Composer: Shri Vadirajaru
| ಗುಂಡಕ್ರಿಯ |
ಬರಿದೆ ಸಂಸಾರದಿ ಜರಿದೆ ಮರೆದೆ
ಹರಿ ನಿನ್ನ ಅನುಸರಿಸುತಿರದೆ
ಕರಿ ದೇವದೇವಯೆನ್ನೆ
ಕರುಣಿ ಕಣ್ತೆರೆದೆ ತರಿದೆ ಮಕರಿಯ
ಮುಖವ ನೀ ಬೇಸರದೆ
ವರದೇಶ ಪಾಹಿಯೆನೆ ಅಜಮಿಳನ
ಪೊರೆದೆ ಮುರಿದೆ ಯಮಭಟರ
ತರಿದೆ ಪಾಶಗಳ ಕರೆದೆನ್ನ ಹಯವದನ
ಒರೆದೆ ತತ್ವಗಳ ಮೆರೆದೆ ಮಹಿಮೆಯ
ನಿನಗಿದೊಂದರಿದೆ || ೧ ||
ದೇಹವಿಲ್ಲದೆ ಬೇರೆ ಜೀವವಿಲ್ಲೆಂಬನೆ
ಮೋಹದ ನಿನ್ನ ಹೆಂಡತಿ ಸಾಯಲೇತಕೆ
ಹಾಹಾ ಎಂದಳುವೆ ವಾದಿ
ನೇಹಪಾತುರವಾದ ಪೂರ್ವಕಾಯಕ್ಕೇನ್-
ಹಾನಿ ಬಂದಿತು ಪೇಳಾ
ಬಾಹುಗಳಿಂದದನಪ್ಪಿ ರಮಿಸಬೇಕು
ನೀ ಹೇಳಿದ ಪಂಥಕೆ
ಶ್ರೀಹಯವದನ ಇಂತಲ್ಲದಿದ್ದರೆ ನಗುವ
ಈ ಹದನರಿಯದವನ ಮತ ದುರ್ಮತ
ಸಾಹಸ ಸಾಕು ಸಾಕು || ೨ ||
ಎಲ್ಲವಿದ್ದರು ಶ್ವಾಸವೊಂದಿಲ್ಲವೆಂಬನೆ
ಬಲ್ಲಿದ ಡೊಂಬನ ಸತಿ ಪವನವ ಕಟ್ಟಿ
ನಲ್ಲಿವಾಗಂಬರದಿ
ಕುಳ್ಳಿರ್ದ ದಾರವು ಕಡಿದ ಮೇಲೆ ತಾ
ನಿಲ್ವಳು ಚಲಿಸದಂತೆ
ತೊಲ್ಲಗಿದಸು ಮತ್ತದೆಲ್ಲೇದೆಂಬ ಯುಕ್ತಿ
ಸಲ್ಲದಲ್ಲ ನಿನಗೆ
ಬಲ್ಲವಧೂತರು ಪ್ರಾಣಮಾರ್ಗವ ತಡೆದು
ಚೆಲ್ವಹಯವದನನ ಮೆಚ್ಚಿಸಿ ಶೈಲಾಗ್ರದಿ
ತಲೆಯೂರಿ ತಪಿಸರೆ || ೩ ||
ಸ್ಯಾದೆಂಬ ವಾದಿ ನಾವೆಂಬ ಪ್ರಮೇಯವ
ಸಾಧಿಸಬೇಕಾಗಿ ವಾದಿಪೆಯೆಂತೊ
ಬಾಧಿಪ ಮಾತನಜ್ಞಾ
ಬೋಧನಿಗ್ರಹ ತಾನೆ ಬಾರದೆ ಬಿಡದು
ಮೊದಲಿಗೆ ಸೋತೆಯಲ್ಲ
ಆದಿಯನರಿಯದವನ ಮತವೆಂತೊ
ಈ ಧರಾಂತಕೆ ಮೆಚ್ಚರು
ವೇದವನೊಯಿದು ವಿಧಿಗೆ ಬೋಧಿಸಿದ ದು-
ರ್ವಾದಿಗಜೇಂದ್ರಪಂಚಾನನ ಹಯವದ-
ನಾದಿ ನಾರಾಯಣನು || ೪ ||
ತಾನೋರ್ವನೈವರಾಚಾರ್ಯರೆಂಬ ಮತ
ಹೀನವೆಂಬನು ಮತ್ತೊಬ್ಬನ ನುಡಿಯೆಂತೊ
ನಾನಾಯುಕ್ತಿಯ ಮಾಡುವ
ಜನನ ಮರಣ ಹಸಿವು ತೃಷೆ ನಾನಾ ವ್ಯ-
ಸನ ಸರ್ವರಿಗೆ ಸರಿ
ಮಾನವರೆಲ್ಲರು ಮರುಳರು ನಾನೇ ಪ್ರ-
ವೀಣನೆಂದರೆ ನಗರೆ
ಆನೆಂಬಹಂಕೃತಿಯಿಂದ ಜಗದೊಳು
ನೀನೆ ಹೀನನಾಹೆ ಹಯವದನನ ಬಲ್ಲ
ಜಾಣಜನರ ಕೇಳು || ೫ ||
ತಾನೊಬ್ಬನೈದುಮತಜನರೊಡನೆ
ರಣರಂಗದಿ ನಿಂತು ಜಯಿಸುವುದೆಂತಯ್ಯ
ನಾನಾವಚನಂಗಳು
ನಾನಾಯುಕ್ತಿಗಳೊಬ್ಬನ ಮಾತಿನಿಂದಲೆ
ಹೀನಾವಾಗಿ ಪೋಪುವೆ
ಅನಾದಿಯ ವೇದವೆಂಬ ಬಲು ಪ್ರ
ಮಾಣನೊಲ್ಲದವಗೆ ಕಾಣದೆ
ಮೇಲಣ ಪದವಿಯ ನೊರೆವ ಪ್ರ
ವೀಣತೆ ಬಾರದಾಗಿ ಹಯವದನ
ತಾ ನಿಗಮವ ತಂದ || ೬ ||
ಇದ್ದ ದೇವಮಾನವರ ಮಾತಿನೊಳು
ಶ್ರದ್ಧೆಯ ಮಾಡುವರು ಲೋಕದವರು
ಬುದ್ಧಸ್ವರೂಪದಿಂದ
ಆದ್ಯನಾದ ನಾರಾಯಣನೆ ಬಂದಿಲ್ಲಿ
ಪೇಳ್ದ ಸಿದ್ಧಾಂತವನು
ಗದ್ದುಗನ್ನವ ಮಾಡಲುದ್ಭವಿಸಿದ ಕತೆ
ಸಿದ್ಧವಾಗಲಿಲ್ಲವೆ
ಬುದ್ಧಿವಂತರೆಲ್ಲ ಪೇಳ್ದ ಪೇಳ್ದಪರಿ
ಶುದ್ಧ ಕಾರಣ ಶೃತಿಯೆನಿಪ ಹಯವದನ
ನುದ್ಧರಿಸಿದ ವಿದ್ಯೆಯ || ೭ ||
ತನ್ನಮೊಗವ ತಾ ಕಾಣಲರಿಯದಲೆ
ಕನ್ನಡಿಯನು ತಾಹ ಮನ್ನುಜಜಾತಿಯ
ಮೊನ್ನೆಮೊನ್ನೆಗೆ ಸರ್ವಜ್ಞ
ತನ್ನನ್ನೆ ಕೂಡಿರ್ದ ನಾಡಿಯ ತೋರಿಸಿ
ತನುವಿನ ಸ್ಥಿತಿಯ
ಅನ್ಯರ ಕೇಳನೆ ಪಂಚಾಂಗದೊಂದೊಂದು
ದಿನ್ನ ದಿನ್ನ ನೋಡನೆ
ಎನ್ನಾಳ್ವ ಹಯವದನ ಕುದುರೆಮೊಗದಿ ವ್ಯಾ
ಖ್ಯಾನ ಮಾಡುವಗೆ ಕೂಡುವುದು ಕಾಣೊ
ಅನ್ನುಪಮ ಶಕುತಿ || ೮ ||
ಎಲ್ಲೆಲ್ಲಿ ತುಂಬಿದ್ದ ವಿಷ್ಣುವೆ ನೀನವರ
ಬಲ್ಲೆ ಬಲ್ಲೆ ವಿಶ್ವತಶ್ಚಕ್ಷು ನೀನೆ ಗಡ ತೋ
ರಲ್ಲಿ ತೋರದಿರಲಿ ನೀನೆಬಲ್ಲೆ
ಬಲ್ಲೆ ಕೈವಲ್ಯವ ಕೊಡಲು ಬಿಡಲು ನೀನೆ
ಬಲ್ಲೆ ಬಲ್ಲೆ ಶರಣರಿಗೆ
ಒಲಿದು ಖಳರ ಗೆಲ್ಲುವುದು ಬಲ್ಲೆ
ಬಲ್ಲೆ ಮಾಯಾಪತಿಯೆ
ಕಲ್ಲು ಕಂಬದಿ ಮೂಡಿದ ಭಕ್ತವತ್ಸಲ
ಸಲ್ಲುವುದೋ ಹಯವದನ ಎ-
ನ್ನಾಳುವ ಕರುಣಿ ನೀ ಬಲ್ಲೆಬಲ್ಲೆ || ೯ ||
ರುದ್ರರೋದನವೆಂಬ ಹೊನ್ನಗಂಡನ ಕಾಯ
ದರ್ಧವ ಸೆಳೆವ ಹೆಣ್ಣನೊಬ್ಬೊಬ್ಬರ
ಗುದ್ದಿಸಿಕೊಲ್ವ ಮಣ್ಣ ತೊ
ರೆದು ಬಾಳುವ ಮಾನವನಾವ ಚತುರ್ದಶ
ಭುವನದೊಳು
ಹೊದ್ದಿದ್ದ ದುಗ್ಧವಾರಿಧಿ ಮಧ್ಯದಲ್ಲಿ
ಇದ್ದು ತನ್ನುದರದಲಿಪ್ಪ
ಪದ್ಮಿಯ ಸಡೆಗೊಳ್ಳದೆ ಕುವರನ ನಾಭಿ
ಪದ್ಮದಿ ಪೆತ್ತ ಹಯವದನನೊಬ್ಬನೆ
ಗೆದ್ದಸಿದ್ಧಕಾಣಿರೊ || ೧೦ ||
ಮನೆಯ ಮೇಲಣ ಕಿಚ್ಚು ಮನೆಯೊಳಗಿನ ಕರ್ಮ
ಕನುಕೂಲವಾದ ಬಗೆಯ ಪೇಳುವೆ ವಾದಿ
ಕಾನನ ಮರದ ನೆಳಲು
ಜನಪದದೊಳಗಣ ತಾಪ ಕಳೆವುದೆ ಕ-
ಳ್ಳನ ಕಳುಹದೆ ಶೂಲಕ್ಕೆ
ಅನಘರಿಗಪ್ಪಣೆಕೊಡುವ ಅರಸಿನಂತೆ
ಇನಿತು ಕಾರಣರಾಶಿಯ
ಘನತರ ಕಾರ್ಯ ಸರ್ವೇಶ್ವರ ನಮ್ಮ
ವಿನುತ ಹಯವದನನೊಲ್ಲದಿದ್ದರೆ ಮೇ-
ಲಣಪದಕೆಂತೇರುವೆ || ೧೧ ||
ಕರ್ಮವೊಂದೇ ಸಾಕು ಬೊಮ್ಮವೇಕೆಂಬುವ
ನಿಮ್ಮಹಿಯೊಳು ಯಜ್ಞಾದಿ ಸತ್ಕರ್ಮವ
ಸುಮ್ಮನೆ ಮಾಡುವನೆ
ನಿಮ್ಮ ಮಖವ ಮಾಡಬೇಕೆಂಬ ಶ್ರುತಿ ನಮ್ಮ
ಬೊಮ್ಮನ ಪೇಳಿತಾಗಿ
ಅಮ್ಮಮ್ಮ ಸತ್ವದನುಡಿ ತಪ್ಪಿದರೆ ಸಾಧ್ಯ
ಸಮ್ಮತಿಪ್ಪದೇಕೊ
ಹೆಮ್ಮೆಯ ಬಿಡು ವಾದಿ ಹಯವದನನೆಂಬ ಪರ-
ಬೊಮ್ಮನ ನಂಬು ಕೈವಲ್ಯ ಬೇಕಾದರೆ
ಇಮ್ಮನ ಮಾಡಬೇಡ || ೧೨ ||
ಇನ್ನೊಬ್ಬವಾದಿ ಘಟಪಟಾದಿ ತತ್ವ
ವನ್ನು ನುಡಿದನ್ನ ಬಂಧ ಪರಿವುದೆಂತೊ
ಮಣ್ಣು ತಂದು ಶೋಧಿಸಿ
ಎನ್ನಿತಾಗಬೇಕೋ ಅನ್ನಿತವ ಕೂಡಿ
ನಿರ್ಣೈಸಿ ಘಟವ ಮಾಡ್ಡ
ಚೆನ್ನಯ್ಯನೆಂಬ ಕುಂಬಾರನೇತಕೆ ಪೋಗ
ಉನ್ನಂತ ಮುಕುತಿಪಥಕ್ಕೆ
ಎನ್ನೊಡೆಯ ಹಯವದನ ಇಂತಿವರ ಯುಕ್ತಿ
ಶೂನ್ಯ ಮಾತಿಗೆ ಮೆಚ್ಚ ನಾನ್ಯಃಪಂಥವೆಂಬ
ಆಮ್ನಾಯವ ಪೇಳ್ದವ || ೧೩ ||
ತನ್ನ ನಾಲಿಗೆಯನ್ನು ತಾ ಕತ್ತರಿಸುವವ
ಇನ್ನೇನು ನುಡಿವನೊ ಕಡಿವ ಕೊಡಲಿಯನು
ಮೊನ್ನೆಯ ಮುರಿದವನು
ವನ್ನದ ತರುಗಳ ಕಡಿವನೇನೋ ಮೂಢ
ನಿನ್ನ ವೇದಾಂತವನು
ಮನ್ನಿಸದೆ ಪುಸಿಯೆಂಬ ವಾದಿ ಜಗ
ವನ್ನು ಇನ್ಯಾತರಿಂದ
ಬನ್ನಬಡಿಸಿ ಕೆಡಿಸುವೆ ನಿನ್ನರ್ಧವ
ಇನ್ನೆಂತು ಸಾಧಿಪೆ ಹಯವದನನವರೊಳು
ಎಂತು ನಿಂತು ವಾದಿಪೆ || ೧೪ ||
ನೇಹ ನಾನಾಸ್ತಿ ಕಿಂಚನವೆಂಬ ಶ್ರುತಿ ನಮ್ಮ
ಶ್ರೀಹರಿಯಲ್ಲಿಪ್ಪ ಗುಣರೂಪಂಗಳ
ವ್ಯೂಹಕ್ಕೆ ಭೇದವಿಲ್ಲ
ಸಾಹಸ ಸತ್ವ ನಿತ್ಯತ್ವ
ಮಹತ್ವವೆಲ್ಲವು ಸಮವೆಂದು
ಊಹಿಸಿ ಏಕಮೇವಾದ್ವಿತೀಯ ಯೆಂ-
ಬೀ ಹಾಡು ಲಯಕಾಲದಿ
ಈ ಹದಿನಾಲ್ಕು ಲೋಕವಿಲ್ಲೆಂದೈಸೆ
ಮೋಹವ ಬಿಡು ಹಯವದನ ಮಾಡುವ ಜಗ
ದಾಹಾನಿ ಯಾತರಿಂದ || ೧೫ ||
ಅನ್ಯಮೀಶಮೆಂಬ ಶ್ರುತಿಯ ಕೇಳು ದ್ವಾಸು
ಪರ್ಣಸಯುಜಾಸಹವೆಂಬ ವೇದವ ನಂಬೊ
ನಿನ್ನ ಬೆನ್ನ ಬಿಡದಿಹ
ಅನೇಕ ಜನ್ಮದ ಕ್ಲೇಶವ ನೋಡು ಇ
ನ್ನನ್ಯವೆಂದರೆ ಪುಸಿಯೆ
ಅನ್ನಶ್ನನ್ನನ್ಯೋ ಎನಿಸಿ ಮುಕುಂದನು
ಪೂರ್ಣಸುಖನಲ್ಲವೆ
ಮಾನ್ಯ ಹಯವದನ್ನ ತ್ರಿವಿಕ್ರಮ
ನನ್ನು ದಾಸೋಹಂ ಎನ್ನೋ ಶಾಸ್ತ್ರೋಕ್ತಿ
ಮನ್ನಿಸಿ ಬಾಳೊ ಜೀವ || ೧೬ ||
ಅರಸಿನ ಆಳೆಂದು ಬಾಳುವ ಮನುಜರ
ಸ್ಥಿರತರ ಭಾಗ್ಯವ ನೀವೆಲ್ಲ ನೋಡಿರೊ
ಅರಸು ತಾನೆಂಬವಗೆ
ತರತರದಲಿ ಬಾಹ ಕ್ಲೇಶರಾಶಿಗಳ
ಸೆರೆಮನೆಯಲ್ಲಿಕ್ಕೆಂಬ
ಹರಿ ತಾನೆಯೆನ್ನಲು ಪೌಂಡ್ರಕ ದನುಜನ
ಶಿರವ ಚೆಂಡಾಡಿದನು
ನರನಹಂಬ್ರಹ್ಮ ಎನೆ ಕೊಲ್ಲದುಳಿಪನೆ
ಸರ್ವೇಶ್ವರ ವೇದವ ತಂದ ಹಯವದನ
ಇಂತೆಂಬರ ಕೊಲ್ಲೆಂಬ || ೧೭ ||
ಲೋಕಮಾತೆಯೆಂದು ಲಕುಮಿಯ ನಾಮ ಅಂ-
ಬಿಕದೇವಿಯೆಂದು ಗೌರಿಯ ಪೆಸರು ವಿ-
ವೇಕಿಗಳೆಲ್ಲ ಕೇಳಿ
ಈ ಕುಮತಿಗಳಚ್ಯುತೋಹಂ ಶಿವೋಹಂ ಎಂದೇಕೆ
ಪೇಳುವರಯ್ಯ
ಬೇಕಾಯಿತೇನೋ ಮಾತೃಗಾಮಿಯೆಂಬ
ಈ ಕಷ್ಟದ ಬೈಗಳು
ಶ್ರೀಕಾಂತ ಹಯವದನ ಯೋನಃಪಿತಾಯೆಂಬ
ಸೂಕ್ತಕ್ಕೆ ದೇವತೆಯಾದ ಕಾರಣ
ಇವನ ಕುವರರು ನಾವು || ೧೮ ||
ಅದ್ವೈತವಾದಿ ನಿನ್ನ ವಿದ್ವನ್ಮತದಲ್ಲಿ
ಬುದ್ಧದೇವಗೆ ಪೆಸರಿದ್ದ ಕಾರಣದಿಂದ
ಅದ್ವಯವಾದಿಯೆಂದು
ರಾದ್ಧಾಂತದ ಗುರು ಶುದ್ಧೋದನ ಮುನಿ ಪೇ
ಳಿದ ಬುದ್ಧ ಮತವ
ಶುದ್ಧಾಗಿ ಶೋಧಿಸಿ ಸಿದ್ಧಾಂತ ಕತೆಗಳ
ಬದ್ಧವಾದುದಿಲ್ಲವೆ
ಬುದ್ಧಿವಂತರು ಕೂಡಿ ದ್ವೈತಮತವನ್ನೆ
ಹೊದ್ದಿ ಬದುಕಿ ಸಿರಿಹಯವದನನ ಪಾದ
ಪದ್ಮವನ್ನೆ ಭಜಿಸಿರೊ || ೧೯ ||
ವ್ಯೋಮಕೇಶನೊಬ್ಬ ವ್ಯೋಮಪಾದನೊಬ್ಬ
ಭ್ರಾಮಕ ವರವೀವನೊಬ್ಬ ಕೊಲ್ಲುವನೊಬ್ಬ
ಕ್ಷಾಮದಕ್ಷಾದಿಗಳ
ಸೀಮೆಯರಿಯೆ ಕೊಂದವನೊಬ್ಬ ರಕ್ಷಿಸಿ-
ದ ಮಹಾಪುರುಷನೊಬ್ಬ
ರಾಮಾದ್ಯವತಾರದಿಂದ ಮುರಿದ ಬಿಲ್ಲು
ಆ ಮಹೇಶನದಲ್ಲವೆ
ಶ್ರೀಮುಡಿಯಲಿ ವಿಷ್ಣುಪದಿಯೆಂಬ ನದಿ ಪೊತ್ತ
ಆ ಮಹಾದೇವ ಹಯವದನನೆಂತಾಹ
ನೀ ಮಾನವನೆಂತಾಹೆಯೊ || ೨೦ ||
ಸ್ತುಹಿ ಶ್ರುತಂ ಗರ್ತಸದಾ ಯುವಾನೆಂದಾ
ಹರನ ಕೂಡೆ ವೇದ ಪೇಳಿತಾಗಿ ಆ
ಮಹಾಪುರುಷನೊಬ್ಬ
ಮಹಿಮೆಯುಳ್ಳ ನರಸಿಂಹನ ತನ್ನ ಹೃದಯ
ಗುಹೆಯೊಳಗಿಪ್ಪನ
ಸಿಂಹನಂತೆ ಭಯಂಕರವೀವನ ಸ್ತುತಿ-
ಗಾ ಹಂತ ಹರಿಯೆ ಬೇಕು
ಶ್ರೀಹಯವದನನೆ ಇವನೆಂದು ಸಿದ್ಧ ನ-
ಮ್ಮ ಹಿರಿಯರ ಮತವನು ಜರಿವೆಯೆಂತೊ
ಸೋಹಂ ಎಂಬ ಮನುಜ || ೨೧ ||
ನೀ ನಾಯಿ ಎಂದರೆ ಕೋಪವೇಕೋ ಮನುಜ
ಹೀನರೈಕ್ಯವ ಪೇಳಲದು ಬೈಗಳಾದರೆ
ಮನೆಮನೆಗಳಿಗೆ ಪೋಗಿ
ದೀನತನವ ತೋರಿ ತನುವ ಪೊರೆಯುವ
ನಾನಾ ಜೀವರೈಕ್ಯವ
ಶ್ರೀನಾಥಗೆ ಪೇಳ್ವುದೇಸು ಬೈಗಳೊ ಮೂಢ
ಗುಣಶೂನ್ಯನೆಂಬುವುದು
ಮಾನವರಿಗೆ ಬೈಗಳಾದರೆ ಹಯವ
ದನಗೆ ಗುಣವಿಲ್ಲವೆಂಬೋದು ಬೈಗಳ
ಲ್ಲೇನೆಲೊ ಬಲುಮೂಢ || ೨೨ ||
ನರರೊಳು ಪರನಿಂದೆ ಸಲ್ಲದು ಸರ್ವೇ
ಶ್ವರನ ನಿಂದಿಸುವುದು ಧರ್ಮವೇನೋ ಸಜ್ಜ
ನರೊಡನಾಡೆಂದೆಂದು
ದುರುಳರ ಕೂಡಣಾಟವ ಬಿಡು ಹರಿಯ
ಚರಣಸೇವೆಯ ಮಾಡು
ದುರಿತ ರಾಶಿಗಳನೀಡ್ಯಾಡು ಭಕ್ತಿಯ ಬೇಡು
ಪರಮಪುರುಷನ ನೋಡು
ಸಿರಿಹಯವದನನ ಕರುಣದಿಂದಲಿ ನಿನಗೆ
ಸಿರಿಸೇರುತಿಪ್ಪುದು ಪರಗತಿಯಪ್ಪುದು
ನಿರುತ ಸುಖವು ತಪ್ಪದು || ೨೩ ||
ಶೋಧಿಸೆ ಬಂದ ಭೃಗುವನರಿಯದೆ ವೃಥಾ
ಕ್ರೋಧವ ಮಾಡಿದಕಾರಣ ವಿಧಿ ರುದ್ರ
ರಾಧಿಕ್ಯರಾದುದಿಲ್ಲ
ವೇದ ಈಶ ಸರ್ವಜ್ಞ ಎಂದು ಪೇಳ್ದ
ಆದಿವಸ್ತುವ ಕಾಣೈಯ
ಬೋಧವಿಲ್ಲದೆ ಮಾನವರಂತೆ ಇರುತಿಪ್ಪ
ಆ ದೇವರೆಂತಪ್ಪರೈ
ಶ್ರೀಧವನೆದೆಯನೊದ್ದಾಗಲೆ ಸರ್ವ
ವೇದಿ ಹಯವದನಾದಕಾರಣ ಕೋಪಿ
ಸದೆ ಹೆದ್ದೈವನಾದ || ೨೪ ||
ಆವನ್ನ ರೋಮಕೂಪದೊಳಗೀ ಜೀವ
ರಾವಾಸವಾದ ಬ್ರಹ್ಮಾಂಡ ರಾಸಿಗಳು
ತೀವಿಪ್ಪುದ್ಯತ್ರಪ್ರಿಯಾ
ಹಿ ವಿಷ್ಣು ಪರಮಾಣ್ವಾದ್ಯಯೆಂದು ಪೇಳ್ದ
ಶ್ರೀ ವೇದವ್ಯಾಸ ತಾನೇ
ಈ ವಿಷ್ಣು ರೋಮಕ್ಕೆಣೆಯಿಲ್ಲವೆನ್ನೆ ಈ
ದೇವಗಿನ್ನಾವನೆಣೆ
ಶ್ರೀ ವಾಸುದೇವ ಹಯವದನ ಸರ್ವೇಶ
ದೇವರೆಲ್ಲ ಇವನ ದಾಸದಾಸರಿನ್ನು
ವಿವಾದವ್ಯಾಕೊ ಜೀವ || ೨೫ ||
ಸ್ವರ್ಗಾದಿ ಸತ್ಯಂತವಾದ ಮೇಲಣಲೋಕ
ಕಗ್ರಣಿಗಳಾದ ದೇವರ ನೋಡು ಮಧ್ಯದೊ
ಳೊಗ್ಗಿಹ ಭೂಲೋಕದಿ
ಮುಗ್ಗಿಹ ಮನುಷ್ಯರಾಶಿಯ ನೋಡು ಕೆ
ಳಗ್ಗಣ ಪಾತಾಳದಿ
ದುರ್ಗರ್ವಿ ದೈತ್ಯರ ನೋಡು ತ್ರಿವಿಧಜೀವ
ವರ್ಗಪದಾಗಮಕ್ಕೆ
ಸ್ವರ್ಗವೆ ಸಾಕ್ಷಿ ಎಲ್ಲದರಿಂದ ಮೇಲಣ
ದುರ್ಗಾಧಿಪತಿ ಹಯವದನವನೊಬ್ಬನೆ ಸ
ರ್ವಾಗ್ರೇಸರ ಕಾಣಿರೊ || ೨೬ ||
ಮೂರ್ತಿಯ ನೋಡಲು ವಿಶ್ವತಶ್ಚಕ್ಷು ಎಂ
ಬುಕ್ತಿಯರ್ಥವಾದ ಶ್ರೀಹರಿಯ ಪಿರಿಯ
ವ್ಯಾಪ್ತಿಯ ನೋಡಲಾಗಿ
ತತ್ವವೆಷ್ಟೆಷ್ಟು ಅಷ್ಟಷ್ಟರಲ್ಲಿ ವೇ
ದೋಕ್ತಿಯಿಂದಲಿ ಸರ್ವ
ವ್ಯಾಪ್ತಿ ನಾರಾಯಣಸ್ಥಿತ ಎಂಬ ಶ್ರುತಿಗೀ
ನೀತಿಗೆ ಪ್ರತಿಯಿಲ್ಲ
ಖ್ಯಾತಗುಣಗಳಿಂದ ಅಪ್ರತಿಮಲ್ಲ ಶ್ರೀ
ನಾಥ ಹಯವದನ ಮಹಿಮನಂತಗುಣ
ಯಾತಕಿಂತು ವಾದಿಪೆ || ೨೭ ||
ಆರುಶಾಸ್ತ್ರ ಬಲ್ಲವರೆಲ್ಲ ಕೇಳಿರೊ
ನಾರಾಯಣನ ನಾರಿಯರಾದ ಧಾರುಣಿ
ಸಿರಿದೇವಿಯರಿವನ
ದೂರಿದಾಗಲೆ ನಿನಗೆ ದೂರವಾಗಲು ಕಾಲ
ನೂರಲು ನೆಲವ ಕಾಣೆ
ಬಾರದು ಬಾಯಿಗೆ ಕೂಳು ಇದೆಲ್ಲವು
ಆರೇನೆಂಬರು ಕೇಳಯ್ಯಾ
ಊರೊಳಗಿನ ಪತಿವ್ರತೆಯರಿರವ ಕಂಡು
ಸಾರಹೃದಯರೆಲ್ಲ ಹಯವದನನ ಪಾದ
ಸರೋಜವನೆ ಸಾರಿರೊ || ೨೮ ||
ನರಕಕೂಪದೊಳೇಳುತ ಮುಳುಗುತ
ಹರಿದ್ವೇಷಿಗಳೆಲ್ಲ ಮಲಮೂತ್ರಗಳ ತಿಂದು
ಗಾರಹರೆಂದರಿಯ
ಪುರಾಣ ಭಾರತ ರಾಮಯಣಂಗಳ
ಪಿರಿಯರಿಂದಲಿ ಕೇಳಿ
ಓರಂತೆ ಶಾಸ್ತ್ರಾರ್ಥಗಳನ್ನೆಲ್ಲ ವಿ
ಚಾರಿಸಿ ತಿಳಿದುಕೊಳ್ಳಿ
ನಾರಾಯಣನೆಂದು ಚೀರಿದ ಅಜಾಮಿಳ
ಸೇರನೆ ಹಯವದನನ್ನ-ರಮನೆಯ
ಸಾರಿ ತಾ ಬದುಕಿರನೆ || ೨೯ ||
ಆ ದೇವ ಈ ದೇವನೆಂದ್ಯಾಕೆ ಕಲಹ ನಾ
ನಾ ದೇಶದವರಿಗೆ ಬೇಡಿದಿಷ್ಟವನೀವ
ಸಾಧಿಸಿದ ಧನದಿ
ಈಧರೆಯೊಳಗಿರ್ದ ರಾಯಗೆ ಕೋಟಿ ದ್ರ
ವ್ಯಾದಿ ಕಡನ ಕೊಟ್ಟ
ವಾದವ ಮುರಿದ ವೆಂಕಟಗಿರಿರಾಯನಂ
ಥಾ ದೇವನನ್ನು ತೋರೋ
ಶ್ರೀದೇವಿಯುರದ ತಿಮ್ಮಯ್ಯರಾಯಗೆ ಪ್ರತ್ಯ
ಕ್ಷದಿ ಎಣೆಗಾಣೆ ಹಯವದನ್ನನ
ಪಾದುಪದುಮದಾಣೆ || ೩೦ ||
ಆವನ ನಾಭಿ ಕಮಲದಲ್ಲಿ ಪುಟ್ಟಿದ
ದೇವ ಪಿತಾಮಹಾ ಎನಿಸಿಕೊಂಬುವನಾಗಿ
ಜೀವರಾಶಿಗೆ ಎಲ್ಲ
ಈ ವಿಷ್ಣುವಿಗೆ ಆ ದಿವಿಜರೇನಾಹರೆಂದು
ಆವ ಸರ್ವೇಶನೆಂದು
ನೀವಿಟ್ಟ ಪಿಂಡವು ಆರ ಪಾಲಾಹುದೆಂದು
ಭಾವಜ್ಞರೆಲ್ಲ ಕೇಳಿ
ದೇವ ಹಯವದನನೊಲ್ಲದ ವಾದಿಗೆ
ತಾವುದಿಸಿ ತಾಯಿಲ್ಲ ಎಂಬಗಾದೆ ಬಹುದು
ಸೇವಿಸವನ ಜೀವ || ೩೧ ||
ಆದಿಕಾಲದಲ್ಲಿ ಆಲದೆಲೆಯ ಮೇಲೆ
ಶ್ರೀದೇವಿಯರೊಡನೆ ಮಲಗಿದ್ದಾಗ
ಆ ದೇವರೆಲ್ಲಿಹರೊ
ಮಾಧವನಗರಿಗೆ ಮೊದಲಾದ ವಿಧಿ
ಪೋದಾಗ ಪೋದರೆಲ್ಲ
ಆಧಾರವಾದ ತತ್ವಂಗಳೆಲ್ಲವು ಅ
ಳಿದಾಗ ಅಳಿದರೆಲ್ಲ
ವೇದ ಏಕೋ ನಾರಾಯಣಾ-ಸೀದೆಂದು ಪೇ
ಳಿದ ಕಾರಣ ಹಯವದನನೆ ಜಗದೊ
ಳಧಿಕ ದೈವವಾದ || ೩೨ ||
ಹೊಟ್ಟೆಯೆಂಬ ಪೊನ್ನ ತೊಟ್ಟಿಲೊಳಗಿಟ್ಟು
ವಿಠ್ಠಲ ಜೀವರ ನಿದ್ರೆಗೊಳಿಸುವನು
ಸೃಷ್ಟಿಕಾಲ ಬಂದಾಗ
ಹುಟ್ಟಿಸಿ ಬಹುರೂಪದಾಟವನಾಡಿಸಿ
ಇಷ್ಟಂಗಳ ಕೊಡುವ
ದುಷ್ಟಮಕ್ಕಳ ಮಂಡೆ ಹೆಟ್ಟುವ ಕೆಲವರ
ಕಟ್ಟಲೆಯನು ಬಿಡಿಸ
ಶಿಷ್ಟರೆತ್ತಿಕೊಂಬ ಹಯವದನನ ಪಾದ
ಬಿಟ್ಟಿಯ ಕಾಂಬಂತೆ ಕಾಣದೆ ಮನ
ಮುಟ್ಟಿ ಭಜಿಸೊ ಜೀವ || ೩೩ ||
ಮಕ್ಕಳ ತಪ್ಪುಗಳ ಲೆಕ್ಕಿಸದೆ ತಾಯಿ
ಮಿಕ್ಕ ಖಳರ ತಪ್ಪು ಉಕ್ಕು ತಗ್ಗಿಸುವಳು
ಪಕ್ಷಿವಾಹನ-ನೊಮ್ಮೊಮ್ಮೆ
ಸೊಕ್ಕಿ ನಡೆದರೆ ಭಕ್ಕುತರ ಕಾವ
ನಕ್ಕು ಕಾರುಣ್ಯದಲಿ
ಉಕ್ಕಿದ ರಕ್ಕಸರ ಶಿಕ್ಷಿಸದೆ ಬಿಡ
ಕ್ಷಿಪಾಮ್ಯಜಸ್ರವೆಂಬ
ಅಕ್ಕೊ ಪದವ ಮತ್ಕರ್ಮ ಕೃನ್ಮತ್ ಪರಮೆಂಬ
ಉಕ್ತಿಯನೇನೆಂಬೆ ಹಯವದನನ ಭಜಿಸಿ
ಮುಕ್ತಿ ಬೇಕೆಂಬುವರು || ೩೪ ||
ಎಂಬತ್ತುನಾಲಕು ಲಕ್ಷ ಯೋನಿಗಳಲ್ಲಿ
ತುಂಬಿರ್ದ ಜೀವರಿಗೀರೂಪಂಗಳೆ
ಇಂಬಾದ ಬಹರೂಪ
ಸಂಭ್ರಮದೆ ನಿಜರೂಪದಿಂದೆಸೆವ
ಕಂಬು ಚಕ್ರಾದಿಗಳ
ಎಂಬೊ ಮಾತಿಗೆ ಸಂದೇಹ ಸಲ್ಲ ಮೇ
ಲುಂಬ ಸುಖವನೀವ
ಶಂಭು ಮುಖ್ಯ ಗುರುಗಳಿಂದ ಕೇಳಿರೊ ನಾ
ನೆಂಬಹಂಕೃತಿಯಿಂದ ಹಯವದನನ ಪಾ
ದಾಂಬುಜಕೆಂತೇರುವ || ೩೫ ||
ಒಂದೆ ಅಂಬುಧಿ ಒಂದೆ ಕಡಗೋಲು ನೇಣೊಂದೆ
ಒಂದೆ ಸಾಧನ ಸರ್ವ ಸಾಧನಂಗಳು ಸರಿ
ಮುಂದೆ ಪರಿವ ದೈತ್ಯರ
ವೃಂದಕ್ಕೆ ಸುಧೆಯಿಲ್ಲ ವೃಂದಾರಕರಿಗುಂಟು
ಎಂದು ನಿರ್ಣೈಸಿತಾಗಿ
ಮುಂದಣ ಮುಕುತಿ ಯೋಗ್ಯರಿಗುಂಟು ಇತರರಿ
ಗೆಂದೆಂದಿಗಾಗದಯ್ಯ
ತಂದೆ ಹಯವದನನೊಲ್ಲದ ವಾದಿಗೆ
ಸಂದೇಹ ಸಲ್ಲ ಬೂದಿಯ ಹೋಮದಂದದಿ
ಎಂದೆಂದಿಗಹುದಯ್ಯ || ೩೬ ||
ಕಳ್ಳಭಕ್ತರಿಗೆ ಸಲ್ಲದು ಶುಭಫಲ
ಎಲ್ಲ ಬೀಜಕೆ ಸಲ್ಲದು ಸಲ್ಲಿಕೆ
ಎಲ್ಲಿ ಯೋಗ್ಯತೆಯುಂಟೊ
ಅಲ್ಲಿಯೆ ಫಲ ಅದಿಲ್ಲದವರಿಗಿಲ್ಲ
ಬಲ್ಲಬುಧರು ಕೇಳಿರೊ
ಎಲ್ಲ ಸಾಧನಗಳೊಲ್ಲದವಗೆ ಈ
ಫಲ್ಲ ದುರ್ಲಭ ಕಾಣಿರೊ
ಬಲ್ಲಿದ ಹಯವದನ-ನೊಲ್ಲಿದಾಗಲೆ ಅ
ಹಲ್ಯೆಯಿದ್ದ ಶಿಲೆ ಹೆಣ್ಣಾದವೋಲು ಇಂ
ತುಳಿದದ್ದು ಹೆಣ್ಣಾಯಿತೆ || ೩೭ ||
ಎನಗೆ ನಿನ್ನಲಿ ಭಕ್ತಿ ಇರಲಿ ಇಲ್ಲದಿರಲಿ
ಜನ ಹರಿ ಭಕ್ತನೆಂದೆನ್ನ ಕರೆಯಲಾಗಿ
ಮನ ಪಾಪಕೆರಗದಂತೆ
ಅನುದಿನ ನೀನೆನ್ನ ಕಾಯಬೇಕಾಯಿತು
ಅನಿಮಿತ್ತ ಸುಜನಬಂಧು
ಕನರಿಸಿ ಯಮಭಟರು ಮುಂದೆ ಕೊಂದರೆ ನಿನ್ನ
ಘನತೆಗೆ ಸಾಲದಯ್ಯ
ತನ್ನವರ ಹಯವದನ-ನನ್ಯರಿಗೊಪ್ಪಿಸಿದ
ನೆನ್ನುವ ದುರ್ವಾರ್ತೆ ತಪ್ಪಿಸಿಕೊ ತಂದೆ
ಮುನ್ನಿಜನ ವಂದ್ಯಪಾದ || ೩೮ ||
ನಿನ್ನನೆ ನೋಡುವ ನಿನ್ನನೆ ಪಾಡುವ
ನಿನ್ನನೆ ಬೇಡುವ ನಿನ್ನ ಕೊಂಡಾಡುವ
ಜನರೊಳೆಂತಿಪ್ಪುದೈ
ಕಣ್ಣು ಕುಕ್ಕಿ ಕಿವಿಯೊಳ್ ಸುಣ್ಣಹೊಯ್ದು ಶಿರ
ವನ್ನು ಕತ್ತರಿಸುವ
ಬನ್ನಬಡಿಸಿ ಗಿಲಿಕಿಯ ಮೆಟ್ಟಿಸುವ
ಘನ್ನ ನರಕದ ಬಾಧೆ
ನಿನ್ನ ಮಹಿಮೆಗಿದು ಸಾಕೆ ದೇವರದೇವ
ಎನ್ನಾಳ್ದ ಹಯವದನ್ನ ವಿಚಾರಿಸೊ
ಅನ್ನಂತ ಗುಣಪೂರ್ಣ || ೩೯ ||
ನಾ ನಿನ್ನ ಮರೆತರೂ ನೀನೆನ್ನ ಮರೆತರೆ
ಹಾನಿ ನಿನಗೆ ನಿನ್ನ ಭಕ್ತವತ್ಸಲತೆಗೆ
ಹೀನತೆ ಬಂದಿತಾಗಿ
ಆ “ನ ಋತೇ ತ್ವತ್ ಕ್ರಿಯತೇ ಕಿಂಚನಾರೇ”ಯೆಂ
ಬಾಮ್ನಾಯ ಏನೆಂದಿತಾಗಿ
ನೀನುದಾಸೀನನಾಗೆ ಖಳರ ಸೇನೆ ಸ
ಜ್ಜನರ ಕೊಂದಿತಾಗಿ
ಶ್ರೀನಾಥ ಹಯವದನ ಶಿಶುಗಳ ತಪ್ಪನು
ಜನನಿ ಜರೆದರೆ ಜಗವೆಲ್ಲ ನಗುವುದೊ
ಜಾಣರ ಜಾಣ ನೀನು || ೪೦ ||
|| ಶ್ರೀಕೃಷ್ಣಾರ್ಪಣಮಸ್ತು ||
| guMDakriya |
baride saMsAradi jaride marede
hari ninna anusarisutirade
kari dEvadEvayenne
karuNi kaNterede taride makariya
muKava nI bEsarade
varadESa pAhiyene ajamiLana
porede muride yamaBaTara
taride pASagaLa karedenna hayavadana
orede tatvagaLa merede mahimeya
ninagidoMdaride || 1 ||
dEhavillade bEre jIvavilleMbane
mOhada ninna heMDati sAyalEtake
hAhA eMdaLuve vAdi
nEhapAturavAda pUrvakAyakkEn-
hAni baMditu pELA
bAhugaLiMdadanappi ramisabEku
nI hELida paMthake
SrIhayavadana iMtalladiddare naguva
I hadanariyadavana mata durmata
sAhasa sAku sAku || 2 ||
ellaviddaru SvAsavoMdillaveMbane
ballida DoMbana sati pavanava kaTTi
nallivAgaMbaradi
kuLLirda dAravu kaDida mEle tA
nilvaLu calisadaMte
tollagidasu mattadellEdeMba yukti
salladalla ninage
ballavadhUtaru prANamArgava taDedu
celvahayavadanana meccisi SailAgradi
taleyUri tapisare || 3 ||
syAdeMba vAdi nAveMba pramEyava
sAdhisabEkAgi vAdipeyeMto
bAdhipa mAtanaj~jA
bOdhanigraha tAne bArade biDadu
modalige sOteyalla
Adiyanariyadavana mataveMto
I dharAMtake meccaru
vEdavanoyidu vidhige bOdhisida du-
rvAdigajEMdrapaMcAnana hayavada-
nAdi nArAyaNanu || 4 ||
tAnOrvanaivarAcAryareMba mata
hInaveMbanu mattobbana nuDiyeMto
nAnAyuktiya mADuva
janana maraNa hasivu tRuShe nAnA vya-
sana sarvarige sari
mAnavarellaru maruLaru nAnE pra-
vINaneMdare nagare
AneMbahaMkRutiyiMda jagadoLu
nIne hInanAhe hayavadanana balla
jANajanara kELu || 5 ||
tAnobbanaidumatajanaroDane
raNaraMgadi niMtu jayisuvudeMtayya
nAnAvacanaMgaLu
nAnAyuktigaLobbana mAtiniMdale
hInAvAgi pOpuve
anAdiya vEdaveMba balu pra
mANanolladavage kANade
mElaNa padaviya noreva pra
vINate bAradAgi hayavadana
tA nigamava taMda || 6 ||
idda dEvamAnavara mAtinoLu
Sraddheya mADuvaru lOkadavaru
buddhasvarUpadiMda
AdyanAda nArAyaNane baMdilli
pELda siddhAMtavanu
gaddugannava mADaludBavisida kate
siddhavAgalillave
buddhivaMtarella pELda pELdapari
Suddha kAraNa SRutiyenipa hayavadana
nuddharisida vidyeya || 7 ||
tannamogava tA kANalariyadale
kannaDiyanu tAha mannujajAtiya
monnemonnege sarvaj~ja
tannanne kUDirda nADiya tOrisi
tanuvina sthitiya
anyara kELane paMcAMgadoMdoMdu
dinna dinna nODane
ennALva hayavadana kuduremogadi vyA
KyAna mADuvage kUDuvudu kANo
annupama Sakuti || 8 ||
ellelli tuMbidda viShNuve nInavara
balle balle viSvataScakShu nIne gaDa tO
ralli tOradirali nIneballe
balle kaivalyava koDalu biDalu nIne
balle balle SaraNarige
olidu KaLara gelluvudu balle
balle mAyApatiye
kallu kaMbadi mUDida Baktavatsala
salluvudO hayavadana e-
nnALuva karuNi nI balleballe || 9 ||
rudrarOdanaveMba honnagaMDana kAya
dardhava seLeva heNNanobbobbara
guddisikolva maNNa to
redu bALuva mAnavanAva caturdasha
BuvanadoLu
hoddidda dugdhavAridhi madhyadalli
iddu tannudaradalippa
padmiya saDegoLLade kuvarana nABi
padmadi petta hayavadananobbane
geddasiddhakANiro || 10 ||
maneya mElaNa kiccu maneyoLagina karma
kanukUlavAda bageya pELuve vAdi
kAnana marada neLalu
janapadadoLagaNa tApa kaLevude ka-
LLana kaLuhade SUlakke
anaGarigappaNekoDuva arasinaMte
initu kAraNarASiya
Ganatara kArya sarvESvara namma
vinuta hayavadananolladiddare mE-
laNapadakeMtEruve || 11 ||
karmavoMdE sAku bommavEkeMbuva
nimmahiyoLu yaj~jAdi satkarmava
summane mADuvane
nimma maKava mADabEkeMba Sruti namma
bommana pELitAgi
ammamma satvadanuDi tappidare sAdhya
sammatippadEko
hemmeya biDu vAdi hayavadananeMba para-
bommana naMbu kaivalya bEkAdare
immana mADabEDa || 12 ||
innobbavAdi GaTapaTAdi tatva
vannu nuDidanna baMdha parivudeMto
maNNu taMdu SOdhisi
ennitAgabEkO annitava kUDi
nirNaisi GaTava mADDa
cennayyaneMba kuMbAranEtake pOga
unnaMta mukutipathakke
ennoDeya hayavadana iMtivara yukti
SUnya mAtige mecca nAnyaHpaMthaveMba
AmnAyava pELdava || 13 ||
tanna nAligeyannu tA kattarisuvava
innEnu nuDivano kaDiva koDaliyanu
monneya muridavanu
vannada tarugaLa kaDivanEnO mUDha
ninna vEdAMtavanu
mannisade pusiyeMba vAdi jaga
vannu inyAtariMda
bannabaDisi keDisuve ninnardhava
inneMtu sAdhipe hayavadananavaroLu
eMtu niMtu vAdipe || 14 ||
nEha nAnAsti kiMcanaveMba Sruti namma
SrIhariyallippa guNarUpaMgaLa
vyUhakke BEdavilla
sAhasa satva nityatva
mahatvavellavu samaveMdu
Uhisi EkamEvAdvitIya yeM-
bI hADu layakAladi
I hadinAlku lOkavilleMdaise
mOhava biDu hayavadana mADuva jaga
dAhAni yAtariMda || 15 ||
anyamISameMba Srutiya kELu dvAsu
parNasayujAsahaveMba vEdava naMbo
ninna benna biDadiha
anEka janmada klESava nODu i
nnanyaveMdare pusiye
annaSnannanyO enisi mukuMdanu
pUrNasuKanallave
mAnya hayavadanna trivikrama
nannu dAsOhaM ennO SAstrOkti
mannisi bALo jIva || 16 ||
arasina ALeMdu bALuva manujara
sthiratara BAgyava nIvella nODiro
arasu tAneMbavage
tarataradali bAha klESarASigaLa
seremaneyallikkeMba
hari tAneyennalu pauMDraka danujana
Sirava ceMDADidanu
naranahaMbrahma ene kolladuLipane
sarvESvara vEdava taMda hayavadana
iMteMbara kolleMba || 17 ||
lOkamAteyeMdu lakumiya nAma aM-
bikadEviyeMdu gauriya pesaru vi-
vEkigaLella kELi
I kumatigaLacyutOhaM SivOhaM eMdEke
pELuvarayya
bEkAyitEnO mAtRugAmiyeMba
I kaShTada baigaLu
SrIkAMta hayavadana yOnaHpitAyeMba
sUktakke dEvateyAda kAraNa
ivana kuvararu nAvu || 18 ||
advaitavAdi ninna vidvanmatadalli
buddhadEvage pesaridda kAraNadiMda
advayavAdiyeMdu
rAddhAMtada guru SuddhOdana muni pE
Lida buddha matava
SuddhAgi SOdhisi siddhAMta kategaLa
baddhavAdudillave
buddhivaMtaru kUDi dvaitamatavanne
hoddi baduki sirihayavadanana pAda
padmavanne Bajisiro || 19 ||
vyOmakESanobba vyOmapAdanobba
BrAmaka varavIvanobba kolluvanobba
kShAmadakShAdigaLa
sImeyariye koMdavanobba rakShisi-
da mahApuruShanobba
rAmAdyavatAradiMda murida billu
A mahESanadallave
SrImuDiyali viShNupadiyeMba nadi potta
A mahAdEva hayavadananeMtAha
nI mAnavaneMtAheyo || 20 ||
stuhi SrutaM gartasadA yuvAneMdA
harana kUDe vEda pELitAgi A
mahApuruShanobba
mahimeyuLLa narasiMhana tanna hRudaya
guheyoLagippana
siMhanaMte BayaMkaravIvana stuti-
gA haMta hariye bEku
SrIhayavadanane ivaneMdu siddha na-
mma hiriyara matavanu jariveyeMto
sOhaM eMba manuja || 21 ||
nI nAyi eMdare kOpavEkO manuja
hInaraikyava pELaladu baigaLAdare
manemanegaLige pOgi
dInatanava tOri tanuva poreyuva
nAnA jIvaraikyava
SrInAthage pELvudEsu baigaLo mUDha
guNaSUnyaneMbuvudu
mAnavarige baigaLAdare hayava
danage guNavillaveMbOdu baigaLa
llEnelo balumUDha || 22 ||
nararoLu paraniMde salladu sarvE
Svarana niMdisuvudu dharmavEnO sajja
naroDanADeMdeMdu
duruLara kUDaNATava biDu hariya
caraNasEveya mADu
durita rASigaLanIDyADu Baktiya bEDu
paramapuruShana nODu
sirihayavadanana karuNadiMdali ninage
sirisErutippudu paragatiyappudu
niruta suKavu tappadu || 23 ||
SOdhise baMda BRuguvanariyade vRuthA
krOdhava mADidakAraNa vidhi rudra
rAdhikyarAdudilla
vEda ISa sarvaj~ja eMdu pELda
Adivastuva kANaiya
bOdhavillade mAnavaraMte irutippa
A dEvareMtapparai
SrIdhavanedeyanoddAgale sarva
vEdi hayavadanAdakAraNa kOpi
sade heddaivanAda || 24 ||
Avanna rOmakUpadoLagI jIva
rAvAsavAda brahmAMDa rAsigaLu
tIvippudyatrapriyA
hi viShNu paramANvAdyayeMdu pELda
SrI vEdavyAsa tAnE
I viShNu rOmakkeNeyillavenne I
dEvaginnAvaneNe
SrI vAsudEva hayavadana sarvESa
dEvarella ivana dAsadAsarinnu
vivAdavyAko jIva || 25 ||
svargAdi satyaMtavAda mElaNalOka
kagraNigaLAda dEvara nODu madhyado
Loggiha BUlOkadi
muggiha manuShyarASiya nODu ke
LaggaNa pAtALadi
durgarvi daityara nODu trividhajIva
vargapadAgamakke
svargave sAkShi elladariMda mElaNa
durgAdhipati hayavadanavanobbane sa
rvAgrEsara kANiro || 26 ||
mUrtiya nODalu viSvataScakShu eM
buktiyarthavAda SrIhariya piriya
vyAptiya nODalAgi
tatvaveShTeShTu aShTaShTaralli vE
dOktiyiMdali sarva
vyApti nArAyaNasthita eMba SrutigI
nItige pratiyilla
KyAtaguNagaLiMda apratimalla SrI
nAtha hayavadana mahimanaMtaguNa
yAtakiMtu vAdipe || 27 ||
AruSAstra ballavarella kELiro
nArAyaNana nAriyarAda dhAruNi
siridEviyarivana
dUridAgale ninage dUravAgalu kAla
nUralu nelava kANe
bAradu bAyige kULu idellavu
ArEneMbaru kELayyA
UroLagina pativrateyarirava kaMDu
sArahRudayarella hayavadanana pAda
sarOjavane sAriro || 28 ||
narakakUpadoLELuta muLuguta
haridvEShigaLella malamUtragaLa tiMdu
gArahareMdariya
purANa BArata rAmayaNaMgaLa
piriyariMdali kELi
OraMte SAstrArthagaLannella vi
cArisi tiLidukoLLi
nArAyaNaneMdu cIrida ajAmiLa
sErane hayavadananna-ramaneya
sAri tA badukirane || 29 ||
A dEva I dEvaneMdyAke kalaha nA
nA dESadavarige bEDidiShTavanIva
sAdhisida dhanadi
IdhareyoLagirda rAyage kOTi dra
vyAdi kaDana koTTa
vAdava murida veMkaTagirirAyanaM
thA dEvanannu tOrO
SrIdEviyurada timmayyarAyage pratya
kShadi eNegANe hayavadannana
pAdupadumadANe || 30 ||
Avana nABi kamaladalli puTTida
dEva pitAmahA enisikoMbuvanAgi
jIvarASige ella
I viShNuvige A divijarEnAhareMdu
Ava sarvESaneMdu
nIviTTa piMDavu Ara pAlAhudeMdu
BAvaj~jarella kELi
dEva hayavadananollada vAdige
tAvudisi tAyilla eMbagAde bahudu
sEvisavana jIva || 31 ||
AdikAladalli Aladeleya mEle
SrIdEviyaroDane malagiddAga
A dEvarelliharo
mAdhavanagarige modalAda vidhi
pOdAga pOdarella
AdhAravAda tatvaMgaLellavu a
LidAga aLidarella
vEda EkO nArAyaNA-sIdeMdu pE
Lida kAraNa hayavadanane jagado
Ladhika daivavAda || 32 ||
hoTTeyeMba ponna toTTiloLagiTTu
viThThala jIvara nidregoLisuvanu
sRuShTikAla baMdAga
huTTisi bahurUpadATavanADisi
iShTaMgaLa koDuva
duShTamakkaLa maMDe heTTuva kelavara
kaTTaleyanu biDisa
SiShTarettikoMba hayavadanana pAda
biTTiya kAMbaMte kANade mana
muTTi Bajiso jIva || 33 ||
makkaLa tappugaLa lekkisade tAyi
mikka KaLara tappu ukku taggisuvaLu
pakShivAhana-nommomme
sokki naDedare Bakkutara kAva
nakku kAruNyadali
ukkida rakkasara SikShisade biDa
kShipAmyajasraveMba
akko padava matkarma kRunmat parameMba
uktiyanEneMbe hayavadanana Bajisi
mukti bEkeMbuvaru || 34 ||
eMbattunAlaku lakSha yOnigaLalli
tuMbirda jIvarigIrUpaMgaLe
iMbAda baharUpa
saMBramade nijarUpadiMdeseva
kaMbu cakrAdigaLa
eMbo mAtige saMdEha salla mE
luMba suKavanIva
SaMBu muKya gurugaLiMda kELiro nA
neMbahaMkRutiyiMda hayavadanana pA
dAMbujakeMtEruva || 35 ||
oMde aMbudhi oMde kaDagOlu nENoMde
oMde sAdhana sarva sAdhanaMgaLu sari
muMde pariva daityara
vRuMdakke sudheyilla vRuMdArakariguMTu
eMdu nirNaisitAgi
muMdaNa mukuti yOgyariguMTu itarari
geMdeMdigAgadayya
taMde hayavadananollada vAdige
saMdEha salla bUdiya hOmadaMdadi
eMdeMdigahudayya || 36 ||
kaLLaBaktarige salladu SuBaPala
ella bIjake salladu sallike
elli yOgyateyuMTo
alliye Pala adilladavarigilla
ballabudharu kELiro
ella sAdhanagaLolladavage I
Palla durlaBa kANiro
ballida hayavadana-nollidAgale a
halyeyidda Sile heNNAdavOlu iM
tuLidaddu heNNAyite || 37 ||
enage ninnali Bakti irali illadirali
jana hari BaktaneMdenna kareyalAgi
mana pApakeragadaMte
anudina nInenna kAyabEkAyitu
animitta sujanabaMdhu
kanarisi yamaBaTaru muMde koMdare ninna
Ganatege sAladayya
tannavara hayavadana-nanyarigoppisida
nennuva durvArte tappisiko taMde
munnijana vaMdyapAda || 38 ||
ninnane nODuva ninnane pADuva
ninnane bEDuva ninna koMDADuva
janaroLeMtippudai
kaNNu kukki kiviyoL suNNahoydu Sira
vannu kattarisuva
bannabaDisi gilikiya meTTisuva
Ganna narakada bAdhe
ninna mahimegidu sAke dEvaradEva
ennALda hayavadanna vicAriso
annaMta guNapUrNa || 39 ||
nA ninna maretarU nInenna maretare
hAni ninage ninna Baktavatsalatege
hInate baMditAgi
A “na RutE tvat kriyatE kiMcanArE”yeM
bAmnAya EneMditAgi
nInudAsInanAge KaLara sEne sa
jjanara koMditAgi
SrInAtha hayavadana SiSugaLa tappanu
janani jaredare jagavella naguvudo
jANara jANa nInu || 40 ||
|| SrIkRuShNArpaNamastu ||
Leave a Reply