-
Onde Namavu Salade
Composer : Shri Purandara dasaru ಒಂದೇ ನಾಮವು ಸಾಲದೆ ಶ್ರೀ ಹರಿಯೆಂಬಒಂದೇ ನಾಮವು ಸಾಲದೆ [ಪ]ಒಂದೇ ನಾಮವು ಭವಬಂಧನ ಬಿಡಿಸುವುದೆಂದುವೇದಂಗಳು ಆನಂದದಿ ಸ್ತುತಿಸುವ [ಅ.ಪ] ಉಭಯ ರಾಯರು ಸೇರಿ ಮುದದಿ ಲೆತ್ತವನಾಡಿಸಭೆಯೊಳು ಧರ್ಮಜ ಸತಿಯ ಸೋಲೆನಭಕೆ ಕೈಯೆತ್ತಿ ದ್ರೌಪದಿ ಕೃಷ್ಣಾ ಎನಲುಇಭರಾಜ ಗಮನಗಕ್ಷಯ ವಸ್ತ್ರವನಿತ್ತ [೧] ಹಿಂದೊಬ್ಬ ಋಷಿ ಪುತ್ರನಂದು ದಾಸಿಯ ಕೂಡೆಸಂದೇಹವಿಲ್ಲದೆ ಹಲವು ಕಾಲದಂದುಗದೊಳು ಸಿಲುಕಿ ನಿಂದಂತ್ಯ ಕಾಲದಿಕಂದ ನಾರಗನೆಂದು ಕರೆಯಲಭಯವಿತ್ತ [೨] ಕಾಶಿಯ ಪುರದೊಳಗೆ ಈಶ ಭಕುತಿಯಿಂದಸಾಸಿರ ನಾಮದ ರಾಮನೆಂಬಶ್ರೀಶನ ನಾಮವ ಉಪದೇಶ…
