-
Prana Devara Upanishat Mahima Suladi – Vijayadasaru
ಶ್ರೀ ವಿಜಯದಾಸಾರ್ಯ ವಿರಚಿತಶ್ರೀ ಪ್ರಾಣದೇವರ ಕೇನ ಷಟ್ಪ್ರಶ್ನೋಪನಿಷತ್ಮಹಿಮಾ ಸ್ತೋತ್ರ ಸುಳಾದಿರಾಗ: ಆನಂದಭೈರವಿಧ್ರುವತಾಳ ಪ್ರಾಣ ಅಪಾನ ವ್ಯಾನ ಸಮಾನ ಉದಾನಜ್ಞಾನಮಯ ಸತ್ವಶರೀರ ಸಮೀರಆನಂದಸಾಂದ್ರ ಹರಿನಂದನ ಪವಮಾನಮಾನದಭಿಮಾನಿಯೆ ವಾಣಿಪ್ರಿಯನೀನೆ ಸರ್ವರಲ್ಲಿ ಗೀರ್ವಾಣರಿಗೆ ಮೊದಲುನಾನಾ ಪ್ರಕಾರ ಜೀವಿಗಳಾಧಾರಸ್ನಾನ ಜಪ ತಪ ಹೋಮ ಮೌನ ತೀರ್ಥಯಾತ್ರೆನೀ ನಡೆಸಲದರಿಂದ ಸಿದ್ಧಿಪವುನೀನೆಲ್ಲಿ ಅಲ್ಲಿ ಶ್ರೀ ನಾರಾಯಣನು ಇಪ್ಪಏನೆಂಬೆ ನಿನ್ನಯ ಕರ್ತೃತನಕೆಕೋಣಿ ವಿಕೋಣಿಯಲ್ಲಿ ಸರ್ವ ವ್ಯಾಪಾರ ಪಂಚ –ಪ್ರಾಣಜನಕ ವಾಯು ನಿನ್ನದಯ್ಯಾದಾನವಾಮರರ ಮಧ್ಯ ಬಂದು ಆ ಘೋರ ವಿಷ –ಪಾನವನ್ನು ಮಾಡಿದ ಪ್ರಭಂಜನದೀನವತ್ಸಲ ನಮ್ಮ ವಿಜಯವಿಠ್ಠಲ ನಂಘ್ರಿ…
