Composer : Shri Shripadarajaru on Shri Vyasarajaru
ಸಾಸಿರ ಜಿಹ್ವೆಗಳುಳ್ಳ ಶೇಷನೆ ಕೊಂಡಾಡಬೇಕು |
ವ್ಯಾಸಮುನಿರಾಯರ ಸಂನ್ಯಾಸದಿರವ || ಪ ||
ಆಸೆಯಿಂದ ತಮ್ಮುದರ ಪೋಷಣಕಾಗಿ ಛಪ್ಪನ್ನ,
ದೇಶವ ತಿರುಗಿ ಸಂಚಾರ ಮಾಡುತ ||
ಮೀಸಲ ಮಡಿ ಬಚ್ಚಿಟ್ಟು ಮಿಂಚು ಕೂಳನುಂಡು ದಿನ |
ಮೋಸ ಮಾಡಿ ಕಳೆವ ಸನ್ಯಾಸಿಗಳು ಸರಿಯೆ || ೧ ||
ಕೆರೆ ಬಾವಿ ಪುರ ಅಗ್ರಹಾರಂಗಳ ಮಾಡಿ ಭೂ – |
ಸುರರೊಂದು ಲಕ್ಷ ಕುಟುಂಬಗಳ ||
ಪೊರೆವ ವೈಭವ ಕೀರ್ತಿಯಿಂದಲಿ ವ್ಯಾಸ – |
ರಾಯರ ಗುಣಗಣ ಗಾಂಭೀರ್ಯಾದಿಗಳ || ೨ ||
ಹಗಲಿರುಳೆನ್ನದೆ ಆವಾಗ ಶ್ರೀಹರಿ ಪದಪದ್ಮ – |
ಯುಗಳವನರ್ಚಿಸಿ ಭಕುತಿಯಿಂದ ||
ರಘುಪತಿ ಭಜಕ ಬ್ರಹ್ಮಣ್ಯತೀರ್ಥರ ಕುವರ |
ರಂಗವಿಠ್ಠಲನನ್ನು ಬಿಡೆ ಬಿಡೆನು ಎಂಬ || ೩ ||
sAsira jihvegaLuLLa SEShane koMDADabEku |
vyAsamunirAyara saMnyAsadirava || pa ||
AseyiMda tammudara pOShaNakAgi Cappanna,
dESava tirugi saMcAra mADuta ||
mIsala maDi bacciTTu miMcu kULanuMDu dina |
mOsa mADi kaLeva sanyAsigaLu sariye || 1 ||
kere bAvi pura agrahAraMgaLa mADi BU – |
suraroMdu lakSha kuTuMbagaLa ||
poreva vaiBava kIrtiyiMdali vyAsa – |
rAyara guNagaNa gAMBIryAdigaLa || 2 ||
hagaliruLennade AvAga SrIhari padapadma – |
yugaLavanarcisi BakutiyiMda ||
raGupati Bajaka brahmaNyatIrthara kuvara |
raMgaviThThalanannu biDe biDenu eMba || 3 ||

Leave a Reply
You must be logged in to post a comment.