Composer : Shri Vidyaprasanna Tirtharu
ಹರಿ ಭಕುತಿಯ ಪೊಂದಿಸೆಲೋ
ಕರುಣದಿ ಗಿರಿಜಾರಮಣ [ಪ]
ನರಹರಿಯಲಿ ವರಭಕುತನೆಂದರಿಯರು
ನಿನ್ನ ದುರುಳ ಜನರು [ಅ.ಪ]
ಗಂಗೆಯ ಶಿರದಲಿ ಧರಿಸಿ
ಭುಜಂಗನ ಕೊರಳಲ್ಲಿ ಪೊಂದಿದ
ಮಂಗಳ ವರ ಶೈಲಜೆಯ
ಅಪಾಂಗರಸ ಅನಂಗವೈರಿ [೧]
ಶ್ರೀಹರಿಯಾಜ್ಞೆಯನು ವಹಿಸಿ
ಮೋಹ ಶಾಸ್ತ್ರಗಳನು ರಚಿಸಿ
ಈ ಮಹಿಯೊಳು ದುರುಳರನು
ಮೋಹಿಸಿದ ಮಹಾದೇವ [೨]
ಪನ್ನಗ ಭೂಷಣ ಶಂಕರ
ಷಣ್ಮುಗಪಿತ ಚಂದ್ರಮೌಳಿ
ಸನ್ನುತಿಸುವೆ ನಿನ್ನ ಮನದಿ
ಎನ್ನಲಿ ದಯದಿಂ ಪ್ರಸನ್ನ [೩]
hari Bakutiya poMdiselO
karuNadi girijAramaNa [pa]
narahariyali varaBakutaneMdariyaru
ninna duruLa janaru [a.pa]
gaMgeya Siradali dharisi
BujaMgana koraLalli poMdida
maMgaLa vara Sailajeya
apAMgarasa anaMgavairi [1]
SrIhariyAj~jeyanu vahisi
mOha SAstragaLanu racisi
I mahiyoLu duruLaranu
mOhisida mahAdEva [2]
pannaga BUShaNa SaMkara
ShaNmugapita caMdramauLi
sannutisuve ninna manadi
ennali dayadiM prasanna [3]
Leave a Reply