Dhaniya nodideno

Composer : Shri Purandara dasaru

By Smt.Shubhalakshmi Rao

ದರಿದ್ರರೆನಬಹುದೆ ಹರಿದಾಸರ
ಸಿರಿವಂತರೆನಬಹುದೆ ಹರಿದ್ರೋಹಿಗಳ
ಹರಿದಾಸರ ಮೇಲಿದ್ದ ಕರುಣವು ಸಿರಿದೇವಿಯ ಮೇಲಿಲ್ಲವು
ಪುರಂದರ ವಿಠಲನಾಳ್ಗಳ್ಗೆ
ಎಲ್ಲಿಹುದೈ ಮಾನ ಅಭಿಮಾನ ಜಗದಿ ||

ಧಣಿಯ ನೋಡಿದೆನೋ ವೆಂಕಟನ , ಮನ-
ದಣಿಯ ನೋಡಿದೆನೊ ಶಿಖಾಮಣಿ ತಿರುಮಲನ |ಪ|

ಚರಣದಂದುಗೆ ಗೆಜ್ಜೆಯವನ , ಪೀತಾಂ-
ಬರ ಉಡಿಗೆ ಒಡ್ಯಾಣವಿಟ್ಟಿಹನ
ಮೆರೆಯುವ ಮಾಣಿಕ್ಯದವನ , ಚೆನ್ನ
ಸರ ಹಾರ ಪದಕ ಕೌಸ್ತುಭ ಧರಿಸಿದನ |೧|

ಕೊರಳೊಳು ವೈಜಯಂತಿ ಧರಿಸೀಹನ , ಕಿರು
ಬೆರಳ ಮುದ್ರಿಕೆ ಭುಜ ಕೀರ್ತಿಲೊಪ್ಪುವನ
ಅರಳು ಕಂಗಳ ನೋಟದವನ , ಸುಳಿ-
ಗುರುಳು ನೊಸಲ ಪಟ್ಟಿ ನಾಮ ಹಚ್ಚಿಹನ |೨|

ಶಂಖ ಚಕ್ರವ ಪಿಡಿದಿಹನ , ಕೈ-
ಕಂಕಣ ತೋಳ್ಬಂದಿ ಭಾಪುರಿಯವನ
ಶಂಖನೂದುವ ಸರ್ವೋತ್ತಮನ , ಭೂ
ವೈಕುಂಠವಿದೆಂದು ಹಸ್ತದಿ ತೋರುತಿಹನ |೩|

ಕೇಸಕ್ಕಿ ಅನ್ನ ಉಂಬುವನ , ಬಡ್ಡಿ
ಕಾಸು ಬಿಡದ ಹಾಗೆ ಕೂಡಿ ಹಾಕುವನ
ಘೋಷಾನಾದಕ್ಕೆ ಒಲಿದಿಹನ , ಮೈಯೊಳು
ಸೂಸುವ ಗಂಧ ಕಸ್ತೂರಿ ಲೇಪಿತನ |೪|

ನೀಟಾದ ವಲ್ಲಿ ಹೊದ್ದಿಹನ , ಹೊರ
ಬೇಟೆಯಾಡಿ ಅಂದದಿಂದ ಬರುವನ
ನೋಟದಿ ಬಂದು ನಿಂತಿಹನ , ಈ
ಸೃಷ್ಟಿಗೊಡೆಯ ಪುರಂದರವಿಠ್ಠಲನ್ನ |೫|


daridrarenabahude haridAsara
sirivaMtarenabahude haridrOhigaLa
haridAsara mElidda karuNavu siridEviya mElillavu
puraMdara viThalanALgaLge
ellihudai mAna aBimAna jagadi ||

dhaNiya nODidenO veMkaTana , mana-
daNiya nODideno SiKAmaNi tirumalana |pa|

caraNadaMduge gejjeyavana , pItAM-
bara uDige oDyANaviTTihana
mereyuva mANikyadavana , cenna
sara hAra padaka kaustuBa dharisidana |1|

koraLoLu vaijayaMti dharisIhana , kiru
beraLa mudrike Buja kIrtiloppuvana
araLu kaMgaLa nOTadavana , suLi-
guruLu nosala paTTi nAma haccihana |2|

SaMKa cakrava piDidihana , kai-
kaMkaNa tOLbaMdi bhApuriyavana
SaMKanUduva sarvOttamana , BU –
vaikuMThavideMdu hastadi tOrutihana |3|

kEsakki anna uMbuvana , baDDi
kAsu biDada hAge kUDi hAkuvana
GOShAnAdakke olidihana , maiyoLu
sUsuva gaMdha kastUri lEpitana |4|

nITAda valli hoddihana , hora
bETeyADi aMdadiMda baruvana
nOTadi baMdu niMtihana , I
sRuShTigoDeya puraMdaraviThThalanna |5|

Leave a Reply

Your email address will not be published. Required fields are marked *

You might also like

error: Content is protected !!