Composer : Shri Gurujagannatha dasaru
ನಂಬಿ ಕೆಟ್ಟವರಿಲ್ಲವೋ ಈ ಗುರುಗಳ
ನಂಬದೆ ಕೆಡುವುರುಂಟೋ ||ಪ||
ನಂಬಿದ ಜನರಿಗೆ – ಬೆಂಬಲ ತಾನಾಗಿ
ಹಂಬಲಿಸಿದ ಫಲ – ತುಂಬಿ ಕೊಡುವರನ್ನ ||ಅ.ಪ||
ಜಲಧರ ದ್ವಿಜವರಗೆ ತಾನೇ ಒಲಿದು
ಸುಲಭ ಮುಕುತಿಯನಿತ್ತನು
ಚೆಲುವ ಸುತನ ಕರೆಗೆ ಲಲನೆಗೆ ತ್ವರದಿಂದ
ಪುಲಿನ ಗರ್ಪದಿ ದಿವ್ಯ – ಜಲವ ನಿತ್ತವ ರನ್ನ |೧|
ಮೃತ್ಯುದೂತರು ತನ್ನನು ಪೊಂದಿದ ನಿಜ
ಭೃತ್ಯನ ಕರೆದೊಯ್ಯಲು
ಸತ್ತ ದ್ವಿಜನ ತಾನು – ಮತ್ತೆ ಧರೆಗೆ ತಂದು
ಮೃತ್ಯು ಬಿಡಿಸಿ ಸುಖ – ವಿತ್ತು ಪೊರೆದಿಹ ರನ್ನ |೨|
ಧಿಟ ಗುರುಜಗನ್ನಾಥ ವಿಠಲನೊಲುಮೆ
ಘಟನ ವಾದುದರಿಂದ
ಘಟನಾಘಟನ ಕಾರ್ಯ – ಘಟನಾ ಮಾಡುವ ನಮ್ಮ
ಪಟು ಗುರುವರ ಹೃ – ತ್ಪುಟದಿ ಇರುವೋ ರನ್ನ |೩|
naMbi keTTavarillavO ee gurugaLa
naMbade keDuvuruMTO ||pa||
naMbida janarige – beMbala tAnAgi
haMbalisida phala – tuMbi koDuvaranna ||a.pa||
jaladhara dvijavarage tAnE olidu
sulaBa mukutiyanittanu
celuva sutana karege lalanege tvaradiMda
pulina garpadi divya – jalava nittava ranna |1|
mRutyudUtaru tannanu poMdida nija
BRutyana karedoyyalu
satta dvijana tAnu – matte dharege taMdu
mRutyu biDisi sukha – vittu porediha ranna |2|
dhiTa gurujagannAtha viThalanolume
ghaTana vAdudariMda
ghaTanAghaTana kArya – ghaTanA mADuva namma
paTu guruvara hRu – tpuTadi iruvO ranna |3|
Leave a Reply