Composer : Shri Vadirajaru
ಭೀಮ ಸುವ್ವಾಲಿ
ಸುವ್ವಿ ಹನುಮಂತ ಸುವ್ವಿ
ಸುವ್ವಿ ಭೀಮಸೇನಾ ಸುವ್ವಿ
ಸುವ್ವಿ ಮಧ್ವ ರಾಯರಿಗೆ ಸುವ್ವಾಲಿ |ಪ|
ಹುಲಿಗೆ ಬೆದರಿ ಕುಂತಿದೇವಿ ಮಗನ ಚರಿಸಿ ಬಿಸುಡುತಿರಲು
ಹಲವು ಪರಿಯಲಿ ಗಿರಿಯು ನುಚ್ಚಾಗಿ ಹೋಯಿತು |೧|
ಕಂದಗಳೈವರ ಪಡೆದಳೂ ಕುಂತಿದೇವಿ
ಅಡವಿಯಲ್ಲಿ ರಾಯ ಅಂತರಿಸಿ ಹೋದನು |೨|
ಕಂಡು ವೇದವ್ಯಾಸರು ಬಾಲಕರ ಕರೆದು ತಂದು
ಕಂದಗಳ ನೋಡಿ ನೀವು ಸಲಹಿರೆಂದರು |೩|
ಬೇರೆ ಮನೆಯನು ಕಟ್ಟಿ ದಾಯಾದರ ಕಾವಲಿಟ್ಟು
ಓದು ಬರಹಗಳನು ಹೇಳಿ ಕಲಿಸುತಿದ್ದರು |೪|
ಭೀಮಸೇನ ನೆಂಬೋ ದಿವ್ಯ ನಾಮವನ್ನು ಇಟ್ಟುಕೊಂಡು
ಸೋಮ ಕುಲದಲಿ ಉದಿಸಿದಾರು ಸಾರ್ವಭೌಮರು |೫|
ಹಾರು ಗುಬ್ಬಿ ಮುಷ್ಟಿಯುದ್ಧ ನೀರು ಚೆಲ್ಲಾಟದಿ
ಶೌರ್ಯದಿಂದ ರಾಜ ನಂದನರ ಗೆಲಿದರು |೬|
ಕುರುಗಳೆಲ್ಲ ಮರವನೇರಿ ಫಲಗಳುದುರೆ ಸರ್ವ ವೃಕ್ಷ
ಚಲುವ ಪಾದದಲೊದ್ದು ಹಣ್ಣ ದಣಿಯ ಮೆದ್ದರು |೭|
ಪಾದ ಕರಗಳಲ್ಲಿ ಲೋಹ ಪಾಶದಿಂದ ಬಿಗಿದು ಕಟ್ಟಿ
ಪ್ರಾಸಾದ ವೇರಿ ಕೆಡವಲು ಅಮರ ಜನರೆದ್ದರು |೮|
ರಾಷ್ಟ್ರಕ್ಕೆ ಶಕುನಿ ಮುಖ್ಯ ದೂತರೆಲ್ಲ ವಿಷವನಿಕ್ಕೆ
ಕೋಷ್ಟದಲ್ಲಿ ಜೀರ್ಣವಾಯ್ತು ಪವನ ತನಯಗೆ |೯|
ಕಲಿ ಮಂತ್ರದಿಂದ ಜ್ವಾಲೆ ಗರಳ ಸುರಿವ ಫಣಿಗಳಿಂದ
ಪವನ ಸುತನ ಕಚ್ಚಿಸುತಿರಲು ಪಚನವಾಯಿತು |೧೦|
ಅರಗಿನ ಮನೆಯೊಳಗೆ ಹಾನಿ ಬಗೆಯ ಬಂದವರ
ಹುರಿದು ದಹಿಸಿ ಸಲಹಿದ ಭೀಮ ಹರಸಿ ಭಕ್ತರ |೧೧|
ಸೊಕ್ಕಿದ ಹಿಡಿಂಬನೆಂಬ ರಕ್ಕಸನ ಕೊಂದು ಬಿಸುಟು
ಮೆಚ್ಚಿ ಬಂದ ರಾಕ್ಷಸಿಯ ರಕ್ಷಿಸಿದನು |೧೨|
ಹಿಡಿಂಬಾಸುರನ ಕೊಂದು ಹಿಡಿಂಬೆಯ ಮದುವೆಯಾದ
ವ್ಯಾಸರಾಜ್ಞೇಯಿಂದ ಭೀಮ ಮಗನ ಪಡೆದನು |೧೩|
ಆ ಕ್ಷಣ ವೇದವ್ಯಾಸ ಮುನಿಯು ಬಂದು ಹೇಳಲು
ರಾಕ್ಷಸಿಯಲ್ಲಿ ಪುತ್ರನ ಪಡೆದ ಭೀಮನು |೧೪|
ಏಕಾಂತದಿಂದಲಿ ಏಕಚಕ್ರ ನಗರಕ್ಹೋಗಿ
ಶ್ರೀ ಕಾಂತನ ಆಜ್ಞೆಯಿಂದ ವಾಸವಾದರೂ |೧೫|
ಬಕನ ಬಾಧೆ ತಾಳದೆ ಅಖಿಳ ಜನರು ಕಂಗೆಡಲು
ಸುಖವ ಮಾಡಿಕೊಟ್ಟ ವಾಯುಸುತ ಭೀಮನು |೧೬|
ಇಂದಿರೇಶನ ಸ್ಮರಣೆ ಮಾಡಿ ಭಂಡಿ ಮೇಲೆ ಅನ್ನವುಂಡು
ಬಂದು ಬಕನ ಸೀಳಿ ತೋರಣವ ಕಟ್ಟಿದ |೧೭|
ಭೀಮ ಸಲಹುತಿರಲು ವಿಭೀತರಾಗಿ ಜನರು ಎಲ್ಲ
ಕಾಮ ಪೂರ್ಣರಾದರೇಕಾಂತ ಭಕ್ತರು |೧೮|
ಅರಸು ಮಕ್ಕಳು ಸ್ವಯಂವರಕೆ ಬರಲು ವಿಪ್ರವೇಷ
ಧರಸಿಕೊಂಡು ಪಾಂಚಾಲಾ ಪುರಕೆ ಬಂದರು |೧೯|
ಕುಂಬಾರನ ಮನೆಯೊಳಗೆ ಕುಂತಿ ದೇವಿಯನ್ನು ಬಿಟ್ಟು
ಐವರು ಒಂದಾಗಿ ಬರುತಲಿದ್ದರು |೨೦|
ವಿಪ್ರ ವೇಶವನ್ನು ಧರಿಸಿ ಮಾರ್ಗದೊಳಗೆ ಬರುತಿರಲು
ಚಿತ್ರಸೇನ ಗಂಧರ್ವ ಅಡ್ಡಗಟ್ಟಿದ |೨೧|
ಅರ್ಜುನನ ಕೂಡ ಯುದ್ಧ ಮಾಡೆ ಗಂಧರ್ವನು
ಅವನ ರಥವು ಸಹಿತ ಸುಟ್ಟು ಭಸ್ಮವಾಯಿತು |೨೨|
ಅಂಗಾರ ವರ್ಮನೆಂಬ ನಾಮ ಗಂಧರ್ವಗೆ
ಅಶ್ವ ಗುರು ದಕ್ಷಿಣೆ ಕೊಟ್ಟು ಮುಂದೆ ಹೋದನು |೨೩|
ಧೌಮ್ಯಾಚಾರ್ಯರ ಕೂಡಿಕೊಂಡು ಬಂದರು ಪಾಂಡವರು
ಕುಂಬಾರ ಶಾಲೆಯಲಿ ಬಿಡಾರ ಬಿಟ್ಟರು |೨೪|
ಭಿಕ್ಷೆ ಬೇಡಿ ಬಕನ ಕೊಂದು ವಿಪ್ರರ ನಡುವಿರಲು
ಕೃಷ್ಣ ಕರೆದು ಸಾತ್ಯಕಿಯ ತೋರಿಸೀದನು |೨೫|
ಖಡ್ಗವೆತ್ತಿ ಸಭೆಯೊಳಗೆ ನಿಂತಿರಲು ಬಲರಾಮ
ಅತ್ತೆಯ ಸೊಸೆ ನಮಗೆ ಏನು ಆಗುವಳು |೨೬|
ಕೃಷ್ಣನಾಡಿದ ಮಾತಿಗೆ ನಕ್ಕು ಬಲರಾಮನು
ಮನದ ಹರುಷದಿಂದ ಸಂತೋಷಪಟ್ಟನು |೨೭|
ಖಡ್ಗ ಹಿಡಿದು ಸಭೆಯೊಳಗೆ ಕುಣಿವ ಸಾತ್ಯಕಿಯ ಕಂಡು
ಫಲ್ಗುಣ ಬಿಲ್ಲ ಹೆದೆಯ ಏರಿಸೀದನು |೨೮|
ಉಕ್ಕುವ ಎಣ್ಣೆಯೊಳಗೆ ನೆರಳ ನೋಡಿ ಅರ್ಜುನ
ಮತ್ಸ್ಯ ಹೊಡೆದು ದ್ರೌಪದಿಯ ಗೆದ್ದ ಫಲ್ಗುಣ |೨೯|
ಉಕ್ಕುವ ರಾಯರ ಸೊಕ್ಕುಗಳ ತಗ್ಗಿಸಿ
ಮತ್ಸ್ಯ ಹೊಡೆದು ದ್ರೌಪದಿಯ ಗೆದ್ದ ಫಲ್ಗುಣ |೩೦|
ಮುಗುಳು ನಗೆಯಿಂದ ಕಮಲ ಮುಖಿ ಮಾಲೆಯನ್ನು
ಫಲ್ಗುಣನ ಕೊರಳಿಗ್ಹಾಕಿ ಬದಿಯಲಿ ನಿಂತಳು |೩೧|
ಮುತ್ತಿನಿಂದ ತೆತ್ತಿಸಿದ ರತ್ನದಾ ಮಾಲೆಯನ್ನು
ಅರ್ಜುನನ ಕೊರಳಿಗ್ಹಾಕಿ ನಗುತ ನಿಂತಳು |೩೨|
ಸಿಟ್ಟಿನಿಂದ ರಾಯರು ಎತ್ತಿಕೊಂಡರಾಯುಧವ
ಭಿಕ್ಷುಕರು ಕ್ಷತ್ರಿಯ ಕನ್ನಿಕೆಯ ಒಯ್ವರೆ |೩೩|
ಅದೇ ಬಾಣಗಳಿಂದ ಜಗಳಕ್ಹೋದ ಅರ್ಜುನ
ಮರವ ಮುರಿದು ಭೀಮ ಗೆಲಿದ ಕೆಲವು ರಾಯರ |೩೪|
ಸೋದರ ಮಾವನ ಹಾರಿಸಿದ ಗಗನಕೆ
ಘಾಸಿ ಆಗದ್ಹಾಂಗೆ ಹಸನಾಗಿ ಇಳುಹಿದ |೩೫|
ರವಿ ಸುತನ ಬಾಣದಿಂದ ಜಗಳಕ್ಹೋದ ಅರ್ಜುನ
ಯಾರಯ್ಯ ನಿನ್ನ ಸ್ವರೂಪ ತೋರಿಸು |೩೬|
ಯಾರಾದರೇನು ನಾನು ಧೀರನಾದರೆ ನಿಲ್ಲು
ಬ್ರಾಹ್ಮಣರ ಗೊಡವೆ ಯಾಕೆಂದು ಕೆರಳಿದ |೩೭|
ಭೂಪರೆಲ್ಲ ನೋಡುತಿರಲು ದ್ರೌಪದಿಯ ಗೆದ್ದ ಪಾಂಡು
ಭೂಪ ಸುತರು ಎಲ್ಲ ಮನದಿ ಹರುಷಬಟ್ಟರು |೩೮|
ಚಿತ್ರ ಭೂಷಣ ನೃಪನು ಪುತ್ರಿ ಗಿತ್ತ ಕುಂತಿದೇವಿಯ
ಪುತ್ರರು ತಂದರು ಮಿತ್ರೆ ಕೃಷ್ಣೆಯ |೩೯|
ಬಂದಿರಾ ಕಂದಗಳಿರ ಎಂದು ಕುಂತಿ ಕೇಳಲು
ತಂದೇವೆ ತಾಯಿ ನಿಧಾನವೆಂದರು |೪೦|
ತಂದ ಫಲಂಗಳ ಆನಂದದಿಂದ ಹಂಚಿಕೊಂಡು
ಕಂದರು ನೀವು ಸುಖಿಯಾಗಿರೆಂದು ಹರಸಿದಳು |೪೧|
ಭಿಕ್ಷೆ ತಂದೆವೆಯೆಂದು ಸತ್ಯಧರ್ಮ ನುಡಿಯಲು
ಇಟ್ಟುಕೊಂಡು ಐವರು ಉಣ್ಣಿರೆಂದಳು |೪೨|
ಅನ್ನವಲ್ಲವೇ ಅಮ್ಮ ಕನ್ಯಾರತ್ನ ತಂದೆವೆಂದು
ಚೆನ್ನಿಗ ಯಮ ಪುತ್ರ ನಗುತ ನುಡಿದನು |೪೩|
ಸ್ತ್ರೀ ರತ್ನವೆಂದು ಭೀಮಕೂಡ ಹೇಳಿದನು
ವೇದವ್ಯಾಸರ ಆಜ್ಞೆ ತಪ್ಪದೆಂದು ನುಡಿದಳು |೪೪|
ಮರೆದು ಮಾತನಾಡಲು ಆ ಬಗೆಯು ತಿಳಿಯದು
ಜಗದ ಆಧಾರ ಕೃಷ್ಣ ಬಲ್ಲನೆಂದಳು |೪೫|
ಕುಂತಿ ಮುಖದ ವಾಕ್ಯವು ಮಂತ್ರ ಪ್ರಯೋಗವು
ಸಂತೋಷ ಉಂಟು ನಮಗೆ ಸಂಪತ್ತು ಎಂದರು |೪೬|
ನಮ್ಮಮ್ಮನಾಡಿದಾ ಮಾತು ಅನ್ಯಥಾ ಆಗದು
ಕನ್ಯ ನಮ್ಮೈವರಿಗೆ ಸಲ್ಲುವುದೆಂದರು |೪೭|
ಆಗ ದೃಷ್ಟದ್ಯುಮ್ನನು ಅವರಾಡಿದ ಮಾತುಗಳನು
ಬಾಗಿಲ ಮರೆಗೆ ನಿಂತು ಕೇಳುತಿದ್ದನು |೪೮|
ಆಗ ದೃಷ್ಟದ್ಯುಮ್ನನು ಅವರಾಡಿದ ಮಾತು ಕೇಳಿ
ಬ್ರಾಹ್ಮಣರು ಅಲ್ಲ ಅವರು ಕ್ಷತ್ರಿಯರೆಂದನು |೪೯|
ಹೋಗಿ ದೃಷ್ಟದ್ಯುಮ್ನನು ತಾಯಕೂಡ ಹೇಳುತ
ಬ್ರಾಹ್ಮಣರು ಅಲ್ಲ ಅವರು ಕ್ಷತ್ರಿಯರೆಂದನು |೫೦|
ಅರ್ತಿ ಮಾತನೇ ಕೇಳಿ ಕ್ಷತ್ರಿಯರೆಂದರಿತು
ಮತ್ತೆ ತಮ್ಮಪ್ಪಗೆ ಹೋಗಿ ಹೇಳಿದ |೫೧|
ಕಂದನಾ ಮಾತುಕೇಳಿ ಸಂಭ್ರಮಾದಿಂದಲಿ
ಅರ್ತಿಯಿಂದ ರಾಯನವರ ಕರೆಯ ಕಳುಹಿದ |೫೨|
ಕಂದನ ಕಳುಹಿಸಿ ಅಂದಣ ಶೃಂಗರಿಸಿ
ಅರ್ತಿಯಿಂದ ರಾಯನವರ ಕರೆಯ ಕಳುಹಿದ |೫೩|
ಹರುಷದಿಂದ ದೃಪದರಾಯ ಅಂದಣ ಶೃಂಗರಿಸಿ
ಥಂಡ ಥಂಡದಿ ಪಾಂಡವರ ಕರೆಯ ಕಳುಹಿದ |೫೪|
ಅರಸು ಮಕ್ಕಳು ತಾವು ಅರಶಿಣದ ಹೊದಿಕೆ ಹೊದ್ದು
ಸರಸಿಜಾಕ್ಷನ ಕೂಡ ಲಗ್ನಕೆ ಬಂದರು |೫೫|
ಪಂಚ ಪಾಂಡವರು ತಾವು ಪಂಥ ಪರಾಕ್ರಮಗಳಿಂದ
ಕುಂತಿದೇವಿಯ ಕೂಡ ಲಗ್ನಕ್ಕೆ ಬಂದರು |೫೬|
ಧೌಮ್ಯಾಚಾರ್ಯರ ಒಡಗೊಂಡು ಬಂದರು ಪಾಂಡವರು
ಏಕಚಕ್ರ ನಗರ ಬಿಟ್ಟು ಮುಂದೆ ನಡೆದರು |೫೭|
ದೃಪದರಾಯ ಮಾಡಿಸಿದ ಗುಪಿತವುಳ್ಳ ಅರಮನೆಯ
ಪುತ್ರಿ ಸಂಬಂಧ ಮಾಡಿ ಕೊಟ್ಟನವರಿಗೆ |೫೮|
ಅರ್ಜುನ ಹೊಕ್ಕನು ಆಯುಧವುಳ್ಳ ಅರಮನೆಯ
ಸಜ್ಜನರು ಕಂಡು ಸಂತೋಷ ಬಟ್ಟರು |೫೯|
ಅಳಿಯರನ್ನು ನೋಡುತಾ ಮನದೊಳಗೆ ಹಿಗ್ಗುತ
ಕರೆದು ತನ್ನ ಹೆಂಡತಿಯ ತೋರರಿಸೀದನು |೬೦|
ಗಂಡನ ಮಾತು ಕೇಳೀ ಸಂಭ್ರಮದಿಂದಲೀ
ಗಿಂಡೀಲಿ ಉದಕ ಹರಿವಾಣ ತಂದಳು |೬೧|
ತಂದು ಗದ್ದಿಗೆಯನಿಳಿಯೆ ಭಂಗಾರದ್ಹರಿವಾಣದಲಿ
ಬನ್ನಿರಿ ಪಾದಗಳನು ತೊಳೆವೆವೆಂದರು |೬೨|
ಪಾಂಚಾಲರಾಯನು ಪಾದತೊಳೆವ ಸಮಯದಲ್ಲಿ
ಪಂಚ ಪಾದಯುಗಳ ಕಂಡು ಚಂಚಲಿಸಿದ |೬೩|
ಒಬ್ಬ ಪುರುಷನಿಗೆ ಐವರು ಸ್ತ್ರೀಯರೆಂಬರು
ಒಬ್ಬ ಸ್ತ್ರೀಗೆ ಐವರು ಪುರುಷರೆ ಎಂದ |೬೪|
ಯಾವ ದೇಶದವರೆಂದು ರಾಯ ಪ್ರಶ್ನೆ ಮಾಡುತಿರಲು
ವಿವರಿಸಿದ ಧರ್ಮರಾಯನ ಕೇಳುತ್ತಿದ್ದರು |೬೫|
ಯಾವ ದೇಶದವರೆಂದು ಈಗ ಪ್ರಶ್ನೆ ಮಾಡುವಿರಿ
ಮತ್ಸ್ಯ ಹೊಡೆದು ದ್ರೌಪದಿಯ ಗೆದ್ದ ಫಲ್ಗುಣ |೬೬|
ಸಂಕೋಚ ಪಟ್ಟುಕೊಳ್ಳೆ ಕಂತುಪಿತ ಸ್ವಾಮಿ ಬಂದು
ವಂಚನೆಯ ತೊರೆಸಿ ಧಾರೆಯೆರೆಸಿ ಕೊಟ್ಟನು |೬೭|
ಭೂಸುರರ ಸಭೆಯೊಳಗೆ ವ್ಯಾಸಮುನಿರಾಯ ಬರಲು
ಕ್ಲೇಶನಾಶದಿಂದ ಸಂತೋಷ ಒದಗಿತು |೬೮|
ವೇದವ್ಯಾಸರು ಬಂದದ್ದು ಭಾರತೀದೇವಿ ಕೇಳಿ
ಸಾಷ್ಟಾಂಗ ವೆರಗಿ ಕೈ ಮುಗಿದು ನಿಂತಳು |೬೯|
ಭಾರತೀ ದೇವಿ ನಿನ್ನ ಮೂಲ ರೂಪವನ್ನು ತೋರೆ
ರಾಯರ ಸಂಶಯ ಪರಿಹಾರವಾಗಲಿ |೭೦|
ವೇದವ್ಯಾಸರೆಂದದ್ದು ಭಾರತೀದೇವಿ ಕೇಳಿ
ಸಾಷ್ಟಾಂಗವೆರಗಿ ಪಂಚ ದ್ರೌಪದಿಯು ಆದಳು |೭೧|
ಪಾಂಚಾಲರಾಯ ತನ್ನ ಮನದ ಹರುಷದಿಂದಲಿ
ವಂಚನೆಯ ತೊರೆದು ಧಾರೆ ಎರೆದು ಕೊಟ್ಟನು |೭೨|
ಮುತ್ತಿನ ಗಿಂಡಿಯೊಳಗೆ ಭಾಗೀರಥಿ ಉದಕ ತುಂಬಿ
ಧರ್ಮರಾಯಗೆ ಶ್ಯಾಮಲೆಯ ಧಾರೆ ಎರೆದು ಕೊಟ್ಟನು |೭೩|
ರತ್ನದ ಗಿಂಡಿಯೊಳಗೆ ನರ್ಮದೆಯ ಉದಕ ತುಂಬಿ
ಭೀಮಸೇನಗೆ ಭಾರತಿಯ ಧಾರೆ ಎರೆದು ಕೊಟ್ಟನು |೭೪|
ವಜ್ರದ ಗಿಂಡಿಯೊಳಗೆ ಗೋದಾವರಿ ಉದಕ ತುಂಬಿ
ಅರ್ಜುನಗೆ ಶಚಿಯ ಧಾರೆಯೆರೆದು ಕೊಟ್ಟನು |೭೫|
ಮಾಣಿಕದ ಗಿಂಡಿಯೊಳಗೆ ಕೃಷ್ಣವೇಣಿ ಉದಕ ತುಂಬಿ
ನಕುಲಗೆ ಉಷೆಯ ಧಾರೆ ಎರೆದು ಕೊಟ್ಟನು |೭೬|
ಚಿನ್ನದ ಗಿಂಡಿಯೊಳಗೆ ತುಂಗಭದ್ರೆ ಉದಕತುಂಬಿ
ಸಹದೇವಗೆ ಉಷೆಯ ಧಾರೆ ಎರೆದು ಕೊಟ್ಟನು |೭೭|
ಮುತ್ತಿನಾ ಕರೀಮಣಿ ಧರ್ಮರಾಯ ಕರದಿ ಪಿಡಿದು
ಶ್ಯಾಮಲೆಯ ಕೊರಳಿಗ್-ಹರಸಿ ಕಟ್ಟುತಿದ್ದನು |೭೮|
ರತ್ನದ ಕರೀಮಣಿ ಭೀಮತಾ ಕರದಿ ಪಿಡಿದು
ಭಾರತಿಯ ಕೊರಳಿಗ್-ಹರಸಿ ಕಟ್ಟುತಿದ್ದನು |೭೯|
ವಜ್ರದಾ ಕರಿಮಣೀ ಅರ್ಜುನಾ ಕರದಿ ಪಿಡಿದು
ಶಚಿದೇವಿಯ ಕೊರಳಿಗ್-ಹರಸಿ ಕಟ್ಟುತಿದ್ದನು |೮೦|
ಮಾಣಿಕದ ಕರಿಮಣೀ ನಕುಲ ತಾ ಕರದಿ ಪಿಡಿದು
ಉಷಾದೇವಿಯ ಕೊರಳಿಗ್-ಹರಸಿ ಕಟ್ಟುತಿದ್ದನು |೮೧|
ಚಿನ್ನದಾ ಕರಿಮಣೀ ಸಹದೇವ ಕರದಿ ಪಿಡಿದು
ಉಷಾದೇವಿಯ ಕೊರಳಿಗ್-ಹರಸಿ ಕಟ್ಟುತಿದ್ದನು |೮೨|
ನಾಲ್ಕು ದಿನದ ಉತ್ಸವ ನಾಗೋಲಿಯಾ ಮಾಡಿ
ದೇವತೆಗಳು ಪುಷ್ಪದಾ ಮಳೆಯ ಕರೆದರು |೮೩|
ದ್ವಾರಕೆಯ ಅರಸು ಮುರಾರಿ ಕೃಷ್ಣ ರಾಯನು
ಪಂಚ ಪಾಂಡವರಿಗೆ ಉಡುಗೊರೆಯ ಕೊಟ್ಟನು |೮೪|
ಆವು ಅಕ್ಷೋಹಿಣಿ ಕೊಟ್ಟ ಆವು ಹಿಂಡನೆ ಕೊಟ್ಟ
ಪಂಚ ಪಾಂಡವರಿಗೆ ಉಡುಗೊರೆಯ ಕೊಟ್ಟನು |೮೫|
ಹತ್ತು ಅಕ್ಷೋಹಿಣಿ ಕೊಟ್ಟ ಹತ್ತುವ ತೇಜಿ ಕೊಟ್ಟ
ಮಿತ್ರೆ ಕುಂತೆಮ್ಮಗೆ ಉಡುಗೊರೆಯ ಕೊಟ್ಟನು |೮೬|
ಮುತ್ತಿನಾ ಗೊಂಬೆಯನ್ನು ಮಿತ್ರೆ ದ್ರೌಪದಿಗೆ ಕೊಡಲು
ಹಸ್ತಿನಾವತಿಯ ಪಟ್ಟಣಕ್ಕೆ ಬಂದರು |೮೭|
ಹವಳದ ಗೊಂಬೆಯನ್ನು ದ್ರೌಪದೀ ಪಿಡುದು
ಹಸ್ತಿನಾ ವತಿಯ ಪಟ್ಟಣಕ್ಕೆ ಬಂದಳು |೮೮|
ಅಂದೆ ಗಾಂಧಾರಿ ತನ್ನ ಮನದೊಳಾಗೆ ಕಳವಳಿಸಿ
ಬಂದೀತು ಕಂದಗಳಿಗೆ ಮೃತ್ಯು ಎಂದಳು |೮೯|
ಧರ್ಮವೇ ಮುಖ್ಯವೆಂದು ಧರ್ಮದಿಂದ ರಾಜ್ಯವಾಳಿದ
ಧರ್ಮರಾಯ ತಾನೆ ಯಜಮಾನನಾದನು |೯೦|
ವ್ಯಾಸ ವಾಕ್ಯದಿಂದ ಧರ್ಮ ರಾಜ್ಯವಾಳುತಿರಲು
ವ್ಯಸರಾಜ್ಞೆಯಿಂದ ಜಗವ ಪಾಲಿಸುತಿದ್ದನು |೯೧|
ರಾಜ ಪೀಠಕ್ಕೆ ಧರ್ಮರಾಜ ತಾ ಏರಿದನು
ರಾಜಿಸುತ ನಕುಲ ಸಹದೇವರಿದ್ದರು |೯೨|
ಭೀಮ ಸಲಹುತಿರಲು ವಿಭೀತರಾಗಿ ಜನರು ಎಲ್ಲ
ಕಾಮ ಪೂರ್ಣವಾದರೇಕಾಂತ ಭಕ್ತರು |೯೩|
ಯಮ ಲೋಕದಲ್ಲಿ ಪಿತನು ಮುನಿಯ ಕಂಡು ಹೇಳಿದ
ಪಾಂಡುರಾಯಗೆ ಸ್ವರ್ಗವು ಇಲ್ಲ ಎನುತಲಿ |೯೪|
ನಾರದ ಮುನಿಯು ಬಂದು ಒಂದು ಮಾತು ಹೇಳಿದ
ಧರ್ಮ ರಾಯ ರಾಜಸೂಯ ಯಾಗ ಮಾಡುಯೆನುತಲಿ |೯೫|
ಐವರೊಂದಾಗಿ ಕೂಡಿ ಆಲೋಚನೆ ಮಾಡಿದರು
ಕೃಷ್ಣನಾ ಕರೆಯೆ ಕಳುಹಬೇಕು ಎನುತಲಿ |೯೬|
ಕೃಷ್ಣನಾ ಕರೆಯೆ ಕಳುಹಿ ಆಲೋಚನೆ ಮಾಡಿದರು
ಧರ್ಮರಾಯ ರಾಜಸೂಯ ಯಾಗ ಮಾಡು ಎನುತಲಿ |೯೭|
ರಾಜ ಶತ್ರುವಾದ ಜರಾಸಂಧನಾ ವಧೆಮಾಡಿ
ರಾಜಸೂಯ ಯಾಗದಿ ಕೃಷ್ಣನ ಪೂಜಿಸಿದರು |೯೮|
ಆಗ ದುರ್ಯೋಧನನ ಬೇಗದಿಂದ ಕರೆಯ ಕಳುಹಿ
ಏನು ಕೆಲಸ ಮಾಡುವಿರಿ ಭಾವ ಎಂದಳು |೯೯|
ಬ್ರಾಹ್ಮಣರಿಗೆ ದಕ್ಷಿಣೆಯ ಬೇಡಿದಷ್ಟು ಕೊಡುವೆನೆಂದ
ಕೃಷ್ಣ ವಿನೋದದಿಂದ ಕೈ ಹೊಡೆದು ನಕ್ಕನು |೧೦೦|
ಮೃಷ್ಟಾನ್ನ ಭಕ್ಷ್ಯ ಭೋಜ್ಯ ವಿಪ್ರರು ಬ್ರಾಹ್ಮಣರುಂಡು
ಸತ್ಯ ಧರ್ಮರಾಯನ ಹೊಗಳುತಿದ್ದರು |೧೦೧|
ಹಾಲು ತುಪ್ಪ ಕೆನೆ ಮೊಸರು ವಿಪ್ರರು ಬ್ರಾಹ್ಮಣರುಂಡು
ಮತ್ತೆ ಧರ್ಮರಾಯನ ಹೊಗಳುತಿದ್ದರು |೧೦೨|
ದಕ್ಷಿಣೆಯ ಕೊಟ್ಟು ಕೊಟ್ಟು ರಟ್ಟೆ ಸೋತು ನಿಂತಿರಲು
ಮರಳಿ ತುಂಬಿತು ಧನವು ಮೊದಲಿನಂದದಿ |೧೦೩|
ಕೊಟ್ಟು ಕೊಟ್ಟು ಕುರುರಾಯ ರಟ್ಟೆ ಸೋತು ನಿಂತಿರಲು
ಮರಳಿ ತುಂಬಿತು ಧನವು ಮೊದಲಿ ನಂದದಿ |೧೦೪|
ಅವಭೃತ ಸ್ನಾನ ಮಾಡಿ ಹೊನ್ನು ದಾನ ಕೊಟ್ಟು
ಮಡದಿ ಮಕ್ಕಳು ಸಹಿತ ಮನೆಗೆ ಬಂದರು |೧೦೫|
ಕಷ್ಟ ಪಟ್ಟೆ ತಂಗಿಯೆಂದು ಕೃಷ್ಣ ಕರೆದು ಕೇಳಲು
ಕಷ್ಟ ನಿನ್ನಿಂದ ನಿವೃತ್ತವಾಯಿತೆಂದಳು |೧೦೬|
ಆದಿ ನೀಲದ ಗೋಡೆ ಗಾಜಿನ ನೆಲೆಗಟ್ಟು
ಧರ್ಮರಾಯನ ಸಭೆಯ ಶೃಂಗಾರ ಒಪ್ಪಿತು |೧೦೭|
ಇಂದ್ರ ನೀಲದ ಗೋಡೆ ಚೆಂದದ ನೆಲಗಟ್ಟು
ಧರ್ಮರಾಜನ ಸಭೆಗೆ ಶೃಂಗಾರ ಒಪ್ಪಿತು |೧೦೮|
ಅಂಗಿಯನ್ನು ಮೇಲಕೆತ್ತಿ ಬಂದನು ಕುರುರಾಯ
ಕಂಗಳಿಲ್ಲವೋ ಭಾವ ಎಂದು ನುಡಿದಳು |೧೦೯|
ಅರಿಯ ಸಭೆಯ ಕುರುರಾಯ ನಡುವೆ ಬಿದ್ದ ನೀರೊಳಗೆ
ದೊಡ್ಡ ಧ್ವನಿಯ ಮಾಡಿ ಭೀಮ ನಗುತಲಿದ್ದನು |೧೧೦|
ಸಿಟ್ಟಿನಿಂದ ಕುರು ರಾಯ ಬಂದ ತನ್ನರಮನೆಗೆ
ತಂದೆಯ ಕೂಡ ಮಾತಾಡೆ ಕುಳಿತನು |೧೧೧|
ಸಿಟ್ಟಿನಿಂದ ಕುರುರಾಯ ಬಂದ ತನ್ನರಮನೆಗೆ
ಧರ್ಮನ ಜೂಜನಾಡೆ ಹೇಳಿ ಕಳುಹಿದ |೧೧೨|
ಮಯ ನೆಂಬವ ಸಭೆಯ ನಿರ್ಮಾಣ ಮಾಡಿ ಮಂಟಪದಿ
ವಿರಚಿತವಾದ ಜೂಜು ತಂದು ಇಳುಹಿದರು |೧೧೩|
ಕಪಟ ಮಹಿಮನಿಂದ ನಿರ್ಮಿತವಾದ ಮಂಟಪದಲ್ಲಿ
ಅರ್ತಿಯಿಂದ ಬಂದು ಜೂಜಾಡ ಕುಳಿತರು |೧೧೪|
ರಾಯ ರಾಯರೆಲ್ಲ ಕೂಡಿ ಹಾರ ಪದಕಗಳನೆ ಹಾಕಿ
ಅರ್ತಿಯಿಂದ ಬಂದು ಜೂಜಾಡ ಕುಳಿತರು |೧೧೫|
ಶೌರ್ಯವೆಲ್ಲ ವಿಚಿತ್ರ ವೀರ್ಯ ಸುತರು ಕೇಳಿ ವಿಹಿತ
ಕಪಟದಿಂದ ಜೂಜು ಎಂಬ ಕಾರ್ಯ ಹೂಡಿದರು |೧೧೬|
ಮತ್ತೆ ಸೋತರೆ ಕುರುರಾಯ ಹೋಗುವಿಯೋ ವನವಾಸಕೆಂದು
ಸುತ್ತ ಡಂಗುರವ ಹೊಯ್ಸಿ ಆಡಕುಳಿತರು |೧೧೭|
ಪಣವನೊಡ್ಡು ರಾಯಯೆಂದು ಶಕುನಿ ದಾಳವ ಹಾಕೆ
ಸೋಲು ನಿಮ್ಮದಾಯಿತೆಂದು ತೊಡೆಯ ಹೊಯ್ದು ನಕ್ಕರು |೧೧೮|
ಇದಿಗೊ ಗೆದ್ದೆವೆನುತ ಶಕುನಿ ದಾಳವ ಹಾಕೆ
ಬೊಕ್ಕಸ ಭಂಡಾರ ಪಣಕಿಟ್ಟು ಸೋತನು |೧೧೯|
ಹಿರಿಯ ತಮ್ಮಂದಿರ ಸೋತ ಆನೆ ಕುದುರೆ ದಳವ ಸೋತ
ಛತ್ರ ಚಾಮರಂಗಳ ಪಣಕಿಟ್ಟು ಸೋತನು |೧೨೦|
ಕಿರಿಯ ತಮ್ಮಂದಿರ ಸೋತ ಬಂಟರನ್ನೆಲ್ಲ ಸೋತ
ಮಡದಿ ದ್ರೌಪದಿಯ ಪಣಕಿಟ್ಟು ಸೋತನು |೧೨೧|
ಕಪಟ ವಾಕ್ಯದಿಂದ ಶಕುನಿ ಖಳರ ಶಪಥ ಮಾಡಿ ಗೆಲಲು
ನಿಪುಣ ವನವಾಸವಾಯ್ತು ಪಾಂಡು ತನಯರಿಗೆ |೧೨೨|
ಈ ಪರಿಯ ಕೌರವನ ಪಾಪಿ ಹೃದಯವನ್ನು ಕಂಡು
ಪಾಂಡು ಭೂಪ ಸುತರು ಮುದದಿ ವನಕೆ ನಡೆದರು |೧೨೩|
ಸಕಲ ಮುನಿಗಳೊಡನೆ ನಿತ್ಯ ಸುಖವನುಂಬ ವರ ವಿಷ್ಣು
ಭಕ್ತರಿಗೆ ಎಂದೆಂದಿಗು ಭಯವು ಇಲ್ಲವೋ |೧೨೪|
ಹನ್ನೆರಡು ವರುಷ ವನವಾಸವೆಂ-ದಾಡಿದರು
ಒಂದು ವರುಷ ಅಜ್ಞಾತ ವಿರಾಟನಲ್ಲಿ ಕಳೆದರು |೧೨೫|
ನೀಚ ಬುದ್ದಿಯುಳ್ಳ ದುಷ್ಟ ಕೀಚಕನ್ನ ಸಂಹರಿಸಿ
ತಾವು ಸೌಖ್ಯದಿ ವಿರಾಟನಲ್ಲಿ ಕಳೆದರು |೧೨೬|
ಕಳೆದು ಸಪ್ತ ದಿನಗಳೆರಡು ಗೋವುಗಳನು ಕಾಯ್ದು
ಬೆಳಕು ಮಾಡುತ ಅಖಿಳ ಜಗವ ಬೆಳಗುತಿದ್ದರು |೧೨೭|
ಹಾರ ಮುಕುಟ ದಿವ್ಯ ಕೇಯೂರ ಕುಂಡಲಾಭರಣ
ಧಾರ್ತರಾಷ್ಟ್ರ ರಾಜ್ಯ ಭೂಮಿಪಾಲರಾದರು |೧೨೮|
ಸೌರಮಾನದಿಂದ ದಿನವು ಸಂದುದಿಲ್ಲ ಎನುತಲಿ
ಕೌರವ ಹೇಳಿದನು ದ್ರೋಣ ಭೀಷ್ಮರಿಗೆ |೧೨೯|
ಚಾಂದ್ರಮಾನದಿಂದ ದಿನವೂ ಸಂದು ಹೋಯಿತೆನುತಲಿ
ಹೋಗಿ ಕೃಷ್ಣ ಹೇಳಿದನು ಕೌರವೇಶಗೆ |೧೩೦|
ಚಿನ್ನದುಂಗುರವನಿಟ್ಟು ಬಣ್ಣ ಶಾಲಿಯನೆ ಹೊದ್ದು
ಚೆನ್ನ ಕೃಷ್ಣ ಹೋದನು ಮಧ್ಯವರ್ತೆಗೆ |೧೩೧|
ಐದು ಮಂದಿಗೆ ಐದು ಗ್ರಾಮಗಳ ಕೊಡಿರೆಂದು
ಹೋಗಿ ಕೃಷ್ಣ ಹೇಳಿದನು ಕೌರವೇಶಗೆ |೧೩೨|
ಆದಿಯಲ್ಲಿ ಗಳಿಸಲಿಲ್ಲ ಸೂಜಿಗ್-ಹೊಂದಿದಷ್ಟು ಭೂಮಿ
ನಾನು ಕೊಡುವುದಿಲ್ಲ ಎಂದು ನುಡಿದ ಕೌರವ |೧೩೩|
ಆದಿಯಲ್ಲಿ ಗಳಿಸಲಿಲ್ಲ ಸೂಜಿಗ್-ಹೊಂದಿದಷ್ಟು ಭೂಮಿ
ರಾಜತನಯರಾದರೆ ರಣರಂಗ ಮೆರೆಯಲಿ |೧೩೪|
ಈ ಪರಿಯ ಕೌರವನ ಪಾಪಿ ಹೃದಯವನ್ನು ಕಂಡು
ಪಾಂಡು ಭೂಪ ಸುತರು ಮುದದಿ ರಣಕೆ ನಡೆದರು |೧೩೫|
ಕುರುಕ್ಷೇತ್ರಕ್ಕೆ ಹೋಗಿ ರಣಕಂಬ ಹೂಡಿದರು
ಕೌರವ ರಾಯನ ಯುದ್ಧಕ್ಕೆ ನಡೆದರು |೧೩೬|
ಸಿಂಹನಾದದಿಂದ ವೈರಿ ಸಂಹರ ಮಾಡಿ
ನಾರಸಿಂಹಗ್-ಅರ್ಪಿಸಿದ ಭೀಮಸೇನರಾಯನು |೧೩೭|
ಗಾಂಧಾರಿ ಸುತರ ಹೃದಯ ಗದೆಯಿಂದ ಸೀಳಿದನು
ಪರಶುರಾಮಗಾಹುತಿಯ ಕೊಡುತಲಿದ್ದನು |೧೩೮|
ನೀರಡಿಸಿದ್ದ ಗದೆಗೆ ಗಾಂಧಾರಿ ಸುತರ ರಕ್ತವನ್ನು
ಪಾರಣೆಯ ಮಾಡಿಸಿದ ಪವನ ತನಯನು |೧೩೯|
ಧರ್ಮದಿಂದ ಭೀಮಸೇನ ಧರ್ಮ ರಾಜ್ಯವಾಳುತಿರಲು
ಚರಣ ಭಜಿಸುತ್ತಿದ್ದರು ಕೃಷ್ಣನ ಭಕ್ತರು |೧೪೦|
ಸುವ್ವಿ ಹನುಮಂತ ಸುವ್ವಿ
ಸುವ್ವಿ ಭೀಮಸೇನಾ ಸುವ್ವಿ
ಸುವ್ವಿ ಮಧ್ವ ರಾಯರಿಗೆ ಸುವ್ವಾಲಿ ||
BIma suvvAli
suvvi hanumaMta suvvi
suvvi BImasEnA suvvi
suvvi madhva rAyarige suvvAli |pa|
hulige bedari kuMtidEvi magana carisi bisuDutiralu
halavu pariyali giriyu nuccAgi hOyitu |1|
kaMdagaLaivara paDedaLU kuMtidEvi
aDaviyalli rAya aMtarisi hOdanu |2|
kaMDu vEdavyAsaru bAlakara karedu taMdu
kaMdagaLa nODi nIvu salahireMdaru |3|
bEre maneyanu kaTTi dAyAdara kAvaliTTu
Odu barahagaLanu hELi kalisutiddaru |4|
BImasEna neMbO divya nAmavannu iTTukoMDu
sOma kuladali udisidAru sArvaBaumaru |5|
hAru gubbi muShTiyuddha nIru cellATadi
SauryadiMda rAja naMdanara gelidaru |6|
kurugaLella maravanEri PalagaLudure sarva vRukSha
caluva pAdadaloddu haNNa daNiya meddaru |7|
pAda karagaLalli lOha pASadiMda bigidu kaTTi
prAsAda vEri keDavalu amara janareddaru |8|
rAShTrakke Sakuni muKya dUtarella viShavanikke
kOShTadalli jIrNavAytu pavana tanayage |9|
kali maMtradiMda jvAle garaLa suriva PaNigaLiMda
pavana sutana kaccisutiralu pacanavAyitu |10|
aragina maneyoLage hAni bageya baMdavara
huridu dahisi salahida BIma harasi Baktara |11|
sokkida hiDiMbaneMba rakkasana koMdu bisuTu
mecci baMda rAkShasiya rakShisidanu |12|
hiDiMbAsurana koMdu hiDiMbeya maduveyAda
vyAsarAj~jEyiMda BIma magana paDedanu |13|
A kShaNa vEdavyAsa muniyu baMdu hELalu
rAkShasiyalli putrana paDeda BImanu |14|
EkAMtadiMdali Ekacakra nagarak~hOgi
SrI kAMtana Aj~jeyiMda vAsavAdarU |15|
bakana bAdhe tALade aKiLa janaru kaMgeDalu
suKava mADikoTTa vAyusuta BImanu |16|
iMdirESana smaraNe mADi BaMDi mEle annavuMDu
baMdu bakana sILi tOraNava kaTTida |17|
BIma salahutiralu viBItarAgi janaru ella
kAma pUrNarAdarEkAMta Baktaru |18|
arasu makkaLu svayaMvarake baralu vipravESha
dharasikoMDu pAMcAlA purake baMdaru |19|
kuMbArana maneyoLage kuMti dEviyannu biTTu
aivaru oMdAgi barutaliddaru |20|
vipra vESavannu dharisi mArgadoLage barutiralu
citrasEna gaMdharva aDDagaTTida |21|
arjunana kUDa yuddha mADe gaMdharvanu
avana rathavu sahita suTTu BasmavAyitu |22|
aMgAra varmaneMba nAma gaMdharvage
aSva guru dakShiNe koTTu muMde hOdanu |23|
dhaumyAcAryara kUDikoMDu baMdaru pAMDavaru
kuMbAra SAleyali biDAra biTTaru |24|
BikShe bEDi bakana koMdu viprara naDuviralu
kRuShNa karedu sAtyakiya tOrisIdanu |25|
KaDgavetti saBeyoLage niMtiralu balarAma
atteya sose namage Enu AguvaLu |26|
kRuShNanADida mAtige nakku balarAmanu
manada haruShadiMda saMtOShapaTTanu |27|
KaDga hiDidu saBeyoLage kuNiva sAtyakiya kaMDu
PalguNa billa hedeya ErisIdanu |28|
ukkuva eNNeyoLage neraLa nODi arjuna
matsya hoDedu draupadiya gedda PalguNa |29|
ukkuva rAyara sokkugaLa taggisi
matsya hoDedu draupadiya gedda PalguNa |30|
muguLu nageyiMda kamala muKi mAleyannu
PalguNana koraLig~hAki badiyali niMtaLu |31|
muttiniMda tettisida ratnadA mAleyannu
arjunana koraLig~hAki naguta niMtaLu |32|
siTTiniMda rAyaru ettikoMDarAyudhava
BikShukaru kShatriya kannikeya oyvare |33|
adE bANagaLiMda jagaLak~hOda arjuna
marava muridu BIma gelida kelavu rAyara |34|
sOdara mAvana hArisida gaganake
GAsi Agad~hAMge hasanAgi iLuhida |35|
ravi sutana bANadiMda jagaLak~hOda arjuna
yArayya ninna svarUpa tOrisu |36|
yArAdarEnu nAnu dhIranAdare nillu
brAhmaNara goDave yAkeMdu keraLida |37|
BUparella nODutiralu draupadiya gedda pAMDu
BUpa sutaru ella manadi haruShabaTTaru |38|
citra BUShaNa nRupanu putri gitta kuMtidEviya
putraru taMdaru mitre kRuShNeya |39|
baMdirA kaMdagaLira eMdu kuMti kELalu
taMdEve tAyi nidhAnaveMdaru |40|
taMda PalaMgaLa AnaMdadiMda haMcikoMDu
kaMdaru nIvu suKiyAgireMdu harasidaLu |41|
BikShe taMdeveyeMdu satyadharma nuDiyalu
iTTukoMDu aivaru uNNireMdaLu |42|
annavallavE amma kanyAratna taMdeveMdu
cenniga yama putra naguta nuDidanu |43|
strI ratnaveMdu BImakUDa hELidanu
vEdavyAsara Aj~je tappadeMdu nuDidaLu |44|
maredu mAtanADalu A bageyu tiLiyadu
jagada AdhAra kRuShNa ballaneMdaLu |45|
kuMti muKada vAkyavu maMtra prayOgavu
saMtOSha uMTu namage saMpattu eMdaru |46|
nammammanADidA mAtu anyathA Agadu
kanya nammaivarige salluvudeMdaru |47|
Aga dRuShTadyumnanu avarADida mAtugaLanu
bAgila marege niMtu kELutiddanu |48|
Aga dRuShTadyumnanu avarADida mAtu kELi
brAhmaNaru alla avaru kShatriyareMdanu |49|
hOgi dRuShTadyumnanu tAyakUDa hELuta
brAhmaNaru alla avaru kShatriyareMdanu |50|
arti mAtanE kELi kShatriyareMdaritu
matte tammappage hOgi hELida |51|
kaMdanA mAtukELi saMBramAdiMdali
artiyiMda rAyanavara kareya kaLuhida |52|
kaMdana kaLuhisi aMdaNa SRuMgarisi
artiyiMda rAyanavara kareya kaLuhida |53|
haruShadiMda dRupadarAya aMdaNa SRuMgarisi
thaMDa thaMDadi pAMDavara kareya kaLuhida |54|
arasu makkaLu tAvu araSiNada hodike hoddu
sarasijAkShana kUDa lagnake baMdaru |55|
paMca pAMDavaru tAvu paMtha parAkramagaLiMda
kuMtidEviya kUDa lagnakke baMdaru |56|
dhaumyAcAryara oDagoMDu baMdaru pAMDavaru
Ekacakra nagara biTTu muMde naDedaru |57|
dRupadarAya mADisida gupitavuLLa aramaneya
putri saMbaMdha mADi koTTanavarige |58|
arjuna hokkanu AyudhavuLLa aramaneya
sajjanaru kaMDu saMtOSha baTTaru |59|
aLiyarannu nODutA manadoLage higguta
karedu tanna heMDatiya tOrarisIdanu |60|
gaMDana mAtu kELI saMBramadiMdalI
giMDIli udaka harivANa taMdaLu |61|
taMdu gaddigeyaniLiye BaMgArad~harivANadali
banniri pAdagaLanu toLeveveMdaru |62|
pAMcAlarAyanu pAdatoLeva samayadalli
paMca pAdayugaLa kaMDu caMcalisida |63|
obba puruShanige aivaru strIyareMbaru
obba strIge aivaru puruShare eMda |64|
yAva dESadavareMdu rAya praSne mADutiralu
vivarisida dharmarAyana kELuttiddaru |65|
yAva dESadavareMdu Iga praSne mADuviri
matsya hoDedu draupadiya gedda PalguNa |66|
saMkOca paTTukoLLe kaMtupita svAmi baMdu
vaMcaneya toresi dhAreyeresi koTTanu |67|
BUsurara saBeyoLage vyAsamunirAya baralu
klESanASadiMda saMtOSha odagitu |68|
vEdavyAsaru baMdaddu BAratIdEvi kELi
sAShTAMga veragi kai mugidu niMtaLu |69|
BAratI dEvi ninna mUla rUpavannu tOre
rAyara saMSaya parihAravAgali |70|
vEdavyAsareMdaddu BAratIdEvi kELi
sAShTAMgaveragi paMca draupadiyu AdaLu |71|
pAMcAlarAya tanna manada haruShadiMdali
vaMcaneya toredu dhAre eredu koTTanu |72|
muttina giMDiyoLage BAgIrathi udaka tuMbi
dharmarAyage SyAmaleya dhAre eredu koTTanu |73|
ratnada giMDiyoLage narmadeya udaka tuMbi
BImasEnage BAratiya dhAre eredu koTTanu |74|
vajrada giMDiyoLage gOdAvari udaka tuMbi
arjunage Saciya dhAreyeredu koTTanu |75|
mANikada giMDiyoLage kRuShNavENi udaka tuMbi
nakulage uSheya dhAre eredu koTTanu |76|
cinnada giMDiyoLage tuMgaBadre udakatuMbi
sahadEvage uSheya dhAre eredu koTTanu |77|
muttinA karImaNi dharmarAya karadi piDidu
SyAmaleya koraLig-harasi kaTTutiddanu |78|
ratnada karImaNi BImatA karadi piDidu
BAratiya koraLig-harasi kaTTutiddanu |79|
vajradA karimaNI arjunA karadi piDidu
SacidEviya koraLig-harasi kaTTutiddanu |80|
mANikada karimaNI nakula tA karadi piDidu
uShAdEviya koraLig-harasi kaTTutiddanu |81|
cinnadA karimaNI sahadEva karadi piDidu
uShAdEviya koraLig-harasi kaTTutiddanu |82|
nAlku dinada utsava nAgOliyA mADi
dEvategaLu puShpadA maLeya karedaru |83|
dvArakeya arasu murAri kRuShNa rAyanu
paMca pAMDavarige uDugoreya koTTanu |84|
Avu akShOhiNi koTTa Avu hiMDane koTTa
paMca pAMDavarige uDugoreya koTTanu |85|
hattu akShOhiNi koTTa hattuva tEji koTTa
mitre kuMtemmage uDugoreya koTTanu |86|
muttinA goMbeyannu mitre draupadige koDalu
hastinAvatiya paTTaNakke baMdaru |87|
havaLada goMbeyannu draupadI piDudu
hastinA vatiya paTTaNakke baMdaLu |88|
aMde gAMdhAri tanna manadoLAge kaLavaLisi
baMdItu kaMdagaLige mRutyu eMdaLu |89|
dharmavE muKyaveMdu dharmadiMda rAjyavALida
dharmarAya tAne yajamAnanAdanu |90|
vyAsa vAkyadiMda dharma rAjyavALutiralu
vyasarAj~jeyiMda jagava pAlisutiddanu |91|
rAja pIThakke dharmarAja tA Eridanu
rAjisuta nakula sahadEvariddaru |92|
BIma salahutiralu viBItarAgi janaru ella
kAma pUrNavAdarEkAMta Baktaru |93|
yama lOkadalli pitanu muniya kaMDu hELida
pAMDurAyage svargavu illa enutali |94|
nArada muniyu baMdu oMdu mAtu hELida
dharma rAya rAjasUya yAga mADuyenutali |95|
aivaroMdAgi kUDi AlOcane mADidaru
kRuShNanA kareye kaLuhabEku enutali |96|
kRuShNanA kareye kaLuhi AlOcane mADidaru
dharmarAya rAjasUya yAga mADu enutali |97|
rAja SatruvAda jarAsaMdhanA vadhemADi
rAjasUya yAgadi kRuShNana pUjisidaru |98|
Aga duryOdhanana bEgadiMda kareya kaLuhi
Enu kelasa mADuviri BAva eMdaLu |99|
brAhmaNarige dakShiNeya bEDidaShTu koDuveneMda
kRuShNa vinOdadiMda kai hoDedu nakkanu |100|
mRuShTAnna BakShya BOjya vipraru brAhmaNaruMDu
satya dharmarAyana hogaLutiddaru |101|
hAlu tuppa kene mosaru vipraru brAhmaNaruMDu
matte dharmarAyana hogaLutiddaru |102|
dakShiNeya koTTu koTTu raTTe sOtu niMtiralu
maraLi tuMbitu dhanavu modalinaMdadi |103|
koTTu koTTu kururAya raTTe sOtu niMtiralu
maraLi tuMbitu dhanavu modali naMdadi |104|
avaBRuta snAna mADi honnu dAna koTTu
maDadi makkaLu sahita manege baMdaru |105|
kaShTa paTTe taMgiyeMdu kRuShNa karedu kELalu
kaShTa ninniMda nivRuttavAyiteMdaLu |106|
Adi nIlada gODe gAjina nelegaTTu
dharmarAyana saBeya SRuMgAra oppitu |107|
iMdra nIlada gODe ceMdada nelagaTTu
dharmarAjana saBege SRuMgAra oppitu |108|
aMgiyannu mElaketti baMdanu kururAya
kaMgaLillavO BAva eMdu nuDidaLu |109|
ariya saBeya kururAya naDuve bidda nIroLage
doDDa dhvaniya mADi BIma nagutaliddanu |110|
siTTiniMda kuru rAya baMda tannaramanege
taMdeya kUDa mAtADe kuLitanu |111|
siTTiniMda kururAya baMda tannaramanege
dharmana jUjanADe hELi kaLuhida |112|
maya neMbava saBeya nirmANa mADi maMTapadi
viracitavAda jUju taMdu iLuhidaru |113|
kapaTa mahimaniMda nirmitavAda maMTapadalli
artiyiMda baMdu jUjADa kuLitaru |114|
rAya rAyarella kUDi hAra padakagaLane hAki
artiyiMda baMdu jUjADa kuLitaru |115|
Sauryavella vicitra vIrya sutaru kELi vihita
kapaTadiMda jUju eMba kArya hUDidaru |116|
matte sOtare kururAya hOguviyO vanavAsakeMdu
sutta DaMgurava hoysi ADakuLitaru |117|
paNavanoDDu rAyayeMdu Sakuni dALava hAke
sOlu nimmadAyiteMdu toDeya hoydu nakkaru |118|
idigo geddevenuta Sakuni dALava hAke
bokkasa BaMDAra paNakiTTu sOtanu |119|
hiriya tammaMdira sOta Ane kudure daLava sOta
Catra cAmaraMgaLa paNakiTTu sOtanu |120|
kiriya tammaMdira sOta baMTarannella sOta
maDadi draupadiya paNakiTTu sOtanu |121|
kapaTa vAkyadiMda Sakuni KaLara Sapatha mADi gelalu
nipuNa vanavAsavAytu pAMDu tanayarige |122|
I pariya kauravana pApi hRudayavannu kaMDu
pAMDu BUpa sutaru mudadi vanake naDedaru |123|
sakala munigaLoDane nitya suKavanuMba vara viShNu
Baktarige eMdeMdigu Bayavu illavO |124|
hanneraDu varuSha vanavAsaveM-dADidaru
oMdu varuSha aj~jAta virATanalli kaLedaru |125|
nIca buddiyuLLa duShTa kIcakanna saMharisi
tAvu sauKyadi virATanalli kaLedaru |126|
kaLedu sapta dinagaLeraDu gOvugaLanu kAydu
beLaku mADuta aKiLa jagava beLagutiddaru |127|
hAra mukuTa divya kEyUra kuMDalABaraNa
dhArtarAShTra rAjya BUmipAlarAdaru |128|
sauramAnadiMda dinavu saMdudilla enutali
kaurava hELidanu drONa BIShmarige |129|
cAMdramAnadiMda dinavU saMdu hOyitenutali
hOgi kRuShNa hELidanu kauravESage |130|
cinnaduMguravaniTTu baNNa SAliyane hoddu
cenna kRuShNa hOdanu madhyavartege |131|
aidu maMdige aidu grAmagaLa koDireMdu
hOgi kRuShNa hELidanu kauravESage |132|
Adiyalli gaLisalilla sUjig-hoMdidaShTu BUmi
nAnu koDuvudilla eMdu nuDida kaurava |133|
Adiyalli gaLisalilla sUjig-hoMdidaShTu BUmi
rAjatanayarAdare raNaraMga mereyali |134|
I pariya kauravana pApi hRudayavannu kaMDu
pAMDu BUpa sutaru mudadi raNake naDedaru |135|
kurukShEtrakke hOgi raNakaMba hUDidaru
kaurava rAyana yuddhakke naDedaru |136|
siMhanAdadiMda vairi saMhara mADi
nArasiMhag-arpisida BImasEnarAyanu |137|
gAMdhAri sutara hRudaya gadeyiMda sILidanu
paraSurAmagAhutiya koDutaliddanu |138|
nIraDisidda gadege gAMdhAri sutara raktavannu
pAraNeya mADisida pavana tanayanu |139|
dharmadiMda BImasEna dharma rAjyavALutiralu
caraNa Bajisuttiddaru kRuShNana Baktaru |140|
suvvi hanumaMta suvvi
suvvi BImasEnA suvvi
suvvi madhva rAyarige suvvAli ||
Leave a Reply