Venkatesha Stavaraja – Dirgha kriti

Composer : Shri Gurujagannatha dasaru

By Smt.Shubhalakshmi Rao

ಶ್ರೀ ಗುರು ಜಗನ್ನಾಥ ದಾಸರ
|| ಶ್ರೀ ವೇಂಕಟೇಶ ಸ್ತವರಾಜ ||

ಶ್ರೀರಮಣ ಸರ್ವೇಶ ಸರ್ವದ |
ಸಾರಭೋಕ್ತ ಸ್ವತಂತ್ರ ಸರ್ವದ |
ಪಾರ ಮಹಿಮೋದಾರ ಸದ್ಗುಣ ಪೂರ್ಣ ಗಂಭೀರ ||
ಸಾರಿದವರಘ ದೂರಗೈಸಿ |
ಸೂರಿಜನರಿಗೆ ಸೌಖ್ಯ ನೀಡುವ |
ಧೀರ ವೇಂಕಟರಮಣ ಕರುಣದಿ ಪೊರೆಯೊ ನೀ ಎನ್ನ || ೧ ||

ಘನ್ನಮಹಿಮಾ ಪನ್ನಪಾಲಕ |
ನಿನ್ನಹೊರತಿನ್ನನ್ಯದೇವರ |
ಮನ್ನದಲಿ ನಾ ನೆನೆಸೆನೆಂದಿಗು ಬನ್ನ ಬಡಿಸದಿರು |
ಎನ್ನಪಾಲಕ ನೀನೇ ಇರುತಿರೆ
ಇನ್ನು ಭವ ಭಯವೇಕೆ ಎನಗೆ |
ಚೆನ್ನ ವೇಂಕಟರಮಣ ಕರುಣದಿ ಪೊರೆಯೊ ನೀ ಎನ್ನ || ೨ ||

ಲಕುಮಿ ಬೊಮ್ಮ ಭವಾಮರೇಶರು |
ಭಕುತಿ ಪೂರ್ವಕ ನಿನ್ನ ಭಜಿಸಿ
ಸಕಲ ಲೋಕಕೆ ನಾಥರೆನಿಪರು ಸರ್ವ ಕಾಲದಲಿ ||
ನಿಖಿಳ ಜೀವರ ಪೋರೆವ ದೇವನೆ |
ಭಕುತಿ ನೀ ಯೆನಗೀಯದಿರಲು
ವ್ಯಕುತವಾಗ್ಯಪಕೀರ್ತಿ ಬಪ್ಪದೊ ಶ್ರೀನಿಕೇತನನೆ || ೩ ||

ಯಾಕೆ ಪುಟ್ಟದು ಕರುಣ ಎನ್ನೊಳು |
ಸಾಕಲಾರೆಯ ನಿನ್ನ ಶರಣನ|
ನೂಕಿಬಿಟ್ಟರೆ ನಿನಗೆ ಲೋಕದಿ ಖ್ಯಾತಿ ಬಪ್ಪುವುದೇ ||
ನೋಕನೀಯನೆ ನೀನೇ ಎನ್ನನು |
ಜೋಕೆಯಿಂದಲಿ ಕಾಯೋ ಬಿಡದೆ |
ಏಕದೇವನು ನೀನೇ ವೇಂಕಟ ಶೇಷಗಿರಿವಾಸ || ೪ ||

ಅಂಬುಜಾಂಬಕ ನಿನ್ನ ಪದಯುಗ |
ನಂಬಿಕೊಂಡ ಈ ಪರಿಯಲಿರುತಿರೆ |
ಡೊಂಬೆಗಾರನ ತೆರದಿ ನೀ ನಿರ್ಭಾಗ್ಯ ಸ್ತಿತಿ ತೋರೆ ||
ಬಿಂಬ ಮೂರುತಿ ನಿನ್ನ ಕರಗತ |
ಕಂಬುವರವೇ ಗತಿಯೋ ವಿಶ್ವಕುಟುಂಬಿ |
ಎನ್ನನು ಸಲಹೋ ಸಂತತ ಶೇಷಗಿರಿವಾಸ || ೫ ||

ಸಾರಸಿರಿ ವೈಕುಂಠ ತ್ಯಜಿಸಿ |
ಧಾರುನಿಯೊಳ್ ಗೊಲ್ಲನಾಗಿ
ಚೋರ ಕರ್ಮವ ಮಾಡಿ ಬದುಕಿಹ ದಾರಿಗರಿಕಿಲ್ಲ ||
ಸಾರಿ ಪೇಳುವೆ ನಿನ್ನ ಗುಣಗಳ |
ಪಾರವಾಗಿರುತಿಹವೊ ಜನರಿಗೆ ಧೀರ
ವೆಂಕಟರಮಣ ಕರುಣದಿ ಪೊರೆಯೊ ನೀ ಯೆನ್ನ ||೬ ||

ನೀರ ಮುಳುಗಿ ಭಾರ ಪೊತ್ತು |
ಧಾರುಣೀ ತಳವಗೆದು ಸಿಟ್ಟಿಲಿ |
ಕ್ರೂರನುದರವ ಸೀಳಿ ಕರುಳಿನ ಮಾಲೆ ಧರಿಸಿದರು ||
ಪೋರ ವಿಪ್ರ ಕುಠಾರಿ ವನವನ |
ಚಾರಿ ಗೋಪ ದಿಗಂಬರಾಶ್ವವ ಏರಿ ಪೋದರು
ಬಿಡೆನೋ ವೇಂಕಟ ಶೇಷಗಿರಿವಾಸ ||೭||

ಲಕ್ಷ್ಮೀನಾಯಕ ಸಾರ್ವಭೌಮನೆ |
ಪಕ್ಷಿವಾಹನ ಪರಮ ಪುರುಷನೆ |
ಮೊಕ್ಷದಾಯಕ ಪ್ರಾಣಜನಕನೆ ವಿಶ್ವ ವ್ಯಾಪಕನೆ ||
ಅಕ್ಷಯಾಂಬರವಿತ್ತು ವಿಜಯನ |
ಪಕ್ಷಪಾತವ ಮಾಡಿ ಕುರುಗಳ
ಲಕ್ಷ್ಯಮಾಡದೆ ಕೊಂದೆಯೋ ಶ್ರೀ ಶೇಷಗಿರಿವಾಸ ||೮||

ಹಿಂದೆ ನೀ ಪ್ರಹ್ಲಾದಗೋಸುಗ |
ಎಂದು ನೋಡದ ರೂಪ ಧರಿಸಿ |
ಬಂದು ದೈತ್ಯನ ಒಡಲ ಬಗೆದು ಪೊರೆದೆ ಬಾಲಕನ ||
ತಂದೆತಾಯ್ಗಳ ಬಿಟ್ಟು ವಿಪಿನದಿ |
ನಿಂದು ತಪಿಸುವ ಪಂಚಮತ್ಸರ |
ಕಂದನಾ ಧ್ರುವನಿಗೋಲಿದು ಪೊರೆದೆಯೊ ಶೇಷಗಿರಿವಾಸ ||೯||

ಪಿಂತು ಮಾದಿದ ಮಹಿಮೆಗಳ ನಾ |
ನೆಂತು ವರ್ಣಿಸಲೇನು ಫಲ ಶ್ರೀಕಾಂತ
ಎನ್ನನು ಪೊರೆಯೆ ಕೀರುತಿ ನಿನಗೆ ಫಲವೆನಗೆ ||
ಕಂತು ಜನಕನೆ ಎನ್ನ ಮನಸಿನ |
ಅಂತರಂಗದಿ ನೀನೆ ಸರ್ವದ |
ನಿಂತು ಪ್ರೇರಣೆ ಮಾಳ್ಪೆ ಸರ್ವದ ಶೇಷಗಿರಿವಾಸ ||೧೦||

ಮಡುವಿನೊಳಗಿಹ ಮಕರಿಕಾಲನು |
ಪಿಡಿದು ಬಾಧಿಸೆ ಕರಿಯು ತ್ರಿಜಗ|
ದ್ವಡೆಯ ಪಾಲಿಸೊ ಎನಲು ತಕ್ಷಣ ಬಂದು ಪಾಲಿಸಿದೆ ||
ಮಡದಿ ಮಾತನು ಕೇಳಿ ಬಲುಪರಿ |
ಬಡವ ಬ್ರಾಹ್ಮಣ ಧಾನ್ಯ ಕೊಡಲು |
ಪೊಡವಿಗಸದಳ ಭಾಗ್ಯ ನೀಡಿದೆ ಶೇಷಗಿರಿವಾಸ ||೧೧||

ಶ್ರೀನಿವಾಸನೆ ಭಕ್ತಪೋಷನೆ |
ಜ್ಞಾನಿ ಕುಲಗಳಿಗಭಯದಾಯಕ |
ಧೀನಬಾಂದವ ನೀನೇ ಎನ್ನ ಮನದರ್ಥ ಪೂರೈಸೋ ||
ಅನುಪಮೋಪಮಜ್ಞಾನ ಸಂಪದ |
ವಿನಯ ಪೂರ್ವಕವಿತ್ತು ಪಾಲಿಸೊ |
ಜನುಮ ಜನುಮಕೆ ಮರೆಯ ಬೇಡವೋ ಶೇಷಗಿರಿವಾಸ || ೧೨ ||

ಮದವು ಮತ್ಸರ ಲೋಭ ಮೋಹವು |
ಒದಗಬಾರದು ಎನ್ನ ಮನದಲಿ |
ಪದುಮನಾಭನೆ ಜ್ಞಾನ ಭಕ್ತಿವಿರಕ್ತಿ ನೀನಿತ್ತು |
ಹೃದಯ ಮಧ್ಯದಿ ನಿನ್ನ ರೂಪವು |
ವದನದಲಿ ತವ ನಾಮಮಂತ್ರವು |
ಸದಯ ಪಾಲಿಸು ಬೇಡಿಕೊಂಬೇನೊ ಶೇಷಗಿರಿವಾಸ || ೧೩ ||

ಅಂದನುಡಿ ಪುಸಿಯಾಗಬಾರದು |
ಬಂದ ಭಾಗ್ಯವು ಪೋಗಬಾರದು |
ಕುಂದುಬಾರದೆ ನಿನ್ನ ಕರುಣವು ದಿನದಿ ವರ್ಧಿಸಲಿ |
ನಿಂದೆ ಮಾಡುವ ಜನರ ಸಂಗವು |
ಎಂದಿಗಾದರು ದೊರೆಯಬಾರದು |
ಎಂದು ನಿನ್ನನು ಬೇಡಿಕೊಂಬೆನೊ ಶೇಷಗಿರಿವಾಸ || ೧೪ ||

ಏನು ಬೇಡಲಿ ಎನ್ನ ದೇವನೇ |
ಸಾನುರಾಗದಿ ಎನ್ನ ಪಾಲಿಸೊ |
ನಾನಾ ವಿಧವಿಧ ಸೌಖ್ಯ ನಿಡುವುದಿಹ ಪರಂಗಳಲಿ |
ಶ್ರೀನಿವಾಸನೆ ನಿನ್ನ ದಾಸಗೆ |
ಏನು ಕೊರೆತಿಲೆಲ್ಲಿ ನೋಡಲು |
ನೀನೇ ನಿಂತೀವಿದದಿ ಪೇಳಿಸು ಶೇಷಗಿರಿವಾಸ ||೧೫ ||

ಆರು ಮುನಿದವರೇನು ಮಾಳ್ಪರೊ |
ಆರು ಒಲಿದವರೇನು ಮಾಳ್ಪರೊ |
ಆರುನೇಹಿಗರಾರು ದ್ವೇಶಿಗಳಾರುದಾಶಿನರು ||
ಕ್ರೂರ ಜೀವರ ಹಣಿದು ಸಾತ್ವಿಕ |
ಧೀರ ಜೀವರ ಪೊರೆದು ನಿನ್ನಲಿ |
ಸಾರ ಭಕುತಿಯನಿತ್ತು ಪಾಲಿಸೋ ಶೇಷಗಿರಿವಾಸ || ೧೬ ||

ನಿನ್ನ ಸೇವೆಯನಿತ್ತು ಎನಗೆ |
ನಿನ್ನ ಪದಯುಗಭಕ್ತಿ ನೀಡಿ |
ನಿನ್ನ ಗುಣಗಣ ಸ್ತವನ ಮಾಡುವ ಜ್ಞಾನ ನೀನಿತ್ತು |
ಎನ್ನ ಮನದಲಿ ನೀನೇ ನಿಂತು |
ಘನ್ನಕಾರ್ಯವ ಮಾಡಿ ಮಾಡಿಸು |
ಧನ್ಯನೆಂದೆನಿಸೆನ್ನ ಲೋಕದಿ ಶೇಷಗಿರಿವಾಸ || ೧೭ ||

ಜಯ ಜಯತು ಶಠ ಕೂರ್ಮರೂಪನೆ |
ಜಯ ಜಯತು ಕಿಟ ಸಿಂಹ ವಾಮನ |
ಜಯ ಜಯತು ಭೃಗುರಾಮ ರಘುಕುಲಸೋಮ ಶ್ರೀರಾಮ ||
ಜಯ ಜಯತು ಸಿರಿ ಯದುವರೇಣ್ಯನೆ |
ಜಯ ಜಯತು ಜನಮೋಹ ಬುದ್ಧನೆ |
ಜಯ ಜಯತು ಕಲಿಕಲ್ಮಶಘ್ನನೆ ಕಲ್ಕಿನಾಮಕನೆ || ೧೮ ||

ಕರುಣಸಾಗರ ನೀನೇ ನಿಜಪದ |
ಶರಣವತ್ಸಲ ನೀನೇ ಶಾಶ್ವತ |
ಶರಣ ಜನಮಂದಾರ ಕಮಲಾ ಕಾಂತ ಜಯವಂತ |
ನಿರುತ ನಿನ್ನನು ನುತಿಸಿ ಪಾಡುವೆ |
ವರದ ಗುರು ಜಗನ್ನಾಥವಿಠ್ಠಲ |
ಪರಮ ಪ್ರೇಮದಿ ಪೊರೆಯೊ ಎನ್ನನು ಶೇಷಗಿರಿವಾಸ || ೧೯ ||

|| ಶ್ರೀಕೃಷ್ಣಾರ್ಪಣಮಸ್ತು ||


shrIramaNa sarvEsha sarvada |
sArabhOkta svataMtra sarvada |
pAra mahimOdAra sadguNa pUrNa gaMbhIra ||
sAridavaragha dUragaisi |
sUrijanarige saukhya nIDuva |
dhIra vEMkaTaramaNa karuNadi poreyo nI enna || 1 ||

ghannamahimA pannapAlaka |
ninnahoratinnanyadEvara |
mannadali nA neneseneMdigu banna baDisadiru |
ennapAlaka nInE irutire
innu bhava bhayavEke enage |
cenna vEMkaTaramaNa karuNadi poreyo nI enna || 2 ||

lakumi bomma bhavAmarEsharu |
bhakuti pUrvaka ninna bhajisi
sakala lOkake nAthareniparu sarva kAladali ||
nikhiLa jIvara pOreva dEvane |
bhakuti nee yenagIyadiralu
vyakutavAgyapakIrti bappado shrInikEtanane || 3 ||

yAke puTTadu karuNa ennoLu |
sAkalAreya ninna sharaNana|
nUkibiTTare ninage lOkadi khyAti bappuvudE ||
nOkanIyane nInE ennanu |
jOkeyiMdali kAyO biDade |
EkadEvanu nInE vEMkaTa shEShagirivAsa || 4 ||

aMbujAMbaka ninna padayuga |
naMbikoMDa I pariyalirutire |
DoMbegArana teradi nI nirbhAgya stiti tOre ||
biMba mUruti ninna karagata |
kaMbuvaravE gatiyO vishvakuTuMbi |
ennanu salahO saMtata shEShagirivAsa || 5 ||

sArasiri vaikuMTha tyajisi |
dhAruniyoL gollanAgi
cOra karmava mADi badukiha dArigarikilla ||
sAri pELuve ninna guNagaLa |
pAravAgirutihavo janarige dheera
veMkaTaramaNa karuNadi poreyo nee yenna ||6 ||

nIra muLugi bhAra pottu |
dhAruNI taLavagedu siTTili |
krUranudarava sILi karuLina mAle dharisidaru ||
pOra vipra kuThAri vanavana |
cAri gOpa digaMbarAshvava Eri pOdaru
biDenO vEMkaTa shEShagirivAsa ||7||

lakShmInAyaka sArvabhoumane |
pakShivAhana parama puruShane |
mokShadAyaka prANajanakane vishwa vyApakane ||
akShayAMbaravittu vijayana |
pakShapAtava mADi kurugaLa
lakShyamADade koMdeyO shrI shEShagirivAsa ||8||

hiMde nI prahlAdagOsuga |
eMdu nODada rUpa dharisi |
baMdu daityana oDala bagedu porede bAlakana ||
taMdetAygaLa biTTu vipinadi |
niMdu tapisuva paMcamatsara |
kaMdanA dhruvanigOlidu poredeyo shEShagirivAsa ||9||

piMtu mAdida mahimegaLa nA |
neMtu varNisalEnu phala shrIkAMta
ennanu poreye kIruti ninage phalavenage ||
kaMtu janakane enna manasina |
aMtaraMgadi nIne sarvada |
niMtu prEraNe mALpe sarvada shEShagirivAsa ||10||

maDuvinoLagiha makarikAlanu |
piDidu bAdhise kariyu trijaga|
dvaDeya pAliso enalu takShaNa baMdu pAliside ||
maDadi mAtanu kELi balupari |
baDava brAhmaNa dhAnya koDalu |
poDavigasadaLa bhAgya nIDide shEShagirivAsa ||11||

shrInivAsane bhaktapOShane |
j~jAni kulagaLigabhayadAyaka |
dhInabAMdava nInE enna manadartha pUraisO ||
anupamOpamaj~jAna saMpada |
vinaya pUrvakavittu pAliso |
januma janumake mareya bEDavO shEShagirivAsa || 12 ||

madavu matsara lObha mOhavu |
odagabAradu enna manadali |
padumanAbhane j~jAna bhaktivirakti nInittu |
hRudaya madhyadi ninna rUpavu |
vadanadali tava nAmamaMtravu |
sadaya pAlisu bEDikoMbEno shEShagirivAsa || 13 ||

aMdanuDi pusiyAgabAradu |
baMda bhAgyavu pOgabAradu |
kuMdubArade ninna karuNavu dinadi vardhisali |
niMde mADuva janara saMgavu |
eMdigAdaru doreyabAradu |
eMdu ninnanu bEDikoMbeno shEShagirivAsa || 14 ||

Enu bEDali enna dEvanE |
sAnurAgadi enna pAliso |
nAnA vidhavidha saukhya niDuvudiha paraMgaLali |
shrInivAsane ninna dAsage |
Enu koretilelli nODalu |
nInE niMtIvidadi pELisu shEShagirivAsa ||15 ||

Aru munidavarEnu mALparo |
Aru olidavarEnu mALparo |
ArunEhigarAru dvEshigaLArudAshinaru ||
krUra jIvara haNidu sAtvika |
dhIra jIvara poredu ninnali |
sAra bhakutiyanittu pAlisO shEShagirivAsa || 16 ||

ninna sEveyanittu enage |
ninna padayugabhakti nIDi |
ninna guNagaNa stavana mADuva j~jAna nInittu |
enna manadali nInE niMtu |
ghannakAryava mADi mADisu |
dhanyaneMdenisenna lOkadi shEShagirivAsa || 17 ||

jaya jayatu shaTha kUrmarUpane |
jaya jayatu kiTa siMha vAmana |
jaya jayatu bhRugurAma raghukulasOma shrIrAma ||
jaya jayatu siri yaduvarENyane |
jaya jayatu janamOha buddhane |
jaya jayatu kalikalmashaghnane kalkinAmakane || 18 ||

karuNasAgara nInE nijapada |
sharaNavatsala nInE shAshvata |
sharaNa janamaMdAra kamalA kAMta jayavaMta |
niruta ninnanu nutisi pADuve |
varada guru jagannAthaviThThala |
parama prEmadi poreyo ennanu shEShagirivAsa || 19 ||

|| shrIkRuShNArpaNamastu ||

One response to “Venkatesha Stavaraja – Dirgha kriti”

  1. […] Dirgha Kriti – Haridasa Seva  […]

Leave a Reply

Your email address will not be published. Required fields are marked *

You might also like

error: Content is protected !!