Composer : Shri Vadirajaru
ಮನ್ನಿಸೊ ನೀ ಎನ್ನ ಮಧ್ವಮುನಿರನ್ನ
ಚೆನ್ನಿಗ ಶ್ರೀಹರಿಪಾದ ಸೇವಕನೆ [ಪ.]
ಅಂಜನೆಯ ಗರ್ಭ ಪರಿಪೂರ್ಣ ಚಂದ್ರಮನೆ
ಕಂಜ ಪ್ರಿಯ ಸುತನಿಗೆ ಕಲ್ಪತರು ನೀನೆ
ರಂಜಿಸುವೆ ಶ್ರೀರಾಮಚಂದ್ರನ್ನ ಸೇವಕನೆ
ಸಂಜೀವ ಗಿರಿಯನು ತಂದ ಮಹಾತ್ಮನೆ (೧)
ಅರ್ಜುನನಿಗೆ ಅಣ್ಣನಾಗಿ ಅಖಿಲ ದಿಕ್ಕೆಲ್ಲವನು
ಲಜ್ಜೆಯನು ಕೆಡಿಸಿ ಷಡ್ರಥಿಕರನು ಜರಿದೆ
ಮೂಜಗವು ಮೆಚ್ಚಲು ಮಾಗಧನ ಸೀಳಿದೆ
ಸಜ್ಜನಪ್ರಿಯ ಭೀಮಸೇನ ಉದಾರ (೨)
ಮೂರಾರು ಎರಡೊಂದು ಮೂಢ ಮತಗಳ ಜರಿದು
ಸಾರ ಮಧ್ವಶಾಸ್ತ್ರ ಸಜ್ಜನರಿಗೊರೆದೆ
ಧೀರ ಶ್ರೀ ಹಯವದನನ ಕೂರ್ಮ ಸೇವಕನಾದ
ಧೀರ ಮಧ್ವಾಚಾರ್ಯ ದೇಶದೊಳು ಮೆರೆದೆ (೩)
manniso nI enna madhvamuniranna
cenniga SrIharipAda sEvakane [pa.]
aMjaneya garBa paripUrNa caMdramane
kaMja priya sutanige kalpataru nIne
raMjisuve SrIrAmacaMdranna sEvakane
saMjIva giriyanu taMda mahAtmane (1)
arjunanige aNNanAgi aKila dikkellavanu
lajjeyanu keDisi ShaDrathikaranu jaride
mUjagavu meccalu mAgadhana sILide
sajjanapriya BImasEna udAra (2)
mUrAru eraDoMdu mUDha matagaLa jaridu
sAra madhvaSAstra sajjanarigorede
dhIra SrI hayavadanana kUrma sEvakanAda
dhIra madhvAcArya dESadoLu merede (3)
Leave a Reply