Composer : Shri Gurujagannatha dasaru
ವೃಂದಾವನದಲಿ ನಿಂತ ಸುಯತಿವರನ್ಯಾರೇ ಪೇಳಮ್ಮಯ್ಯ (ಪ)
ವಂದಿಪ ಜನರಿಗೆ ನಂದ ಕೊಡುವೊ ರಾಘ-
ವೇಂದ್ರ ಮುನಿವರನೀತ ನೋಡಮ್ಮ (ಅ.ಪ)
ಇಂದಿರೆ ರಮಣನ ಛಂದದಿ ಭಜಿಸ್ಯಾ-
ನಂದದಲಿಹನ್ಯಾರೇ ಪೇಳಮ್ಮಯ್ಯಾ,
ನಂದತೀರ್ಥ ಮತ ಸಿಂಧು ವರಕೆ ಬಾಲ-
ಚಂದಿರನೆನಿಸಿಹನ್ಯಾರೇ ಪೇಳಮ್ಮಯ್ಯ,
ಮಂದ ಜನವ ಹರಿ ಕಂದು ಗೊರಳರ
ವೃಂದದಿ ಶೋಬಿಪನ್ಯಾರೆ ಪೇಳಮ್ಮಯ್ಯ,
ಹಿಂದೆ ವ್ಯಾಸಮುನಿ ಎಂದು ಕರೆಸಿದ ರಾಘ –
ವೇಂದ್ರ ಗುರುವರ-ನೀತ ನೋಡಮ್ಮ (೧)
ನತಿಸುವ ಜನರಿಗೆ ಸತಿ ಸುತರನು ಬಲು
ಹಿತದಲಿ ನೀಡುವನ್ಯಾರೇ ಪೇಳಮ್ಮಯ್ಯ,
ಪ್ರತಿದಿನ ತನ್ನನು ಮತಿ ಪೂರ್ವಕ ಬಲು
ತುತಿಪರ ಪಾಲಿಪನ್ಯಾರೇ ಪೇಳಮ್ಮಯ್ಯ,
ಮತಿಯುತ ಪಂಡಿತ ತತಿಯಭಿಲಾಷವ
ಸತತ ಪೂರ್ತಿಪನ್ಯಾರೇ ಪೇಳಮ್ಮಯ್ಯ,
ಕ್ಷಿತಿ ಸುರರಿಗೆ ಸದ್-ಗತಿ ದಾಯಕ ಮಹ
ಯತಿಕುಲವರ ಗುರುರಾಯ ಕಾಣಮ್ಮ (೨)
ಮಾತೆಯು ಸುತರಲಿ ಪ್ರೀತಿಗೊಳಿಸುವ
ತಾತನ – ತೆರದಿಹನ್ಯಾರೇ ಪೇಳಮ್ಮಯ್ಯ,
ಪ್ರೇತನಾಥ ಮಹ ಭೂತ ಗಣಗಳ
ಭೀತಿಯ ಬಿಡಿಸುವನ್ಯಾರೆ ಪೇಳಮ್ಮಯ್ಯ,
ಭೂತಳ ಜನಕೃತ ಪಾತಕ ಕಾನನ
ವೀತಿಹೋತ್ರ ತೆರನ್ಯಾರೇ ಪೇಳಮ್ಮಯ್ಯ,
ದಾತ ಗುರು ಜಗನ್ನಾಥವಿಠಲ ನಿಜ
ದೂತ ಜನಕ ಮಹದಾತನೀತಮ್ಮ (೩)
vRuMdAvanadali niMta suyativaranyArE pELammayya (pa)
vaMdipa janarige naMda koDuvo rAgha-
vEMdra munivaranIta nODamma (a.pa)
iMdire ramaNana CaMdadi BajisyA-
naMdadalihanyArE pELammayyA,
naMdatIrtha mata siMdhu varake bAla-
caMdiranenisihanyArE pELammayya,
maMda janava hari kaMdu goraLara
vRuMdadi SObipanyAre pELammayya,
hiMde vyAsamuni eMdu karesida rAGa –
vEMdra guruvara-nIta nODamma (1)
natisuva janarige sati sutaranu balu
hitadali nIDuvanyArE pELammayya,
pratidina tannanu mati pUrvaka balu
tutipara pAlipanyArE pELammayya,
matiyuta paMDita tatiyaBilAShava
satata pUrtipanyArE pELammayya,
kShiti surarige sad-gati dAyaka maha
yatikulavara gururAya kANamma (2)
mAteyu sutarali prItigoLisuva
tAtana – teradihanyArE pELammayya,
prEtanAtha maha BUta gaNagaLa
BItiya biDisuvanyAre pELammayya,
BUtaLa janakRuta pAtaka kAnana
vItihOtra teranyArE pELammayya,
dAta guru jagannAthaviThala nija
dUta janaka mahadAtanItamma (3)

Leave a Reply
You must be logged in to post a comment.