Olide yatakamma

Composer : Shri Gurugopala dasaru

ಒಲಿದೆ ಯಾತಕಮ್ಮ ಲಕುಮಿ ವಾಸುದೇವಗೇ |
ಹಲವಂಗದವನ ಹವಣೇ |
ತಿಳಿದು ತಿಳಿದೂ ತಿಳಿಯದ ಹಾಂಗೇ ||ಅ.ಪ||

ಕಮಲಗಂಧೀ ಕೋಮಲಾಂಗೀ | ಸುಂದರಾಬ್ಜ ವದನೇ ನೀನೂ
ರಮಣ ಮತ್ಸ್ಯ ಕಠಿಣಾ ಕಾಯಾ ಸೂಕರಾಸ್ಯನೂ ||
ರಮಣೀಯಾ ಸ್ವರೂಪೀ ನೀನೂ | ಅಮಿತ ಘೋರಾ ರೂಪನವನೂ
ನಮಿಪರಿಷ್ಟ ದಾನೀ ನೀನೂ | ದಾನವ ಬೇಡುವವನಿಗೆ ||೧||

ಜಾಣೆ ರತ್ನಾಕರನಾ ಮಗಳೂ, ತಾನು ಶುದ್ಧಾ ಭ್ರುಗು ಜಾನವನೂ |
ಆನಂದಾಬ್ಜ ಸದನೇ ನೀನೂ ವನವಾಸಿ ಅವನೂ |
ಮಾನ್ಯ ಪತಿವ್ರತೆಯೂ ನೀನೂ | ನಾನಾ ಯೋಶಿತ್ ಕಾಮಿಯವನೂ
ಜ್ಞಾನ ಚಿತ್ರವಸನೇ ನೀನೂ| ಹೀನ ಚೈಲನಾದವನೀಗೆ ||೨||

ಲಲಿತೆ ಚಾರೂ ಶೀಲೇ ನೀನೂ | ಕಲ್ಕಿ ಕಲಹ ಪ್ರೀಯನವನೂ |
ಕುಲದ ಕುರುಹು ಇಲ್ಲಾ ಗುಣದಾ ನೆಲೆಯು ಕಂಡಿಲ್ಲಾ |
ಹಲವು ಕಾಲದವನೂ ಅವನ | ಬಳಗ ಬಂಧೂ ನಿಷ್ಕಿಂಚನರು
ಜಲದಿ ಆಲದೆಲೆಯಾ ಮೇಲೇ ಮಲಗಿ ಬೆರಳ ಸವಿವವನಿಗೆ ||೩||

ಅವನ ವಾರ್ತೆ ಕೇಳೀದವರೂ | ಒಲ್ಲರೂ ಸಂಸಾರವನ್ನೂ
ಅವನ ಮೂರ್ತಿ ನೋಡೀದವರೂ | ಮನೆಯ ಧನವಾ ಬಿಡುವರೂ
ಅವನ ಪುರಕೇ ಪೋದಾ ಜನರೂ, ಒಮ್ಮೆಗನ್ನಾ ಹಿಂತಿರುಗರು |
ಅವನು ತಾನೇ ತನಯರನ್ನು | ತನ್ನವಯವದೀಂದ
ಪಡೆದವನಿಗೆ ||೪||

ಸ್ವರತಾನಾಪೇಕ್ಷಾ ಕಾಮೀ | ನಿದ್ರಾಹೀನಾ ಅನಶನನು |
ಸ್ಪರುಶ ರೂಪಾ ವಾಚ್ಯ ಶಬ್ದ ಅಮಿತ ಭೋಕ್ತನೂ |
ಗುರುಗೋಪಾಲಾ ವಿಠ್ಠಲನೂ | ನಿರುತ ತನ್ನಾ ವಕ್ಷದೋಳೂ
ಅರಮನೆಯ ಮಾಡೀಕೊಟ್ಟು ಮರಳು ಮಾಡಿದ ಮಾಯಾವಿಗೇ ||೫||


olide yAtakamma lakumi vAsudEvagE |
halavaMgadavana havaNE |
tiLidu tiLidU tiLiyada hAMgE ||a.pa||

kamalagaMdhI kOmalAMgI | suMdarAbja vadanE nInU
ramaNa matsya kaThiNA kAyA sUkarAsyanU ||
ramaNIyA svarUpI nInU | amita ghOrA rUpanavanU
namipariShTa dAnI nInU | dAnava bEDuvavanige ||1||

jANe ratnAkaranA magaLU, tAnu SuddhA Brugu jAnavanU |
AnaMdAbja sadanE nInU vanavAsi avanU |
mAnya pativrateyU nInU | nAnA yOshit kAmiyavanU
j~jAna citravasanE nInU| hIna cailanAdavanIge ||2||

lalite cArU sheelE nInU | kalki kalaha prIyanavanU |
kulada kuruhu illA guNadA neleyu kaMDillA |
halavu kAladavanU avana | baLaga baMdhU niShkiMcanaru
jaladi AladeleyA mElE malagi beraLa savivavanige ||3||

avana vArte kELIdavarU | ollarU saMsAravannU
avana mUrti nODIdavarU | maneya dhanavA biDuvarU
avana purakE pOdA janarU, ommegannA hiMtirugaru |
avanu tAnE tanayarannu | tannavayavadIMda
paDedavanige ||4||

svaratAnApEkShA kAmI | nidrAhInA anashananu |
sparuSa rUpA vAcya shabda amita bhOktanU |
gurugOpAlA viThThalanU | niruta tannA vakShadOLU
aramaneya mADIkoTTu maraLu mADida mAyAvigE ||5||

Leave a Reply

Your email address will not be published. Required fields are marked *

You might also like

error: Content is protected !!