Composer : Shri Gurupurandara dasaru on Shri Vadirajaru
ಕಂಡೆ ಕಂಡೆ ರಾಜರ ಕಂಡೆ ಕಂಡೆ
ಕಂಡೆ ಕಂಡೆ ವಾದಿರಾಜರ ಕಂಡೆ ಕಂಡೆ |ಪ|
ಕಂಡೆ ಕಂಡೆನು ಕರುಣ ನಿಧಿಯನು
ಕರಗಳಂಜಲಿ ಮಾಡಿ ಮುಗಿವೆನು
ಲಂಡ ಮಾಯಿಗಳ ಗುಂಡಿ ಒಡೆಯಲುದ್ದಂಡ
ಮಾರುತಿ ಪದಕೆ ಬರುವರ [ಅ.ಪ]
ಪಂಚ ವೃಂದಾವನದಿ ಮೆರೆಯುವ
ಪಂಚ ಬಾಣನ ಪಿತನ ಸ್ಮರಿಸುತ
ಪಂಚ ನಂದನ ಮುಂದೆ ಆಗುತ
ಮಿಂಚಿನಂದದಿ ಪೊಳೆವ ಮಹಿಮರ [೧]
ಪಂಚಪಾತಕ ಕಳೆವ ದೇವನ
ಪಂಕ ಜಾರಿನಿಭೇಂದು ವಕ್ತ್ರನಾ
ತಂಕವಿಲ್ಲದೆ ಭಜಿಪ ಸುಜನರ
ಶಂಕೆ ಬಿಡಿಸುವ ಶಂಕರೇಶನ [೨]
ಭಜಿಸುವೋರಿಗೆ ಭಾಗ್ಯ ಕೊಡುವರ
ಋಜುಗಣೇಶಮರೇಂದ್ರ ವಂದಿತ
ಗುರು ಪುರಂದರ ವಿಠ್ಠಲೇಶನ
ಭಜನೆ ಮಾಡುವ ಭಾವಿ ಮರುತರ [೩]
kaMDe kaMDe rAjara kaMDe kaMDe
kaMDe kaMDe vAdirAjara kaMDe kaMDe |pa|
kaMDe kaMDenu karuNa nidhiyanu
karagaLaMjali mADi mugivenu
laMDa mAyigaLa guMDi oDeyaluddaMDa
mAruti padake baruvara [a.pa]
paMca vRuMdAvanadi mereyuva
paMca bANana pitana smarisuta
paMca naMdana muMde Aguta
miMcinaMdadi poLeva mahimara [1]
paMcapAtaka kaLeva dEvana
paMka jArinibhEMdu vaktranA
taMkavillade bhajipa sujanara
shaMke biDisuva shaMkarEshana [2]
bhajisuvOrige bhAgya koDuvara
RujugaNEshamarEMdra vaMdita
guru puraMdara viThThalEshana
bhajane mADuva bhAvi marutara [3]
Leave a Reply