-
Dayadi Paliso Jayatirtha
Composer : Shri Keshava vittala ರಾಗ : ಶಂಕರಾಭರಣ, ಖಂಡಛಾಪುತಾಳದಯದಿ ಪಾಲಿಸೋ ಜಯತೀರಥರಾಯಾ ।ಅಕ್ಷೋಭ್ಯರ ತನಯ ॥ ಪ ॥ ಅತ್ಯಂತ್ಹರುಷದಿ ಎತ್ತಾಗಿರುತಿರಲು । ಆನಂದತೀರ್ಥರು ।ನಿತ್ಯಪಠಿಸುವ ಪುಸ್ತಕ ಹೊರುತಿರಲು । ಗುರುರಾಯರು ಪೇಳಿದ ।ತತ್ವಗ್ರಂಥವನೆ ಕಿವಿಯಲಿ ಕೇಳುತಲಿ । ತಲೆಯ ತೂಗುತಲಿ ।ಮತ್ತೆ ಪುಟ್ಟಿದ್ಯೊ ಮಂಗಳವೇಡೆಯಲಿ । ಅತಿಮತಿವಂತರಲಿ ॥ 1 ॥ ದೇಶಪಾಂಡೆಯರ ಕೂಸಾಗಿ ಜನಿಸಿ । ಘನ ರಾವುತನೆನಿಸಿ ।ದೇಶದೇಶದೊಳ್ ಸೈನ್ಯವನೆ ಚರಿಸಿ । ಧನವನ್ನೆ ಗಳಿಸಿ ।ವಾಸುಕಿಯೆಂಬೋ ಗುರುತನೆ ತಪ್ಪಿಸಿ…
