Composer : Shri Jagannatha dasaru
ನಮೋ ನಮೋ ಶ್ರೀ ರಾಘವೇಂದ್ರ ಸದ್ಗುಣಸಾಂದ್ರ
ಕಮಲನಾಭನ ದಾಸ ಕಮಲಾಪ್ತ ಭಾಸ || ಪ ||
ದೇಶದೇಶಗಳಿಂದ ದೈನ್ಯದಿಂದಲಿ ಬಂದ
ಅಶೇಷ ಜನರುಗಳನ್ನ ಸಲಹುವ ಸುಘನ್ನ
ನಾ ಸೇರಿದೆನೊ ನಿನ್ನ ನಮಿತಜನರ ಪ್ರಸನ್ನ
ಭಾಸುರಚರಿತ ಭಜಿಸುವೆನು ಅನವರತ || ೧ ||
ಭೇದಾರ್ಥಜಲಜಾರ್ಕ ಭೂರಿಬಲತರತರ್ಕ
ವಾದಿ ವೃಕ್ಷಕೆ ಕುಲಿಶ ವರಹಸುತೆವಾಸ
ಬಾಧಿಸುವ ಅಘಜೀರ್ಣ ಮಾಡು ಗುರುವರ ಪೂರ್ಣ
ಬೊಧಮತ ಸಂಭೂತ ಭೂರಿಪ್ರಖ್ಯಾತ || ೨ ||
ನತಜನಾಶ್ರಯ ಪ್ರೀಯ ನೆರೆನಂಬಿದೆನೊ ಮಾಯಾ
ಮತಕದಳಿಗಜೇಂದ್ರ ವಿಬುಧಾಬ್ಧಿಚಂದ್ರ
ಕ್ರತುಭುಕ್ ಜಗನ್ನಾಥ ವಿಠ್ಠಲನ ನಿಜದೂತ
ಸ್ತುತಿಸಲಾಪೆನೆ ನಿನ್ನ ಯತಿಶಿರೋರನ್ನ || ೩ ||
namO namO SrI rAGavEMdra sadguNasAMdra
kamalanABana dAsa kamalApta BAsa || pa ||
dESadESagaLiMda dainyadiMdali baMda
aSESha janarugaLanna salahuva suGanna
nA sErideno ninna namitajanara prasanna
BAsuracarita Bajisuvenu anavarata || 1 ||
BEdArthajalajArka BUribalataratarka
vAdi vRukShake kuliSa varahasutevAsa
bAdhisuva aGajIrNa mADu guruvara pUrNa
bodhamata saMBUta BUripraKyAta || 2 ||
natajanASraya prIya nerenaMbideno mAyA
matakadaLigajEMdra vibudhAbdhicaMdra
kratuBuk jagannAtha viThThalana nijadUta
stutisalApene ninna yatiSirOranna || 3 ||
Leave a Reply