Adi varahana

Composer : Shri Vadirajaru

By Smt.Shubhalakshmi Rao

ಆದಿವರಾಹನ ಚೆಲುವ ಪಾದವ ಕಾಣದೆ
ಕಣ್ಣು ವೇದನೆಯು ಆಗಿ
ಬಲು ಬಾಧಿಸುತ್ತಲಿದೆ ಯೆನ್ನ
ಈ ಧರೆಯೊಳಗೆ ಶುಕ್ಲನದಿಗೆ
ದಕ್ಷಿಣದಲ್ಲಿದ್ದ ಮೇ-ಣ್ ದಾಡೆ ಅತ್ತಿತ್ತಂದ /ಪ./

ಅಷ್ಟಾ ಸ್ವಯಂ ವ್ಯಕ್ತ
ಶ್ರೀಮುಷ್ಣ ಅಷ್ಟಾಕ್ಷರ ಮಂತ್ರವನ್ನು
ಇಷ್ಟುಮಾತ್ರ ತಿಳಿದವರೆಷ್ಟು ಪುಣ್ಯ ಮಾಡಿದಾರೊ
ಸೃಷ್ಟಿಯೊಳಗೆ ಇವರು ಶ್ರೇಷ್ಠರೆಂದು ಅರಿತರೆ
ಕಷ್ಟವು ಬಾರದು ಎಂದೆಂದು
ಅಷ್ಟದಾರಿದ್ರ್ಯ ಹೋಹುದು
ಅಷ್ಟೈಶ್ವರ್ಯವು ಬಾಹುದು
ಇಷ್ಟು ಮಾತ್ರವಲ್ಲ ಕೇಳೊ
ಅಷ್ಟಪುತ್ರರು ಆಹೊರು ದೃಷ್ಟಿ ಬಾರದಂತೆ
ಮನದಿಷ್ಟ್ಟಾರ್ಥವ ಕೊಟ್ಟು ಕಾವ
ಅಷ್ಟದಿಕ್ಕಿನೊಡೆಯನೊಬ್ಬ [೧]

ನಿತ್ಯ ಪುಷ್ಕರಿಣಿ ಸುತ್ತಮುತ್ತ
ಹದಿನಾರು ತೀರ್ಥ ನಿತ್ಯ ನೆಲೆಯಾಗಿರಲು
ಪ್ರತ್ಯೇಕಶ್ವತ್ಥ ವಿರಾಜೀ
ಅರ್ಥಿ ನೋಡ ಬಂದರೆಂದು
ಶ್ರುತ್ಯರ್ಥ ಕೊಂಡಾಡುತ್ತದೆ
ಅತ್ಯಂತಾಹಂಕಾರದಿಂದಲಿ
ಸತ್ಯಲೋಕದಿ ಬೊಮ್ಮನು
ಭೃತ್ಯರನೆ ಕೂಡಿ ಕೊಂಡು
ಇತ್ತೆರದಿ ನಿಂತು ಕೈಯ್ಯ ಎತ್ತಿ ಮುಗಿವುದೆಂದೆನೆ
ರತುನ ಭೂಷಣ ಆಣಿ-ಮುತ್ತಿನೋಲೆ ಮೂಗುತಿಯು
ಮುತ್ತೈದೆ ಅಂಬುಜವಲ್ಲಿಗೆ ಕೊಟ್ಯಾದಿವರಾಹ [೨]

ಎಲ್ಲೆಲ್ಲಿ ಪುಣ್ಯತೀರ್ಥ ಎಲ್ಲೆಲ್ಲಿ ಹರಿ ಚರಿತ್ರೆ
ಎಲ್ಲೆಲ್ಲಿ ಸ್ನಾನ ಸಂಧ್ಯಾ ಎಲ್ಲೆಲ್ಲಿ ಜಪ ತಪವು
ಎಲ್ಲೆಲ್ಲಿ ದೇವತಾರ್ಚನೆ ಎಲ್ಲೆಲ್ಲಿ ಶ್ರೀಹರಿ ಕಥೆ
ಎಲ್ಲೆಲ್ಲಿ ಮಧ್ವಮತ ಸ್ತೋಮ
ಎಲ್ಲೆಲ್ಲಿ ಯಜ್ಞಾದಿಹೋಮ ಎಲ್ಲೆಲ್ಲಿ ಋಷಿ ಆಶ್ರಮ
ಎಲ್ಲೆಲ್ಲಿ ಗಂಧರ್ವಗಾನ ಎಲ್ಲೆಲ್ಲಿ ನಂದನವನ
ಮಲ್ಲಿಗೆ ಹೂವನದಲ್ಲಿ ವರಾಹ
ಅಂಬುಜವಲ್ಲಿ ಚೆಲ್ಲಿತ್ತಾ ವನದಲ್ಲಿ ಇದ್ದ್ಯಾದಿ ವರಾಹ [೩]

ದಂಡ ಕಾರಣ್ಯ ಭೂಮಿಲಿ
ತೊಂಡ ಮಂಡಲದೊಳಗೆ
ಹಿಂಡು ಹಿಂಡು ಗಟ್ಟಿ ಬಪ್ಪ
ದಂಡಕಾಸುರ ಪಡೆಯ
ದಂಡಿಸಿ ದೈತ್ಯರನ್ನೆಲ್ಲ
ತುಂಡು ತುಂಡು ಮಾಡಿದ ನುದ್ದಂಡ
ಸೇತು ವರಾಹಯ್ಯನು
ಕಂಡು ಭಜಿಸಿರೊ ಗಜಗಂಡು ಸುಯಜ್ಞ
ಮೂರುತಿಯ ಕೊಂಡಾಡುವ ಭಜಕರ
ಮಂಡೆ ಪೂ ಬಾಡದಿಂದಿನ್ನು
ಪುಂಡರೀಕಾಕ್ಷ ತಾ ಸವಿದುಂಡು ಮಿಕ್ಕ
ಪ್ರಸಾದವನಾ ಪ್ರ-ಚಂಡ ಹನುಮಂತಗೆ ಕೊಟ್ಟ [೪]

ಭಾರವ ಮುಗಿಪೋವ್ಯಾಳೆ ಗರುಡನ
ಕಂಡು ಈಗ ಗುರುಮಂತ್ರ ಉಪದೇಶ ಶ್ರೀ-ಹರಿ
ಸ್ಮರಣೆಗಳಿಂದ ನರಕಬಾಧೆಗಳ
ಇಲ್ಲದಂತೆ ಮಾಡಿ-ದರು
ಶ್ರೀಹರಿಯ ವಾಲಗದಿಂದಲಿ ತಿರುಪತಿ
ಸುತ್ತ ಶೇಷಗಿರಿಯ ವಾಸದಲ್ಲಿಪ್ಪ
ವರಾಹ ವೆಂಕಟೇಶನ ಚರಣ
ಕಮಲವನ್ನು ಹರುಷದಿಂದಲಿ ಕಂಡು
ಪರಮ ಸುಖವನಿತ್ತ ಹಯವದನನ ನಂಬಿರೊ [೫]


AdivarAhana celuva pAdava kANade
kaNNu vEdaneyu Agi
balu bAdhisuttalide yenna
I dhareyoLage Suklanadige
dakShiNadallidda mE-N dADe attittaMda /pa./

aShTA svayaM vyakta
SrImuShNa aShTAkShara maMtravannu
iShTumAtra tiLidavareShTu puNya mADidAro
sRuShTiyoLage ivaru SrEShThareMdu aritare
kaShTavu bAradu eMdeMdu
aShTadAridrya hOhudu
aShTaiSvaryavu bAhudu
iShTu mAtravalla kELo
aShTaputraru Ahoru dRuShTi bAradaMte
manadiShTTArthava koTTu kAva
aShTadikkinoDeyanobba [1]

nitya puShkariNi suttamutta
hadinAru tIrtha nitya neleyAgiralu
pratyEkaSvattha virAjI
arthi nODa baMdareMdu
Srutyartha koMDADuttade
atyaMtAhaMkAradiMdali
satyalOkadi bommanu
BRutyarane kUDi koMDu
itteradi niMtu kaiyya etti mugivudeMdene
ratuna BUShaNa ANi-muttinOle mUgutiyu
muttaide aMbujavallige koTyAdivarAha [2]

ellelli puNyatIrtha ellelli hari caritre
ellelli snAna saMdhyA ellelli japa tapavu
ellelli dEvatArcane ellelli SrIhari kathe
ellelli madhvamata stOma
ellelli yaj~jAdihOma ellelli RuShi ASrama
ellelli gaMdharvagAna ellelli naMdanavana
mallige hUvanadalli varAha
aMbujavalli cellittA vanadalli iddyAdi varAha [3]

daMDa kAraNya BUmili
toMDa maMDaladoLage
hiMDu hiMDu gaTTi bappa
daMDakAsura paDeya
daMDisi daityarannella
tuMDu tuMDu mADida nuddaMDa
sEtu varAhayyanu
kaMDu Bajisiro gajagaMDu suyaj~ja
mUrutiya koMDADuva Bajakara
maMDe pU bADadiMdinnu
puMDarIkAkSha tA saviduMDu mikka
prasAdavanA pra-caMDa hanumaMtage koTTa [4]

BArava mugipOvyALe garuDana
kaMDu Iga gurumaMtra upadESa SrI-hari
smaraNegaLiMda narakabAdhegaLa
illadaMte mADi-daru
SrIhariya vAlagadiMdali tirupati
sutta SEShagiriya vAsadallippa
varAha veMkaTESana caraNa
kamalavannu haruShadiMdali kaMDu
parama suKavanitta hayavadanana naMbiro [5]

Leave a Reply

Your email address will not be published. Required fields are marked *

You might also like

error: Content is protected !!