Composer : Shri Vyasarajaru
ದಾಸನೆನಿಸೋ ನಿನ್ನಾ ಶ್ರೀನಿವಾಸ ಕ್ಷಮಿಸೋ ಎನ್ನಾ ||ಪ||
ಆಶಪಾಶಗಳಲ್ಲಿ ಘಾಸಿ ಬಿದ್ದೆನೋ ರಂಗಾ
ದೋಷ ರಹಿತ ಪರಮೇಶ ರಕ್ಷಿಸೋ ಎನ್ನಾ [೧]
ತರಳ ಪ್ರಹ್ಲಾದನ ಸರಳ ಭಕ್ತಿಗೆ ಮೆಚ್ಚಿ
ದುರುಳ ದೈತ್ಯನ ಪಿಡಿದು , ಕರುಳ ಬಗೆದ ಹರಿ [೨]
ಎಲ್ಲ ಭಕ್ತರ ಮನ ಸಲ್ಲಿಸಿ ಸಲಹುವ
ಮಲ್ಲಿನಾಥ ಪುರದ ಚೆಲ್ವ ಶ್ರೀಕೃಷ್ಣನೆ [೩]
dAsanenisO ninnA SrInivAsa kShamisO ennA ||pa||
ASapASagaLalli GAsi biddenO raMgA
dOSha rahita paramESa rakShisO ennA [1]
taraLa prahlAdana saraLa Baktige mecci
duruLa daityana piDidu , karuLa bageda hari [2]
ella Baktara mana sallisi salahuva
mallinAtha purada celva SrIkRuShNane [3]
Leave a Reply