Dasanagabeku sadashivana

Composer : Shri Kanakadasaru

By Smt.Shubhalakshmi Rao

ದಾಸನಾಗಬೇಕು ಸದಾಶಿವನ ದಾಸನಾಗಬೇಕು ||ಪ||

ದಾಸನಾಗಬೇಕು ಕ್ಲೇಶ ಪಂಚಕವಳಿದು |
ಆಸೆಯಲ್ಲಿ ಮನ ಸೂಸದೆ ಸರ್ವದಾ ||ಅ||

ಮನದ ಕಲ್ಮಷ ಕಳೆದು
ಮಹಾದೇವನ ಮಹಿಮೆಯ ತಿಳಿದು
ಇನಿತು ಈ ಜಗವೆಲ್ಲ ಈಶ್ವರಮಯವೆಂದು
ಘನವಾದ ಮೋಹದ ಗಡಿಯನು ದಾಟುತ ||೧||

ತನುವು ಅಸ್ಥಿರವೆನುತ
ತಿಳಿದು ಶಂಕರನ ಹೃದಯವ ಕಾಣುತ
ಘನವಾದ ಇಂದ್ರಜಾಲವ ಮಾಯೆಯೆನುತ
ಬಿನುಗು ಸಂಸಾರದ ಮಮತೆಯ ಬಿಡುತ ||೨||

ಆರು ಚಕ್ರದಿ ಮೆರೆವ
ಅಖಂಡನ ಮೂರು ಗುಣವ ತಿಳಿದು
ಆರು ಮೂರು ಹದಿನಾರು ತತ್ತ್ವವ
ಮೀರಿ ತೋರುವ ಕಾಗಿನೆಲೆಯಾದಿ ಕೇಶವನಡಿ ||೩||


dAsanAgabEku sadASivana dAsanAgabEku ||pa||

dAsanAgabEku klESa paMcakavaLidu |
Aseyalli mana sUsade sarvadA ||a||

manada kalmaSha kaLedu –
mahAdEvana mahimeya tiLidu
initu I jagavella ISvaramayaveMdu
GanavAda mOhada gaDiyanu dATuta ||1||

tanuvu asthiravenuta –
tiLidu SaMkarana hRudayava kANuta
GanavAda iMdrajAlava mAyeyenuta
binugu saMsArada mamateya biDuta ||2||

Aru cakradi mereva –
aKaMDana mUru guNava tiLidu
Aru mUru hadinAru tattvava
mIri tOruva kAgineleyAdi kESavanaDi ||3||

Leave a Reply

Your email address will not be published. Required fields are marked *

You might also like

error: Content is protected !!