-
Smarisi beduvenu
Composer : Shri Jagannatha dasaru ಸ್ಮರಿಸಿ ಬೇಡುವೆನು ನಾ ಹೇ ಗುರುಸಾರ್ವಭೌಮಾ [ಪ]ನಿರುತ ನೀ ಪೊರೆಯನ್ನ ವಾದಿ ಗಜಸಿಂಹ [ಅ.ಪ] ದಿತಿ ಸುತಗೆ ಸುತನೆನಿಸಿ ಅತಿಮುದದಿ ಸುರಮುನಿಯಮತ ಹಿಡಿದು ಹರಿಯ ಮಹಿಮೆ ಪಿತಗೆ ಪೇಳಿಖತಿಗೊಂಡು ನಿನ್ನ ಮೂರುತಿ ತೋರೆನಲು ಶ್ರೀಪತಿಯ ಸ್ತಂಭದಿ ಕರೆದ ಪ್ರಲ್ಹಾದರಾಜ [ ೧ ] ಬಾಲ್ಯದಲಿ ಯತಿಯಾಗಿ ಲೀಲೆಯಿಂದಲಿ ಭೂಮಿಪಾಲಗೊದಗಿರ್ದ ಕುಹಯೋಗ ಬಿಡಿಸಿಖೂಳ ಮಾಯ್ಗಳ ಜಯಿಸಿ ಚಂದ್ರಿಕಾ ಗ್ರಂಥವನುಪೇಳಿ ಹರಿಪೀಠವೇರಿದ ವ್ಯಾಸರಾಜ [ ೨ ] ಕಾಮರಿಪುನುತ ಮೂಲರಾಮ ಪದಯುಗ ಕುಮುದಸೋಮನೆನಿಸುವ…
