Guru Vadiraja ravikoti

Composer: Shri Vijaya dasaru

Smt.Nandini Sripad

ರಾಗ: ಪೂರ್ವಿಕಲ್ಯಾಣಿ , ಆದಿತಾಳ

ಗುರು ವಾದಿರಾಜ ರವಿಕೋಟಿ ತೇಜಾ |
ಶರಣೆಂಬೆನಯ್ಯಾ ಸತತಗೇಯಾ || ಪ ||

ನಂಬಿದೆನು ನಿನ್ನ ದಯ ಸಂಪನ್ನ |
ಸಂಭ್ರಮದಲ್ಲೆನ್ನ ಪೊರೆಯೊ ಪ್ರಸನ್ನ || ೧ ||

ವೇದಶಾಸ್ತ್ರ ಬಲ್ಲ ಭಳಿರೆ ಮಲ್ಲ |
ಭೇದ ಜ್ಞಾನವೆ ಎಂಬೊ ನಿಜವೆಂಬ ಫಲ್ಲಾ || ೨ ||

ಮಾಯಿಗಳ ವದ್ದ ಮಮತಾ ಗೆದ್ದ |
ಗಾಯನ ಪ್ರಸಿದ್ಧ ಗುಣದಲಿ ಇದ್ದ || ೩ ||

ನಾನಾ ಚಾರಿತ್ರ ತೋರಿದ ಮಿತ್ರ |
ಧೇನಿಸಿ ಸಿರಿ ಹರಿಯ ಗಾತ್ರದೊಳಿಟ್ಟ ಪಾತ್ರ || ೪ ||

ಸಂತತ ವಿರಕ್ತ ಜೀವನ ಮುಕ್ತಾ |
ಸಂತಾರಿ ಸುಶಕ್ತಾ ಹರಿನಾಮ ಭೋಕ್ತಾ || ೫ ||

ಸ್ವಾದಿಪುರವಾಸ ಸಾಧುಗುಣ ಭಾಸಾ |
ಸದ್ಭಕುತ ಪೋಪ ಮಧ್ವಮುನಿಯ ದಾಸಾ || ೬ ||

ವಿಜಯವಿಠ್ಠಲನ್ನ ನೆನೆಸುವ ಘನ್ನ ಹರಿ |
ತ್ರಿಜಗ ಹಯವದನನ್ನ ಪರನೆಂಬೊ ಪೂರ್ಣಾ || ೭ ||


rAga: pUrvikalyANi , AditALa
guru vAdirAja ravikOTi tEjA |
SaraNeMbenayyA satatagEyA || pa ||

naMbidenu ninna daya saMpanna |
saMBramadallenna poreyo prasanna || 1 ||

vEdaSAstra balla BaLire malla |
BEda j~jAnave eMbo nijaveMba PallA || 2 ||

mAyigaLa vadda mamatA gedda |
gAyana prasiddha guNadali idda || 3 ||

nAnA cAritra tOrida mitra |
dhEnisi siri hariya gAtradoLiTTa pAtra || 4 ||

saMtata virakta jIvana muktA |
saMtAri suSaktA harinAma BOktA || 5 ||

svAdipuravAsa sAdhuguNa BAsA |
sadBakuta pOpa madhvamuniya dAsA || 6 ||

vijayaviThThalanna nenesuva Ganna hari |
trijaga hayavadananna paraneMbo pUrNA || 7 ||

Leave a Reply

Your email address will not be published. Required fields are marked *

You might also like

error: Content is protected !!