Composer : Shri Vadirajaru
ಗಾಡಿಕಾರ ಶ್ರೀಕೃಷ್ಣ
ರನ್ನ ಬಿಡದಿರೊ ಎನ್ನ [ಪ]
ಬಡವರ ರಕ್ಷಿಪನ್ನ
ಅಡಿಗೆರಗುವೆ ನಿನ್ನ [ಅ.ಪ]
ಕಡಲ ಮಗಳ ಗಂಡ
ಒಡಲೊಳು ತೋರ್ದಜಾಂಡ
ಪಿಡಿದ ದಂಡ ದೋರ್ದಂಡ
ಬೇಡಿದಿಷ್ಟ ದಾನಶೌಂಡ (೧)
ಶರಧಿ ಮಧ್ಯದಿ ಪುರವ
ನಿರ್ಮಿಸಿದ ಧೀರ
ಈರೇಳು ಭುವನೋದ್ಧಾರ
ನೀರದ ಶ್ಯಾಮಲಾಕಾರ (೨)
ಮಂದಸ್ಮಿತ ಮುಖದಿಂದ
ಬಂದು ಉಡುಪಿಲಿ ನಿಂದ
ನಂದನ ಕಂದ ಮುಕುಂದ
ವೃಂದಾರಕೇಂದ್ರ ಗೋವಿಂದ (೩)
ಭಾವಗೊಲಿದಜೋದ್ಭವ
ಭವಸಂಜಾತರ ಕಾವ
ಭವಾಬ್ಧಿ ತಾರಕದೇವ
ಭಾವಿಸುವರ ಸಂಜೀವ (೪)
ಮಧ್ವಮುನಿಪನೊಡೆಯ
ಶುದ್ಧಯತಿ ಗಣಪ್ರಿಯ
ಶುದ್ಧ ವಾದಾಗಮಜ್ಞೇಯ
ಮುದ್ದು ಹಯವದನರಾಯ (೫)
gADikAra SrIkRuShNa
ranna biDadiro enna [pa]
baDavara rakShipanna
aDigeraguve ninna [a.pa]
kaDala magaLa gaMDa
oDaloLu tOrdajAMDa
piDida daMDa dOrdaMDa
bEDidiShTa dAnaSauMDa (1)
Saradhi madhyadi purava
nirmisida dhIra
IrELu BuvanOddhAra
nIrada SyAmalAkAra (2)
maMdasmita muKadiMda
baMdu uDupili niMda
naMdana kaMda mukuMda
vRuMdArakEMdra gOviMda (3)
BAvagolidajOdBava
BavasaMjAtara kAva
BavAbdhi tArakadEva
BAvisuvara saMjIva (4)
madhvamunipanoDeya
Suddhayati gaNapriya
Suddha vAdAgamaj~jEya
muddu hayavadanarAya (5)
Leave a Reply