Composer: Shri Jagannatha dasaru
ವಿಠಲಯ್ಯ ವಿಠಲಯ್ಯ [ಪ]
ತಟಿತ್ಕೋಟಿ ನಿಭ ಕಾಯ ಜಗನ್ನಾಥ ವಿಠಲಯ್ಯಾ [ಅ.ಪ]
ಭಜಿಸುವೆ ನಿನ್ನನು ಅಜಭವ ಸುರನುತ
ಭಜಕಾಮರತರು ಕುಜನ ಕುಠಾರಾ [೧]
ನೀ ಕರುಣಿಸದೆ ನಿರಾಕರಿಸಲು ಎನ್ನ
ಸಾಕುವರಾರು ದಯಾಕರ ಮೂರುತಿ [೨]
ಶರಣಾಗತರನು ಪೊರೆವನೆಂಬ ತವ
ಬಿರಿದು ಕಾಯೋ ಕರಿವರದ ಜಗನ್ನಾಥ [೩]
viThalayya viThalayya [pa]
taTitkOTi niBa kAya jagannAtha viThalayyA [a.pa]
Bajisuve ninnanu ajaBava suranuta
BajakAmarataru kujana kuThArA [1]
nI karuNisade nirAkarisalu enna
sAkuvarAru dayAkara mUruti [2]
SaraNAgataranu porevaneMba tava
biridu kAyO karivarada jagannAtha [3]

Leave a Reply
You must be logged in to post a comment.