Jana manadali

Composer : Shri Pranesha dasaru

By Smt.Shubhalakshmi Rao

ಜನಮನದಲಿ ಸದ್ಭಾವನೆ ಬಿತ್ತಲು
ಇನ್ನೊಮ್ಮೆ ಬಾ ಗುರುರಾಯಾ || ಪ ||

ಪಾಪವಿಲೋಕದಿ ತುಂಬಿ ನಿಂತಿದೆ
ಪಾಪಹರಣ ನೀ ಬೇಗನೆ ಬಾರೋ || ಅ.ಪ ||

ತನುಮನ ಧನವನು ನಿನಗರ್ಪಿಸಿದೆ ಇನಿತು
ಪೇಳುತಲಿ ನಾ ಪಾಪದಿ ನೊಂದೆ |
ದೀನರ ರಕ್ಷಿಸು ಎಂದು ನಾ ಬೇಡಿದೆ |
ಗುರುರಾಜಾ ನಿನ್ನ ಕಾಡಿ ನಾ ಬೇಡಿದೆ || ೧ ||

ಗಂಗಾ ನದಿಯ ಚೆಲ್ವಿಕೆ ಪಡೆದ |
ತುಂಗೆಯ ದಡದಲಿ ವಾಸ ಮಾಡಿದ |
ಅಘದ ಜನುಮಗಳ ಪಾಪವ ತೊಳೆಯಲು
ರಾಘವೇಂದ್ರಗುರು ಇನ್ನೊಮ್ಮೆ ನೀ ಬಾರೋ || ೨ ||

ಮಂತ್ರಾಲಯದ ಚೆಲುವ ಚಂದಿರ |
ಅಂತರಂಗದಲಿ ನೆಲೆಸಿ ನಿರಂತರ |
ಕಂತು ಪಿತನೆ ಶ್ರೀ ಪ್ರಾಣೇಶ ವಿಠಲನೆ |
ಸಂತಸದೀ ನೀ ಭಕುತರ ಪೊರೆಯಲು || ೩ ||


janamanadali sadBAvane bittalu
innomme bA gururAyA || pa ||

pApavilOkadi tuMbi niMtide
pApaharaNa nI bEgane bArO || a.pa ||

tanumana dhanavanu ninagarpiside initu
pELutali nA pApadi noMde |
dInara rakShisu eMdu nA bEDide |
gururAjA ninna kADi nA bEDide || 1 ||

gaMgA nadiya celvike paDeda |
tuMgeya daDadali vAsa mADida |
aGada janumagaLa pApava toLeyalu
rAGavEMdraguru innomme nI bArO || 2 ||

maMtrAlayada celuva caMdira |
aMtaraMgadali nelesi niraMtara |
kaMtu pitane SrI prANESa viThalane |
saMtasadI nI Bakutara poreyalu || 3 ||

Leave a Reply

Your email address will not be published. Required fields are marked *

You might also like

error: Content is protected !!