Baro guru raghavendra

Composer : Shri Guru Shrisha Vittala

ಬಾರೋ ಗುರುರಾಘವೇಂದ್ರ ಬಾರಯ್ಯ ಬಾ ಬಾ || ಪ ||
ಹಿಂದು ಮುಂದಿಲ್ಲೆನಗೆ ನೀ ಗತಿ ಎಂದು ನಂಬಿದೆ ನಿನ್ನ ಪಾದವ
ಬಂಧನವ ಬಿಡಿಸೆನ್ನ ಕರಪಿಡಿ ನಂದಕಂದ ಮುಕುಂದ ಬಂಧೋ || ಅ.ಪ. ||

ಸೇವಕನೆಲೊ ನಾನು – ಧಾವಿಸಿ ಬಂದೆನು
ಸೇವೆ ನೀಡೆಲೊ ನೀನು
ಸೇವಕನ ಸೇವೆಯನು ಸೇವಿಸಿ
ಸೇವ್ಯ-ಸೇವಕ ಭಾವವೀಯುತ
ಠಾವುಗಾಣಿಸಿ ಪೊರೆಯೊ ಧರೆಯೊಳು
ಪಾವನಾತ್ಮಕ ಕಾಯ್ವ ಕರುಣಿ || ೧ ||

ಕರೆದರೆ ಬರುವಿಯೆಂದು – ಸಾರುವುದು ಡಂಗುರ
ತ್ವರಿತದಿ ಒದಗೋ ಬಂದು
ಜರಿಯ ಬೇಡವೊ ಬರಿದೆ ನಿನ್ನಯ
ವಿರಹ ತಾಳದೆ ಮನದಿ ಕೊರಗುವೆ
ಹರಿಯ ಸ್ಮರಣೆಯ ನಿರುತದಲಿ
ಎನಗ್ ಹರುಷದಲಿ ನೀ ನಿರುತ ಕೊಡುತಲಿ || ೨ ||

ನರಹರಿ ಪ್ರಿಯನೆ ಬಾ – ಗುರು ಶ್ರೀಶವಿಠ್ಠಲನ
ಕರುಣಾಪಾತ್ರನೆ ಬೇಗ ಬಾ
ಗುರುವರನೆ ಪರಿಪೋಷಿಸೆನ್ನನು
ಮರೆಯದಲೆ ತವಚರಣ ಕೋಟಿಯಲಿರಿಸಿ
ಚರಣಾಂಬುಜವ ತೋರುತ
ತ್ವರಿತದಲಿ ಓಡೋಡಿ ಬಾ ಬಾ || ೩ ||


bArO gururAghavEMdra bArayya bA bA       || pa ||
hiMdu muMdillenage nI gati eMdu naMbide ninna pAdava
baMdhanava biDisenna karapiDi naMdakaMda mukuMda baMdhO || a.pa. ||

sEvakanelo nAnu – dhAvisi baMdenu
sEve nIDelo nInu
sEvakana sEveyanu sEvisi
sEvya -sEvaka bhAvavIyuta
ThAvugANisi poreyo dhareyoLu
pAvanAtmaka kAyva karuNi        || 1 ||

karedare baruviyeMdu – sAruvudu DaMgura
tvaritadi odagO baMdu
jariya bEDavo baride ninnaya
viraha tALade manadi koraguve
hariya smaraNeya nirutadali
enag haruShadali nI niruta koDutali        || 2 ||

narahari priyane bA – guru shrIshaviThThalana
karuNApAtrane bEga bA
guruvarane paripOShisennanu
mareyadale tavacaraNa kOTiyalirisi
caraNAMbujava tOruta
tvaritadali ODODi bA bA        || 3 ||

Leave a Reply

Your email address will not be published. Required fields are marked *

You might also like

error: Content is protected !!