-
Neela Ghana leela jo jo
Composer : Shri Sripadarajaru ನೀಲ ಘನ ಲೀಲ ಜೋ ಜೋ, ಕರುಣಾಲವಾಲಶ್ರೀ ಕೃಷ್ಣ ಜೋ ಜೋಲೀಲಾವತಾರ ಜೋ ಜೋ, ಪರಮಾತ್ಮಬಾಲ ಗೋಪಾಲ ಜೋ ಜೋ |ಪ| ಇಂದುಧರ ಮಿತ್ರ ಜೋ ಜೋ, ಪರಮಾತ್ಮ,ಇಂದುರವಿ ನೇತ್ರ ಜೋ ಜೋಇಂದುಕುಲ ರತ್ನ ಜೋ ಜೋ, ಪರಮಾತ್ಮ,ಇಂದಿರಾರಮಣ ಜೋ ಜೋ |ಅ.ಪ| ಆಶ್ಚರ್ಯ ಜನಕವಾಗಿ, ನಿರ್ಮಿಸಿದ,ಪಚ್ಚೆಯಾ ತೊಟ್ಟಿಲಲ್ಲಿಅಚ್ಯುತಾನಂತನಿರಲು, ತೂಗಿದರು,ಮತ್ಸ್ಯಾವತಾರ ಹರಿಯ |೧| ಧರ್ಮ ಸಂಸ್ಥಾಪನೆಂದು, ನಿರವಧಿಕ,ನಿರ್ಮಲಚರಿತನೆಂದುವರ್ಮ ಕರ್ಮಗಳ ತಿಳಿದು, ತೂಗಿದರು,ಕೂರ್ಮಾವತಾರ ಹರಿಯ |೨| ಸರಸಿಜಾಕ್ಷಿಯರು ಎಲ್ಲ, ಜನವಶ್ಯಕರದಿವ್ಯ ರೂಪನೆಂದುಪರಮ ಹರ್ಷದಿ…
