Composer : Shri Pranesha dasaru
ಬಂದ ದುರಿತಗಳ ಪರಿಹರಿಸಲು ನಮ್ಮ
ಇಂದಿರೇಶ ಸ್ವಾಮಿ ಶ್ರೀ ವೆಂಕಟೇಶನು |ಪ|
ಬಂದನು ಬರದಿಂದ ಗರುಡವಾಹನನಾಗಿ |
ಬಂದ ಬಂದ ಭಕ್ತವ್ರುಂದವ ನೋಡುತ
ಬಂದ ಗೋವಿಂದ ,ಮುಕುಂದ , ನಿತ್ಯಾನಂದ
ಬಂದಾ, ಶ್ರೀಹರಿ ತಾ ಬಂದ |ಅ.ಪ|
ಅರಗಿನ ಮನೆಯೊಳು ಪಾಂಡು ಕುಮಾರರು
ಇರುತಿರೆ ಅವರಿಗೆ ಬಂದ ವಿಪತ್ತನ್ನು |
ಪರಿಹಾರವ ಮಾಡಿ ದ್ರುಪದನ ಪೊರೆಯಲು |
ಪರಮ ಹರುಷದಿಂದ ಮದುವೆಯ ಮಾಡಿದವ
ಬಂದ ಗೋವಿಂದ, ಮುಕುಂದ, ನಿತ್ಯಾನಂದ ಬಂದಾ [೧]
ದುರುಳನಾದ ದುಸ್ಶಾಸನ ಸಭೆಯೊಳು
ತರುಣಿ ದ್ರೌಪದಿಯ ಸೀರೆಯ ಸೆಳೆಯಲು |
ಪರಮ ಕರುಣದಿಂದ ತರುಣಿಗೆ ಅಕ್ಷಯವಿತ್ತು |
ದ್ವಾರಕಾದಿಪತಿ ಶ್ರೀಪತಿ ಒಲಿಯುತ
ಬಂದ ಗೋವಿಂದ, ಮುಕುಂದ, ನಿತ್ಯಾನಂದ ಬಂದಾ [೨]
ಗುಣನಿಧಿ ಪ್ರಾಣೇಶವಿಠ್ಠಲನು ಬಂದ ,
ಘನತರವಾದ್ಯ ವಿಷೇಶಗಳಿಂದ |
ಝಣಝಣರೆನ್ನುವ ಗೆಜ್ಜೆನಾದಗಳಿಂದ |
ಥಧಿಮಿ ಥಧಿಮಿ ಧಿಮಿಕ್ಕೆಂದು ಕುಣಿಯುತ |
ಬಂದ ಗೋವಿಂದ, ಮುಕುಂದ, ನಿತ್ಯಾನಂದ ಬಂದಾ [೩]
baMda duritagaLa pariharisalu namma
iMdirESa svAmi SrI veMkaTESanu |pa|
baMdanu baradiMda garuDavAhananAgi |
baMda baMda BaktavruMdava nODuta
baMda gOviMda ,mukuMda , nityAnaMda
baMdA, shrIhari tA baMda |a.pa|
aragina maneyoLu pAMDu kumAraru
irutire avarige baMda vipattannu |
parihArava mADi drupadana poreyalu |
parama haruShadiMda maduveya mADidava
baMda gOviMda, mukuMda, nityAnaMda baMdA [1]
duruLanAda dusshAsana saBeyoLu
taruNi draupadiya sIreya seLeyalu |
parama karuNadiMda taruNige akShayavittu |
dvArakAdipati SrIpati oliyuta
baMda gOviMda, mukuMda, nityAnaMda baMdA [2]
guNanidhi prANESaviThThalanu baMda ,
GanataravAdya viShESagaLiMda |
JaNaJaNarennuva gejjenAdagaLiMda |
thadhimi thadhimi dhimikkeMdu kuNiyuta |
baMda gOviMda, mukuMda, nityAnaMda baMdA [3]
Leave a Reply