Avataratraya Suvvali – Hanuma Suvvali

Composer : Shri Vadirajaru

By Smt.Shubhalakshmi Rao

ಹನುಮ ಸುವ್ವಾಲಿ

ಸುವ್ವಿ ಹನುಮಂತ ಸುವ್ವಿ
ಸುವ್ವಿ ಭೀಮಸೇನ ಸುವ್ವಿ
ಸುವ್ವಿ ಮಧ್ವರಾಯರಿಗೆ ಸುವ್ವಾಲಿ |ಪ|

ಸಿರಿಯ ರಮಣನಾದ ಶ್ರೀ ಹರಿಯ ದಿವ್ಯ ಚರಣಕ್ಕೆರಗಿ
ಹರುಷದಿಂದ ಭಾರತೀಶರನ್ನು ಭಜಿಸುವೆ |೧|

ಅಮರವರ್ಯರೆಲ್ಲ ಕ್ಷೀರಾಬ್ಧಿಯಲ್ಲಿ ಮನೆಯಮಾಡಿ
ಕಮಲೆಯೊಡನೆ ರಮಿಸುವ ಹರಿಯ ಕಂಡರು |೨|

ರಕ್ಷಿಸಯ್ಯ ಲಕ್ಷ್ಮೀಲೋಲ ರಕ್ಷಿಸಯ್ಯ ಭಕ್ತಪಾಲ
ರಕ್ಷಿಸೆಂದು ಬೇಡಿದರು ಕುಕ್ಷಿಲೋಲನ |೩|

ಮೀನನಾಗಿ ನಿಗಮಚೋರ ದಾನವನ ಗೆಲಿದು ಬಂದು
ದಾನ ಮಾಡಿದೆಯೋ ವೇದಾದಿ ವಿದ್ಯವ |೪|

ಮಂದರಾದ್ರಿ ಹಾಕಿ ಜಲಧಿ ಮಥಿಸುತಿರಲು ಕೂರ್ಮರೂಪ
ದಿಂದ ಹೋಗಿ ಅಮೃತವನ್ನು ತಂದು ನೀಡಿದೆ |೫|

ವರಾಹನಾಗಿ ಹಿರಣ್ಯಾಕ್ಷನ ವಧೆಯಮಾಡಿ ಗೆಲಿದು ಬಂದೆ
ಧರಣಿಯೆತ್ತಿ ನಮ್ಮ ಸಲಹಿದಾತನಲ್ಲವೇ |೬|

ಮಗನ ಹಗೆಯ ಬಗೆದು ದೈತ್ಯ ಮತ್ಸರವ ಮಾಡುತಿರಲು
ಮೃಗನರರ ರೂಪದಿಂದ ಮಗನ ಸಲಹಿದೆ |೭|

ಇಂದ್ರನಲೋಕ ಬಲೀಂದ್ರನ-ಪಹರಿಸುತಲಿರಲು
ಉಪೇಂದ್ರನಾಗಿ ತಂದ ಮಧುಸೂದನನಲ್ಲವೇ |೮|

ಎರಡು ಹತ್ತು ಒಂದು ಬಾರಿ ಧರಣಿ ನಾಯಕರ ಗೆಲಿದು
ಪರಶುರಾಮನಾಗಿ ನೀ ಪ್ರಕಟನಾದೆಯ |೯|

ಈಗ ಮತ್ತೆ ಕುಂಭಕರ್ಣ ರಾವಣಾದಿ ಅಸುರರೆಲ್ಲ
ಆಗ ಭೋಗದಿಂದ ಹತ ರಾಗುತ್ತಿದ್ದರು |೧೦|

ಅಂದು ಮಥುರ ಪಟ್ಟಣ ಹೊಕ್ಕು ಮಾವ ಕಂಸನ ಕೊಂದು
ತಂದೆ ತಾಯಿಯರ ಬಂಧನವ ಬಿಡಿಸಿದೆ |೧೧|

ತ್ರಿಪುರರ ಸತಿಯರ ವ್ರತಗಳನ್ನು ಅಪಹರಿಸಿ |
ನಿಪುಣನಾಗಿ ಗೆಲಿದು ಬಂದ ಚಪಲನಲ್ಲವೇ |೧೨|

ಕಲ್ಕ್ಯಾವತಾರನಾಗಿ ಕೈಲಿ ಖಡ್ಗವನ್ನು ಪಿಡಿದು
ಲೆಕ್ಕವಿಲ್ಲದ ದುಷ್ಟರ ಗೆಲಿದ ದಿಟ್ಟನಲ್ಲವೇ |೧೩|

ಸುರರ ಮೊರೆಯ ಕೇಳಿದ ಗರುಡಗಮನ ರಾಮನಾದ
ಹರುಷದಿಂದ ಭಾರತೀಶ ಹನುಮನಾದನು |೧೪|

ತಂದೆ ತಾಯಿಯರ ಮಾತು ತಪ್ಪದೀಶ ಈವನಕ್ಕೆ
ಬಂದು ರಾಘವರ ಪಾದ ಪದ್ಮಕ್ಕೆರಗಿದ |೧೫|

ಮಿತ್ರ ತನವ ಕೂಡಿ ಸೌಮಿತ್ರಿ ಪೂರ್ವ ಭೋಗ ಬಹಳ
ಮಿತ್ರತನವ ನಡೆಸಿದ ನಾ ಪುತ್ರ ಹನುಮನು |೧೬|

ಮುದ್ರೆ ತೆಗೆದುಕೊಂಡು ಸಮುದ್ರದಾಟಿ ಹನುಮಂತ
ಶೀಘ್ರದಿಂದ ಲಂಕೆಯ ಹೊಕ್ಕು ನೋಡಿದ |೧೭|

ಅತಿಕಾಯ ಇಂದ್ರಜಿತು ಕುಂಭಕರ್ಣರ ಅರಮನೆಯ
ಉಸಿರು ಬಿಡದೆ ಹನುಮಂತ ಹುಡುಕುತಿದ್ದನು |೧೮|

ಅಂತ:ಪುರದ ಮನೆಯಹೊಕ್ಕು ನಿಂತು ನೋಡಿದ
ಹನುಮಂತ ಮಂಚದಲ್ಲಿ ಮಂಡೋದರಿ ಮಲಗಿದ್ದಳು |೧೯|

ತಾಯಿಯೆಂದು ಬಗೆದು ಬಹಳ ಕೋಪವನ್ನು ತಾಳೆ
ವಾಯಸರೇಖೆ ಕೋರೆದಾಡೆ ಕಂಡ ಹನುಮನು |೨೦|

ತಾಯಿ ಜಾನಕಿಗೆ ಪಾದದಲ್ಲಿ ಪದ್ಮರೇಖೆ
ತ್ರಾಹಿ ತ್ರಾಹಿ ಎಂದು ಗಲ್ಲ ಮುಟ್ಟಿಕೊಂಡನು |೨೧|

ಆಡಿದ ಮಾತಿಗೆ ಆರು ಕೋಟಿ ಗೋದಾನ ಮಾಡಿದ
ಹನುಮ ಅಶೋಕವನಕೆ ಬಂದನು |೨೨|

ಮರದ ಕೆಳಗೆ ಸೀತೆ ಇರಲು ಕಂಡು ಹನುಮಂತ
ಅದೃಶ್ಯ ರೂಪದಿಂದ ಮರವನೇರಿದ |೨೩|

ಹತ್ತು ತಲೆಗೆ ಹತ್ತು ಮುತ್ತಿನ ಮುಕುಟಯಿಟ್ಟು
ರತ್ನ ಪ್ರಭೆಯಿಂದ ಅಸುರ ಇಳಿದು ಬಂದನು |೨೪|

ಎತ್ತರಾದ ಮುತ್ತಿನ ಛತ್ರವ ಹಿಡಿಸಿಕೊಂಡು
ಸೀತೆ ಇದ್ದ ವನಕ್ಕೆ ಬಂದು ಕಾಡುತಿದ್ದನು |೨೫|

ಇತ್ತ ನೋಡೇ ಸೀತೆ ನಿನಗೆ ಅಷ್ಟ ಸೌಭಾಗ್ಯ ಕೊಡುವೆ
ಪಟ್ಟದ ಲಕ್ಷ್ಮಿ ಲಂಕೆ ನಿನಗೆ ಈವೇನೆಂದನು |೨೬|

ಹೀಗೆ ನೋಡೇ ಸೀತೆ ನಿನಗೆ ಬಹಳ ಸೌಭಾಗ್ಯ ಕೊಡುವೆ
ಭಂಡಾರದ ಲಕ್ಷ್ಮಿ ಲಂಕೆ ನಿನಗೆ ಈವೇನೆಂದನು |೨೭|

ಪಾವುಡವ ಹಾಸುವರು ಚಾಮರವ ಬೀಸುವರು
ನಾರಿಯರು ಪನ್ನೀರು ಹಿಡಿದು ತಾಹರು |೨೮|

ಮಂಡೋದರಿ ಕೈಯಿಂದ ಮಂಡೆಯ ಹಿಕ್ಕಿಸುವೆ
ದುಂಡು ಮಲ್ಲಿಗೆ ಮುಡಿಸಿ ಮಡಿಸಿದೆಲೆಯ ಕೊಡಿಸುವೆ |೨೯|

ಆರು ಕಾಲಿನ ಮಂಚಕೆ ಹವಳದ ತಲೆದಿಂಬು
ಒರಗುಬಾರೆ ಸೀತೆಯೆನ್ನ ತೋಳಿಗೆಂದನು |೩೦|

ಹತ್ತು ಕಾಲಿನ ಮಂಚಕ್ಕೆ ಮುತ್ತಿನ ತಲೆ ದಿಂಬು
ಒಪ್ಪು ಬಾರೆ ಸೀತೆ ಎನ್ನ ತೋಳಿಗೆಂದನು |೩೧|

ಆರು ಕಾಲಿನ ಮಂಚಕ್ಕೆ ಉರಿವ ಕೆಂಡವ ಹಚ್ಚಿ
ಒರಗುವೆ ಶ್ರೀ ರಾಮರ ತೋಳಿಗೆಂದಳು |೩೨|

ಹತ್ತು ಕಾಲಿನ ಮಂಚಕ್ಕೆ ಕಿಚ್ಚು ಕೆಂಡವ ಹಚ್ಚಿ
ಒಪ್ಪುವೆ ಶ್ರೀ ರಾಮರ ತೋಳಿಗೆಂದಳು |೩೩|

ಹತ್ತಿಲಿದ್ದಾ ತ್ರಿಜಟೆತರು ಮಿತ್ರೆಯರು ಒಂದಾಗಿ
ಸೀತೆಯ ಒಂದು ಮಾಡಿ ಕೊಡಿರೆಂದನು |೩೪|

ಸೀತೆ ಒಂದಾಗಳೋ ಪಾಪಿ ರಾವಣನೇ ಕೇಳು |
ಲಂಕೆಗೆ ಅಳಲು ನೀನು ತಂದುಕೊಂಡೆಯ |೩೫|

ಸಿಡಿಲು ಪೊಟ್ಟಣ ಕಟ್ಟಿ ಕೆಡಬೇಡ ರಾವಣ |
ಸಿಡಿದು ಹೋಗೋ ಕಾಲ ನಿನಗೆ ಬಂದಿತೆಂದರು |೩೬|

ನಾಳೆ ಇಷ್ಟ್-ಹೊತ್ತಿಗೆ ಶ್ರೀ ರಾಮರು ಸೇತುವೆ ಕಟ್ಟಿ
ನಿನ್ನ ಶಿರವು ನೆಲಕೆ ಬೀಳ್ಪ ಕನಸು ಕಂಡೆವು |೩೭|

ಕಂಡ ಕನಸು ಹುಸಿಯಲ್ಲ ಮಂದಮತಿ ಮನೆಗೆ ಹೋಗು
ಸೀತೆಯ ಬಿಟ್ಟು ಸುಖಿ ಯಾಗು ಯೆಂದರು |೩೮|

ಅತ್ತಲಿಂದ ರಾವಣ ಕೋಟೆಯೊಳಗೆ ಹೋಗುತಿರಲು
ಇತ್ತಲಿಂದ ಹನುಮಂತ ಮರವನಿಳಿದನು |೩೯|

ಅಂದು ಒಂದು ಮೃಗವು ಬಂದು ಶ್ರೀರಾಮರ ಅಗಲಿಸಿತು
ಇಂದು ಅಸುರ ಕಪಿಯೇ ನಿನ್ನ ಕಳುಹಿಕೊಟ್ಟನೇ |೪೦|

ಅಂಜನೇಯ ಕಂದನು ವಾಯುಕುಮಾರನು
ರಾಮ ಮುದ್ರಿಕೆ ಕೈಯ್ಯಲ್ಲಿಟ್ಟು ಎರಗಿ ನಿಂತನು |೪೧|

ಉಂಗುರವ ಕಂಡು ಸೀತೆ ಕಂಗಳಿಗೆ ಒತ್ತಿಕೊಂಡು
ಉರದಲಪ್ಪಿ ಶಿರದಲ್ಲಿಟ್ಟು ಕೇಳುತಿದ್ದಳು |೪೨|

ಏನಯ್ಯ ಹನುಮಂತ ಶ್ರೀರಾಮರು ಕ್ಷೇಮವೇ |
ಪ್ರೇಮದಿಂದ ಒಮ್ಮೆಗಾದರು ಎನ್ನ ನೆನೆವರೆ |೪೩|

ನಿಮ್ಮ ಧ್ಯಾನವೇ ತಾಯಿ ಕಂಗಳಿಗೆ ನಿದ್ರೆ ಇಲ್ಲ
ನಿಮ್ಮ ಹೊರತಾಗಿ ಅನ್ಯಥಾ ಇಲ್ಲವೂ |೪೪|

ಹವಳದ ಕುಡಿಯಂತೆ ಹೊಳೆಯುತಿರೆ ರಾಮರು
ಅಯೋಧ್ಯ ಪಟ್ಟಣ ತಮಗೆ ಅಡವಿಯೆಂದರು |೪೫|

ತಾಯಿ ನಿಮ್ಮ ಹೆಗಲಲಿಟ್ಟು ವಾರಿಧಿಯ ಧಾಟಿಸುವೆ
ತಾಯಿ ಚಿತ್ತೈಸು ಎಂದು ನುಡಿದ ಹನುಮನು |೪೬|

ಹತ್ತಿರಿದ್ದ ದೂತರೆಲ್ಲ ಸುತ್ತುಕಟ್ಟಿ ಬಾಹರು
ಮತ್ತೆ ಎನ್ನ ಕೊಂಡು ಹೇಗೆ ಶರಧಿ ದಾಟುವಿ |೪೭|

ಬಾಲದಿಂದ ರಕ್ಕಸರ ಲೀಲೆಯಿಂದ ಕೊಲ್ಲುವೆ
ತಾಯಿ ಚಿತ್ತೈಸಿ ಎಂದು ನುಡಿದ ಹನುಮನು |೪೮|

ಸಾಲದು ಧೈರ್ಯವು ನೀನು ಹೋಗಿ ಬ್ಯಾಗನೆ |
ಶ್ರೀರಾಮರ ಒಡಗೊಂಡು ಬಾರೋ ಎಂದಳು |೪೯|

ಮನದಿ ಹರ್ಷವನ್ನು ತಾಳಿ ಮಣಿಯ ಕೊಟ್ಟಳಾಗಲೇ
ಮಣಿಯ ಕೊಂಡು ಹನುಮಂತ ಹೊರಟು ನಿಂತನು |೫೦|

ಅಮ್ಮ ಹಸಿದನೆಂದರೆ ಬಿದ್ದ ಹಣ್ಣು ಮೆಲ್ಲೆನಲು
ಹೆಮ್ಮರವ ಕಿತ್ತು ಖೆಡವಿ ಹಣ್ಣು ಮೆದ್ದನು |೫೧|

ಮಣಿಯ ಕೊಂಡು ಹನುಮಂತ ನಿಂಬೆಯಾ ವನವ ಪೊಕ್ಕು
ನಿಂಬೆ ವನಗಳೆಲ್ಲ ಕಿತ್ತಿ ದೊಂಬಿ ಮಾಡಿದ |೫೨|

ಅಕ್ಷಯ ಕುಮಾರನ ಕುಟ್ಟಿ ಕೆಡಹಿದ ಹನುಮ
ಬಾಳೆ ವನಗಳೆಲ್ಲ ಕಿತ್ತಿ ಧೂಳಿ ಮಾಡಿದ |೫೩|

ಅಕ್ಷಯ ನಂದನಾದಿ ಘೋರ ರಾಕ್ಷಸರ ಸಂಹರಿಸಿ
ದಕ್ಷ ವೃಕ್ಷಗಳೆಲ್ಲ ಕಿತ್ತಿದ ರಾಕ್ಷಸ ರೌದ್ರನು |೫೪|

ಕಾವಲಿದ್ದ ದೂತರೆಲ್ಲ ರಾವಣಗೆ ಹೇಳಲು
ಹಿಡಿದು ತನ್ನಿರೆನುತ ಭೃತ್ಯರೊಡನೆ ನುಡಿದನು |೫೫|

ಹನುಮ ಸಿಕ್ಕಿದನು ಎಂದು ಬ್ರಹ್ಮಾಸ್ತ್ರ ತರಲು
ಹಲ್ಲು ಕಿರಿದು ಬೀದಿಯೊಳಗೆ ನಗುತ ನಿಂತನು |೫೬|

ಇಂದ್ರಜಿತು ಬಂದು ಬ್ರಹ್ಮಾಸ್ತ್ರದಿಂದ ಕಟ್ಟಿ ಒಯ್ದು
ಮುಂದಿಡಲು ರಾವಣೇಶ ನಸುನಕ್ಕನು |೫೭|

ಯಾವಾ ದೇಶದಿಂದ ಬಂದೆ ಯಾರ ಕಂದನೆನುತಲಿ
ರಾವಣೇಶ ಕೇಳಿದನು ವಾನರೇಶನ |೫೮|

ನಮ್ಮ ಒಡೆಯ ರಾಮಚಂದ್ರ ಎನಗೆ ಹನುಮನೆಂಬರು
ಹೆಮ್ಮೆ ನಿನಗೆ ಬೇಡ ಶರಣೆನ್ನು ರಾವಣ |೫೯|

ನಮ್ಮ ಬಂಟನಾದರೆ ಭೂಮಿ ಸಾಮ್ರಾಜ್ಯ ಕೊಡುವೆ
ತಳಿಗೆ ತಾಂಬೂಲ ತಂದು ಕೊಟ್ಟ ಹನುಮಗೆ |೬೦|

ಕೊಟ್ಟ ತಾಂಬೂಲವನ್ನು ತಟ್ಟೆಗ್ಹಾಕಿದ ಹನುಮಂತ
ಕುಟ್ಟಿ ನಿನ್ನ ಕೆಡಹೋದು ನೀ ಅರಿಯೆ ಎಂದನು |೬೧|

ಅಲ್ಪ ನೀನು ಸತ್ಯ ಸಂಕಲ್ಪನೊಳು ವೈರ ಬೆಳಸಿ
ಅಲ್ಪ ಭಾಗ್ಯವಾಯ್ತು ನಿನಗೆ ತಪ್ಪದೆಂದನು |೬೨|

ನುಡಿಗಳೆಲ್ಲ ಏಕೋಭಾವ ಒಡೆಯ ಕೇಳಿ ಕುಪಿತನಾಗಿ
ಹಿಡಿದು ಬಡಿಯಿರೆನುತ ಭೃತ್ಯರೊಡನೆ ನುಡಿದನು |೬೩|

ದೂತನ ಕೊಲ್ಲುವುದು ನೀತಿ ಯಲ್ಲವೆಂದರೆ |
ಮಾತನಾಡದೆ ವನವನೇಕೆ ಮುರಿದೆಯೆಂದರು |೬೪|

ನಾನು ಮುರಿಯಲಿಲ್ಲ ಎನ್ನ ಬಾಲ ಮುರಿಯಿತೆಂದೆನುತ
ಲೀಲೆಯಿಂದ ಹನುಮಂತ ತನ್ನ ಬಾಲ ತೋರಿದ |೬೫|

ಬಾಲಕ್ಕೆ ಶಿಕ್ಷೆಯ ಮಾಡಿಸುವೆ ಕೇಳೆನುತ
ಹೇಳಿದನು ಅಸುರ ತನ್ನ ಆಳುಮಂದಿಗೆ |೬೬|

ಚಂದ್ರ ಶಾಲೆಯ ಹೊಕ್ಕು ಜವಳಿಯ ತೆಗೆದು ಕೊಂಡು
ತಂದು ಸುತ್ತಿದರು ಹನುಮಂತನ ಬಾಲಕೆ |೬೭|

ಕುಂಭಕರ್ಣನ ಮನೆಯ ಹೊಕ್ಕು ಜವಳಿಯ ತೆಗೆದುಕೊಂಡು
ತಂದು ಸುತ್ತಿದರು ಹನುಮಂತನ ಬಾಲಕೆ |೬೮|

ಇಂದ್ರಜಿತನ ಮನೆಯ ಹೊಕ್ಕು ಪೆಂಡೆಗಳ ತೆಗೆದುಕೊಂಡು
ತಂದು ಸುತ್ತಿದರು ಹನುಮಂತನ ಬಾಲಕೆ |೬೯|

ಎಷ್ಟು ಬಟ್ಟೆ ಸುತ್ತಿದರು ಮತ್ತೆ ಬಾಲ ಬೆಳೆಯುತಿರೆ
ವನದ ಸೀತೆ ಸೀರೆ ಸೆಳೆದು ತನ್ನಿರೆಂದನು |೭೦|

ಆಡಿದ ಮಾತನು ಕೇಳಿದನು ಬೇಗನೆ ಲೀಲೆಯಿಂದ
ಹನುಮ ತನ್ನ ಬಾಲ ಮುದುರಿದ |೭೧|

ಅತಿಕಾಯ ಇಂದ್ರಜಿತು ಕುಂಭಕರ್ಣ ಮೊದಲಾಗಿ ಅದ್ದಿ
ತೈಲ ದೊಳಗೆ ದೀಪ ಮುಟ್ಟಿಸಿದರು |೭೨|

ಮುಟ್ಟಿಸಿದ ಮಾತ್ರದಿಂದ ಉಪ್ಪರಿಗೆ ಏರಿದನು
ಉಪ್ಪರಿಗೆ ಸಾಲು ಉರಿದು ಕುಪ್ಪೆ ಬಿದ್ದವು |೭೩|

ಮಾಳಿಗೆ ಮನೆಯ ಸುಟ್ಟು ಚಂದ್ರಶಾಲೆಯ ಸುಟ್ಟು
ಮಾಳಿಗೆ ಮನೆಗಳೆಲ್ಲ ಧೂಳಿಯಾದುವು |೭೪|

ತಪ್ಪದೆ ಮನೆಮನೆಯ ಉಪ್ಪರಿಗೆಯೆಲ್ಲ ಸುಟ್ಟು
ಮತ್ತೆ ವಿಭೀಷಣನ ಮನೆಯ ತಪ್ಪಿಸೀದನು |೭೫|

ಸೀತೆಯಿದ್ದ ವನವ ಬಿಟ್ಟು ಮಿಕ್ಕ ವನಗೆಲ್ಲೆಲ್ಲ ಸುಟ್ಟು
ಯಾತುಧಾನ ಪತಿಯ ಗಡ್ಡವನ್ನೆ ಸುಟ್ಟನು |೭೬|

ಹಾರುತ ಜಿಗಿಯುತ ದಂತ ತೋರಿ ನಗುತಲಿ
ಪಂಥವಾಡಿ ಗೆದ್ದ ಹನುಮಂತರಾಯನು |೭೭|

ತೈಲ ಜ್ವಾಲದಿಂದ ಪುರವ ಸುಟ್ಟು ಬೂದಿ ಮಾಡೆ |
ಯಾರ ಬಂಟ ನೆನುತಾ ವಿಶ್ವಕರ್ಮ ಕೇಳಿದ |೭೮|

ಸರ್ಪಕಾಳಿಂಗನ ತುಳಿದ ಗೋವುಗಳನು ಕಾಯ್ದ |
ತಾಟಕಿಯ ಮೂಗು ಕೊಯ್ದ ರಾಮರ ಬಂಟನು |೭೯|

ಮರಳಿ ಶರಧಿ ದಾಟಿ ರಾಮರ ಚರಣ ಕಮಲಗಳಿಗೆ ಬಾಗಿ
ಹರುಷದಿಂದ ಮಣಿಯ ಕೊಟ್ಟು ಎರಗಿ ನಿಂತನು |೮೦|

ಪ್ರೀತಿಯಿಂದ ರಾಮಚಂದ್ರ ವಾತಾತನಯನಪ್ಪಿಕೊಂಡು
ಯಾತುಧಾನ ಕಥೆಯ ಸಂವಾದ ಮಾಡಿದರು |೮೧|

ರಣಕೆ ಬಂದ ರಕ್ಕಸರ ಎಣಿಕೆಯಿಲ್ಲದೆ ಕೊಂದು
ಬಿಸುಟು ಮನವ ನಿಲ್ಲಿಸಿದ ನಮ್ಮ ಘನ ಹನುಮನು |೮೨|

ಶರಧಿ ಸೇತುವೆಯ ಕಟ್ಟಿ ದುರುಳ ರಾವಣನ ಕೊಂದು
ಪುರವ ಅನುಜಗಿತ್ತರು ರಾಮಚಂದ್ರರು |೮೩|

ಜಾನಕಿ ಸಹಿತಾಗಿ ಜಗವ ಪಾಲಿಸುವ ರಾಮರ
ತಾನೇ ಭಜಿಸಿ ಸುಖದಲಿದ್ದ ವಾನರೇಶನು |೮೪|

ರಘುಕುಲೇಶ ರಾಮನಾದ ಯದುಕುಲೇಶ ಕೃಷ್ಣನಾದ
ಹನುಮ ಸೇವಾರ್ಥ ಕುಂತಿ ತನಯನಾದನು |೮೫|

ಸುವ್ವಿ ಹನುಮಂತ ಸುವ್ವಿ
ಸುವ್ವಿ ಭೀಮಸೇನ ಸುವ್ವಿ
ಸುವ್ವಿ ಮಧ್ವರಾಯರಿಗೆ ಸುವ್ವಾಲಿ ||


hanuma suvvAli

suvvi hanumaMta suvvi
suvvi BImasEna suvvi
suvvi madhvarAyarige suvvAli |pa|

siriya ramaNanAda SrI hariya divya caraNakkeragi
haruShadiMda BAratISarannu Bajisuve |1|

amaravaryarella kShIrAbdhiyalli maneyamADi
kamaleyoDane ramisuva hariya kaMDaru |2|

rakShisayya lakShmIlOla rakShisayya BaktapAla
rakShiseMdu bEDidaru kukShilOlana |3|

mInanAgi nigamacOra dAnavana gelidu baMdu
dAna mADideyO vEdAdi vidyava |4|

maMdarAdri hAki jaladhi mathisutiralu kUrmarUpa
diMda hOgi amRutavannu taMdu nIDide |5|

varAhanAgi hiraNyAkShana vadheyamADi gelidu baMde
dharaNiyetti namma salahidAtanallavE |6|

magana hageya bagedu daitya matsarava mADutiralu
mRuganarara rUpadiMda magana salahide |7|

iMdranalOka balIMdrana-paharisutaliralu
upEMdranAgi taMda madhusUdananallavE |8|

eraDu hattu oMdu bAri dharaNi nAyakara gelidu
paraSurAmanAgi nI prakaTanAdeya |9|

Iga matte kuMBakarNa rAvaNAdi asurarella
Aga BOgadiMda hata rAguttiddaru |10|

aMdu mathura paTTaNa hokku mAva kaMsana koMdu
taMde tAyiyara baMdhanava biDiside |11|

tripurara satiyara vratagaLannu apaharisi |
nipuNanAgi gelidu baMda capalanallavE |12|

kalkyAvatAranAgi kaili khaDgavannu piDidu
lekkavillada duShTara gelida diTTanallavE |13|

surara moreya kELida garuDagamana rAmanAda
haruShadiMda BAratISa hanumanAdanu |14|

taMde tAyiyara mAtu tappadISa Ivanakke
baMdu rAGavara pAda padmakkeragida |15|

mitra tanava kUDi saumitri pUrva BOga bahaLa
mitratanava naDesida nA putra hanumanu |16|

mudre tegedukoMDu samudradATi hanumaMta
shIghradiMda laMkeya hokku nODida |17|

atikAya iMdrajitu kuMBakarNara aramaneya
usiru biDade hanumaMta huDukutiddanu |18|

aMta:purada maneyahokku niMtu nODida hanumaMta
maMcadalli maMDOdari malagiddaLu |19|

tAyiyeMdu bagedu bahaLa kOpavannu tALe
vAyasarEKe kOredADe kaMDa hanumanu |20|

tAyi jAnakige pAdadalli padmarEKe
trAhi trAhi eMdu galla muTTikoMDanu |21|

ADida mAtige Aru kOTi gOdAna mADida
hanuma aSOkavanake baMdanu |22|

marada keLage sIte iralu kaMDu hanumaMta
adRushya rUpadiMda maravanErida |23|

hattu talege hattu muttina mukuTayiTTu
ratna praBeyiMda asura iLidu baMdanu |24|

ettarAda muttina Catrava hiDisikoMDu
sIte idda vanakke baMdu kADutiddanu |25|

itta nODE sIte ninage aShTa sauBAgya koDuve
paTTada lakShmi laMke ninage IvEneMdanu |26|

hIge nODE sIte ninage bahaLa sauBAgya koDuve
BaMDArada lakShmi laMke ninage IvEneMdanu |27|

pAvuDava hAsuvaru cAmarava bIsuvaru
nAriyaru pannIru hiDidu tAharu |28|

maMDOdari kaiyiMda maMDeya hikkisuve
duMDu mallige muDisi maDisideleya koDisuve |29|

Aru kAlina maMcake havaLada talediMbu
oragubAre sIteyenna tOLigeMdanu |30|

hattu kAlina maMcakke muttina tale diMbu
oppu bAre sIte enna tOLigeMdanu |31|

Aru kAlina maMcakke uriva keMDava hacci
oraguve SrI rAmara tOLigeMdaLu |32|

hattu kAlina maMcakke kiccu keMDava hacci
oppuve SrI rAmara tOLigeMdaLu |33|

hattiliddA trijaTetaru mitreyaru oMdAgi
sIteya oMdu mADi koDireMdanu |34|

sIte oMdAgaLO pApi rAvaNanE kELu |
laMkege aLalu nInu taMdukoMDeya |35|

siDilu poTTaNa kaTTi keDabEDa rAvaNa |
siDidu hOgO kAla ninage baMditeMdaru |36|

nALe iShT-hottige SrI rAmaru sEtuve kaTTi
ninna Siravu nelake bILpa kanasu kaMDevu |37|

kaMDa kanasu husiyalla maMdamati manege hOgu
sIteya biTTu suKi yAgu yeMdaru |38|

attaliMda rAvaNa kOTeyoLage hOgutiralu
ittaliMda hanumaMta maravaniLidanu |39|

aMdu oMdu mRugavu baMdu shrIrAmara agalisitu
iMdu asura kapiyE ninna kaLuhikoTTanE |40|

aMjanEya kaMdanu vAyukumAranu
rAma mudrike kaiyyalliTTu eragi niMtanu |41|

uMgurava kaMDu sIte kaMgaLige ottikoMDu
uradalappi SiradalliTTu kELutiddaLu |42|

Enayya hanumaMta SrIrAmaru kShEmavE |
prEmadiMda ommegAdaru enna nenevare |43|

nimma dhyAnavE tAyi kaMgaLige nidre illa
nimma horatAgi anyathA illavU |44|

havaLada kuDiyaMte hoLeyutire rAmaru
ayOdhya paTTaNa tamage aDaviyeMdaru |45|

tAyi nimma hegalaliTTu vAridhiya dhATisuve
tAyi cittaisu eMdu nuDida hanumanu |46|

hattiridda dUtarella suttukaTTi bAharu
matte enna koMDu hEge Saradhi dATuvi |47|

bAladiMda rakkasara lIleyiMda kolluve
tAyi cittaisi eMdu nuDida hanumanu |48|

sAladu dhairyavu nInu hOgi byAgane |
SrIrAmara oDagoMDu bArO eMdaLu |49|

manadi harShavannu tALi maNiya koTTaLAgalE
maNiya koMDu hanumaMta horaTu niMtanu |50|

amma hasidaneMdare bidda haNNu mellenalu
hemmarava kittu KeDavi haNNu meddanu |51|

maNiya koMDu hanumaMta niMbeyA vanava pokku
niMbe vanagaLella kitti doMbi mADida |52|

akShaya kumArana kuTTi keDahida hanuma
bALe vanagaLella kitti dhULi mADida |53|

akShaya naMdanAdi GOra rAkShasara saMharisi
dakSha vRukShagaLella kittida rAkShasa raudranu |54|

kAvalidda dUtarella rAvaNage hELalu
hiDidu tannirenuta BRutyaroDane nuDidanu |55|

hanuma sikkidanu eMdu brahmAstra taralu
hallu kiridu bIdiyoLage naguta niMtanu |56|

iMdrajitu baMdu brahmAstradiMda kaTTi oydu
muMdiDalu rAvaNESa nasunakkanu |57|

yAvA dESadiMda baMde yAra kaMdanenutali
rAvaNESa kELidanu vAnarESana |58|

namma oDeya rAmacaMdra enage hanumaneMbaru
hemme ninage bEDa SaraNennu rAvaNa |59|

namma baMTanAdare BUmi sAmrAjya koDuve
taLige tAMbUla taMdu koTTa hanumage |60|

koTTa tAMbUlavannu taTTeg~hAkida hanumaMta
kuTTi ninna keDahOdu nI ariye eMdanu |61|

alpa nInu satya saMkalpanoLu vaira beLasi
alpa BAgyavAytu ninage tappadeMdanu |62|

nuDigaLella EkOBAva oDeya kELi kupitanAgi
hiDidu baDiyirenuta BRutyaroDane nuDidanu |63|

dUtana kolluvudu nIti yallaveMdare |
mAtanADade vanavanEke murideyeMdaru |64|

nAnu muriyalilla enna bAla muriyiteMdenuta
lIleyiMda hanumaMta tanna bAla tOrida |65|

bAlakke SikSheya mADisuve kELenuta
hELidanu asura tanna ALumaMdige |66|

caMdra SAleya hokku javaLiya tegedu koMDu
taMdu suttidaru hanumaMtana bAlake |67|

kuMBakarNana maneya hokku javaLiya tegedukoMDu
taMdu suttidaru hanumaMtana bAlake |68|

iMdrajitana maneya hokku peMDegaLa tegedukoMDu
taMdu suttidaru hanumaMtana bAlake |69|

eShTu baTTe suttidaru matte bAla beLeyutire
vanada sIte sIre seLedu tannireMdanu |70|

ADida mAtanu kELidanu bEgane lIleyiMda
hanuma tanna bAla mudurida |71|

atikAya iMdrajitu kuMbhakarNa modalAgi addi
taila doLage dIpa muTTisidaru |72|

muTTisida mAtradiMda upparige Eridanu
upparige sAlu uridu kuppe biddavu |73|

mALige maneya suTTu caMdraSAleya suTTu
mALige manegaLella dhULiyAduvu |74|

tappade manemaneya upparigeyella suTTu
matte viBIShaNana maneya tappisIdanu |75|

sIteyidda vanava biTTu mikka vanagellella suTTu
yAtudhAna patiya gaDDavanne suTTanu |76|

hAruta jigiyuta daMta tOri nagutali
paMthavADi gedda hanumaMtarAyanu |77|

taila jvAladiMda purava suTTu bUdi mADe |
yAra baMTa nenutA viSvakarma kELida |78|

sarpakALiMgana tuLida gOvugaLanu kAyda |
tATakiya mUgu koyda rAmara baMTanu |79|

maraLi sharadhi dATi rAmara caraNa kamalagaLige bAgi
haruShadiMda maNiya koTTu eragi niMtanu |80|

prItiyiMda rAmacaMdra vAtAtanayanappikoMDu
yAtudhAna katheya saMvAda mADidaru |81|

raNake baMda rakkasara eNikeyillade koMdu
bisuTu manava nillisida namma Gana hanumanu |82|

Saradhi sEtuveya kaTTi duruLa rAvaNana koMdu
purava anujagittaru rAmacaMdraru |83|

jAnaki sahitAgi jagava pAlisuva rAmara
tAnE Bajisi suKadalidda vAnarESanu |84|

raGukulESa rAmanAda yadukulESa kRuShNanAda
hanuma sEvArtha kuMti tanayanAdanu |85|

suvvi hanumaMta suvvi
suvvi BImasEna suvvi
suvvi madhvarAyarige suvvAli ||

Leave a Reply

Your email address will not be published. Required fields are marked *

You might also like

error: Content is protected !!