Tag: Dasanagabeku sadashivana

  • Dasanagabeku sadashivana

    Composer : Shri Kanakadasaru ದಾಸನಾಗಬೇಕು ಸದಾಶಿವನ ದಾಸನಾಗಬೇಕು ||ಪ|| ದಾಸನಾಗಬೇಕು ಕ್ಲೇಶ ಪಂಚಕವಳಿದು |ಆಸೆಯಲ್ಲಿ ಮನ ಸೂಸದೆ ಸರ್ವದಾ ||ಅ|| ಮನದ ಕಲ್ಮಷ ಕಳೆದುಮಹಾದೇವನ ಮಹಿಮೆಯ ತಿಳಿದುಇನಿತು ಈ ಜಗವೆಲ್ಲ ಈಶ್ವರಮಯವೆಂದುಘನವಾದ ಮೋಹದ ಗಡಿಯನು ದಾಟುತ ||೧|| ತನುವು ಅಸ್ಥಿರವೆನುತತಿಳಿದು ಶಂಕರನ ಹೃದಯವ ಕಾಣುತಘನವಾದ ಇಂದ್ರಜಾಲವ ಮಾಯೆಯೆನುತಬಿನುಗು ಸಂಸಾರದ ಮಮತೆಯ ಬಿಡುತ ||೨|| ಆರು ಚಕ್ರದಿ ಮೆರೆವಅಖಂಡನ ಮೂರು ಗುಣವ ತಿಳಿದುಆರು ಮೂರು ಹದಿನಾರು ತತ್ತ್ವವಮೀರಿ ತೋರುವ ಕಾಗಿನೆಲೆಯಾದಿ ಕೇಶವನಡಿ ||೩|| dAsanAgabEku sadASivana dAsanAgabEku…

error: Content is protected !!