Idiradavanu Ninage Vyasaraya

Composer: Shri Shripadarajaru

By Smt.Nandini Sripad

ರಾಗ: ಶ್ರೀರಾಗ , ಆದಿತಾಳ

ಇದಿರದಾವನು ನಿನಗೆ ವ್ಯಾಸರಾಯಾ ॥ ಪ ॥
ಈ ಧರೆಯೊಳಗೆ ಸರಿಗಾಣೆ ಯತಿರಾಯಾ ॥ ಅ ಪ ॥

ವಾದಿತಿಮಿರ ಮಾರ್ತಾಂಡನೆಂದೆನಿಸಿದೆ ।
ವಾದಿಶರಭ ಭೇರುಂಡ ವ್ಯಾಸರಾಯಾ ॥ 1 ॥

ಯತಿಗಳೊಳು ನಿನ್ನಂಥವರುಗಳನ್ನು ।
ಪ್ರತಿಗಾಣೆನು ಈ ಕ್ಷಿತಿಯೊಳಗೆ ಯತಿರಾಯಾ ॥ 2 ॥

ಹಮ್ಮನಳಿದು ಸಿರಿಪತಿ ರಂಗವಿಠ್ಠಲನ ।
ಸುಮ್ಮನದಲಿ ಭಜಿಪ ವ್ಯಾಸಮುನಿರಾಯಾ ॥ 3 ॥


rAga: SrIrAga, AditALa

idiradAvanu ninage vyAsarAyA || pa ||
I dhareyoLage sarigANe yatirAyA || a pa ||

vAditimira mArtAMDaneMdeniside |
vAdiSaraBa BEruMDa vyAsarAyA || 1 ||

yatigaLoLu ninnaMthavarugaLannu |
pratigANenu I kShitiyoLage yatirAyA || 2 ||

hammanaLidu siripati raMgaviThThalana |
summanadali Bajipa vyAsamunirAyA || 3 ||

Leave a Reply

Your email address will not be published. Required fields are marked *

You might also like

error: Content is protected !!