Yennananyana madi

Composer : Shri Yogeendra tirtharu

By Smt.Shubhalakshmi Rao

SrI Yogeendra tIrtharu
1671 – 1688
aMkita : SrI hari prasAdAMkita ” SrIrAma “
Aradhane – Magha Shuddha Dashami


ಯೆನ್ನನನ್ಯನಾ | ಮಾ |
ಡಿ ನೋಡದೆ ಪಾಲಿಸಾಬೇಕೋ |
ನಿನ್ನ ಮನದಲಿಟ್ಟರೆ ಸಾಕೋ [ಪ]

ದುರಂತ ದುರಿತಾ | ರಾ |
ಶಿ ರೂಪಾ ನಾನಾದಾಡೇನೋ ನಿನ್ನ ಪಾದ |
ಸರಸೀರುಹ ಸ್ಮರಣೆ ಮಾಡಲು |
ದುರಿತಾ ಉಂಟೆ
ತರಣಿ ಕಿರಣಾ ಧರಣಿ ವ್ಯಾಪಿಸೆ |
ಘೋರ ತಿಮರಾ ದೂರಾವಲ್ಲದೆ |
ಕರುಣದಿಂದಲಿ ಕಾಯದಿದ್ದೊಡೆ |
ಶರಣರಾರೋ ನೀನೆ ಪೇಳೋ |೧|

ಕರ್ಮ ಕಾಲ ಕಾಮ |
ವಿಮತಿ ಪೂರ್ವ ಸರ್ವ ಕಾರಣಂಗಳು |
ಹರಿಯೇ ನಿನ್ನ ತಂತ್ರವಲ್ಲದೆ |
ಸ್ವತಂತ್ರ ನೀನೆ
ಪ್ರೇರಕನಾಗಿ ಕರ್ಮಫಲವು |
ಕ್ಯಲವನುಣಿಸಿ ಕ್ಯಲವನಳಿಸಿ |
ಹರಿಯೇ ನಿನ್ನ ದರುಶನವಾನಿತ್ತು |
ದೀನ ಜನರನ ಸಾಕುವಿಯಾಗಿ |೨|

ಮೀನ ಕೂರ್ಮ ವರಹ ರೂಪಾ |
ಶ್ರೀ ನಾರಸಿಂಹ ವಾಮನ |
ವಾನಾನಿ ರಾಮ | ರಾಮ |
ಕೃಷ್ಣ ಬುದ್ಧ ಕಲ್ಕ್ಯಾದಿ
ಅನೇಕ ರೂಪನಾಗಿ | ಚತು |
ರಾನನಾದಿ ಭಕುತರಿಗೆ |
ಜ್ಞಾನವಿತ್ತು ರಕ್ಷಿಸಿ ನೀ |
ಮಾನಾದಾನೆ ಸಿರಿರಾಮ |೩|


yennananyanA | mA |
Di nODade pAlisAbEkO |
ninna manadaliTTare sAkO [pa]

duraMta duritA | rA |
Si rUpA nAnAdADEnO ninna pAda |
sarasIruha smaraNe mADalu |
duritA uMTe
taraNi kiraNA dharaNi vyApise |
GOra timarA dUrAvallade |
karuNadiMdali kAyadiddoDe |
SaraNarArO nIne pELO |1|

karma kAla kAma |
vimati pUrva sarva kAraNaMgaLu |
hariyE ninna taMtravallade |
svataMtra nIne
prErakanAgi karmaPalavu |
kyalavanuNisi kyalavanaLisi |
hariyE ninna daruSanavAnittu |
dIna janarana sAkuviyAgi |2|

mIna kUrma varaha rUpA |
SrI nArasiMha vAmana |
vAnAni rAma | rAma |
kRuShNa buddha kalkyAdi
anEka rUpanAgi | catu |
rAnanAdi Bakutarige |
j~jAnavittu rakShisi nI |
mAnAdAne sirirAma |3|

Leave a Reply

Your email address will not be published. Required fields are marked *

You might also like

error: Content is protected !!