-
Namo Namo Sri Raghavendra
Composer : Shri Jagannatha dasaru ನಮೋ ನಮೋ ಶ್ರೀ ರಾಘವೇಂದ್ರ ಸದ್ಗುಣಸಾಂದ್ರಕಮಲನಾಭನ ದಾಸ ಕಮಲಾಪ್ತ ಭಾಸ || ಪ || ದೇಶದೇಶಗಳಿಂದ ದೈನ್ಯದಿಂದಲಿ ಬಂದಅಶೇಷ ಜನರುಗಳನ್ನ ಸಲಹುವ ಸುಘನ್ನನಾ ಸೇರಿದೆನೊ ನಿನ್ನ ನಮಿತಜನರ ಪ್ರಸನ್ನಭಾಸುರಚರಿತ ಭಜಿಸುವೆನು ಅನವರತ || ೧ || ಭೇದಾರ್ಥಜಲಜಾರ್ಕ ಭೂರಿಬಲತರತರ್ಕವಾದಿ ವೃಕ್ಷಕೆ ಕುಲಿಶ ವರಹಸುತೆವಾಸಬಾಧಿಸುವ ಅಘಜೀರ್ಣ ಮಾಡು ಗುರುವರ ಪೂರ್ಣಬೊಧಮತ ಸಂಭೂತ ಭೂರಿಪ್ರಖ್ಯಾತ || ೨ || ನತಜನಾಶ್ರಯ ಪ್ರೀಯ ನೆರೆನಂಬಿದೆನೊ ಮಾಯಾಮತಕದಳಿಗಜೇಂದ್ರ ವಿಬುಧಾಬ್ಧಿಚಂದ್ರಕ್ರತುಭುಕ್ ಜಗನ್ನಾಥ ವಿಠ್ಠಲನ ನಿಜದೂತಸ್ತುತಿಸಲಾಪೆನೆ ನಿನ್ನ ಯತಿಶಿರೋರನ್ನ…
