾಲು ಕೆನೆಗಳು
ಮುಚ್ಚಿ ತಂದ ಕೆನೆ ಮೊಸರು ವೀಸಲು ಬೆಣ್ಣೆಯು
ಹಚ್ಚಿ ತುಪ್ಪ ಪಕ್ವವಾದ ಅತಿರಸ ಹುಗ್ಗಿಯನು
ಮೆಚ್ಚಿ ಉಂಡು ಪಾನಕ ನೀರ್ ಮಜ್ಜಿಗೆಗಳಸವಿದು ಬೇಗ ||೫||

ಸಣ್ಣ ಮುತ್ತು ಕೆತ್ತಿಸಿದ ಸಕಲಾಧಿಗಳು
ಹೊನ್ನಹೊಸ ಜಾನು ಜಂಗುಳಿ ಹೊಳೆವಸೊಬಗಿನ
ಉನ್ನತ ಪಾರಾಯಣ ಉತ್ತಮ ರಾಜಶ್ವವೇರಿ
ಎನ್ನ ಹಯವದನ ರಂಗ ಎಲ್ಲರಿಗಷ್ಟಾರ್ಥ ಕೊಡುತ ||೬||


rAja bIdiyoLaginiMda kastUri raMga
tEjanEri meredu baMdA ||pa||

suttamuttalu sAvirAru sAlu dIvige
hattu dikkili beLaguttidda hagalu battiyu
vistAradi BUsuraru sAlugaTTi niMtiralu
matte nammoLeMto tEja mellane naDesuta jANa ||1||

tALa SaMKa BEri taMbUri modalAda
mElu paMcAgagaLella hogaLi hogaLalu
gALigOpurada muMde dhALiyADuta sutta
dhULiyannebbisi vaiyALisi nikkuta jANa ||2||

vEdaSAstra purANagaLu vaMdisi pogaLalu
mOdadiMda gAyakaru mauri pADalu
hAdi bIdiyalli niMtu BUsura janarigellA
AdariMda aShTamRutAnnava nikkuta jANa ||3||

raMBA modalAda suraramaNiyaru
tuMbidArutiya piDidu kUDi pADalu
SaMBu muKa nirjararu swAmi parAkedeMnenuta
aMbudi BavAdbigaLa ALida SrIraMganAtha ||4||

haccanage sAru bELe hAlu kenegaLu
mucci taMda kene mosaru vIsalu beNNeyu
hacci tuppa pakvavAda atirasa huggiyanu
mecci uMDu pAnaka nIr majjigegaLasavidu bEga ||5||

saNNa muttu kettisida sakalAdhigaLu
honnahosa jAnu jaMguLi hoLevasobagina
unnata pArAyaNa uttama rAjaSvavEri
enna hayavadana raMga ellarigaShTArtha koDuta ||6||

Leave a Reply

Your email address will not be published. Required fields are marked *

You might also like

error: Content is protected !!