-
Mangalavarada Suladi – Sheshadasaru
Raga: Bhageeshree ಮೊದಲಕಲ್ಲು ಶ್ರೀ ಶೇಷದಾಸಾರ್ಯ ವಿರಚಿತ (ಗುರುವಿಜಯವಿಠ್ಠಲ ಅಂಕಿತ )ಮಂಗಳವಾರದ ಸುಳಾದಿರಾಗ: ಬಾಗೇಶ್ರೀ ಧ್ರುವತಾಳ ಮಿತ್ರನು ಎಂದು ನಿನ್ನ ಮನದಿ ನಂಬಿದದಕ್ಕೆಉತ್ತಮ ಉಪಕಾರ ಮಾಡಿದೆಯ್ಯಾಶತ್ರುಗಳಂತೆ ನಿಂದು ಬಹಿರಂತರಂಗದಲ್ಲಿಕತ್ತಲೆ ಚರರಿಗೆ ಸಹಾಯನಾಗಿನಿತ್ಯ ದುಃಖಗಳುಣಿಸಿ ಎಷ್ಟು ಕೂಗಿದರುನೇತ್ರದಿ ನೋಡದಲೆ ಇರುವ ಬಗೆಯೋಮಿತ್ರರ ಲಕ್ಷಣವೆ ಅಥವಾ ಶತ್ರುತ್ವದ ಸೊಬಗೆಎತ್ತಣದೊ ಇದನು ತೋರದೆನಗೆಕರ್ತೃ ನಿನ್ನಲ್ಲಿ ದೋಷ ಎಂದೆಂದು ಕೂಡದಾಗಿನಿಸ್ತ್ರೈಗುಣ್ಯನೆಂದು ಶ್ರುತಿ ಸಾರಿತು ಸ –ರ್ವತ್ರ ಸಮನಾದ ಹರಿ ನೀನು ಜೀವ ಕಾಲ ಪ್ರ –ಕೃತಿ ಅನುಸರಿಸಿ ಸುಖ ದುಃಖಹೊತ್ತು ಹೊತ್ತಿಗೆ ತಂದು ತುತ್ತು ಮಾಡಿ…
