Raghavendra guru pavana

Composer : Shri Vijaya dasaru

Shri Anantharam Kalya

ರಾಘವೇಂದ್ರ ಗುರು ಪಾವನಕಾಯ
ರಾಘವೇಂದ್ರ ಮಂತ್ರಾಲಯ ನಿಲಯ || ಪ ||

ರಾಘವೇಂದ್ರ ದುರಿತೌಘ ಪರಿಹಾರ
ರಾಘವೇಶನ ಪಾದ ವನಜಾರಾಧಕ || ೧ ||

ಶರಣು ಹೊಕ್ಕೆನು ಇಂದುಕಿರಣ ಪೋಲುವ ಚರಣ
ಸ್ಮರಣೆ ಕರುಣಿಸುವುದು ಕರುಣದಿಂದ ಗುರು || ೨ ||

ಸಿರಿವರ ವಿಜಯವಿಠ್ಠಲ ಪರನೆಂದು
ಸ್ಥಿರವಾಗಿ ಸ್ಥಾಪಿಸಿ ಮೆರೆದ ನಿರ್ಮಲಕಾಯ || ೩ ||


rAGavEMdra guru pAvanakAya
rAGavEMdra maMtrAlaya nilaya || pa ||

rAGavEMdra duritauGa parihAra
rAGavESana pAda vanajArAdhaka || 1 ||

SaraNu hokkenu iMdukiraNa pOluva caraNa
smaraNe karuNisuvudu karuNadiMda guru || 2 ||

sirivara vijayaviThThala paraneMdu
sthiravAgi sthApisi mereda nirmalakAya || 3 ||

Leave a Reply

You might also like

error: Content is protected !!